Updated on: Aug 16, 2021 | 10:24 AM
ಹಾಸನದಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಈಗಾಗಲೇ ಹೈರಾಣಾಗಿದ್ದಾರೆ. ಬೆಳೆದ ಬೆಳೆ ಕಾಡಾನೆಗಳ ಪಾಲುಗುತ್ತಿದೆ ಅಂತ ರೈತರಿಗೆ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ.
ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಇನ್ನು ನಿಂತಿಲ್ಲ. ಮನೆ ಸಮೀಪವೇ ಬಂದು ಒಂಟಿ ಸಲಗ ದಾಂಧಲೆ ನಡೆಸಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ವಿರೂಪಾಕ್ಷ ಎಂಬುವವರ ಮನೆ ಮುಂದೆ ಕಾಡಾನೆಯೊಂದು ಬಂದು ದಾಂಧಲೆ ಮಾಡಿದೆ.
ಮನೆಯ ಕಾಂಪೌಂಡ್ ಬಳಿ ಬಂದು ಒಂಟಿ ಆನೆ ಜನರನ್ನ ಅಟ್ಟಾಡಿಸಿದೆ. ಆನೆ ಮನೆ ಹತ್ತಿರ ಬರುತ್ತಿದ್ದಂತೆ ಅಲ್ಲಿಂದ ಜನ ಓಡಿದ್ದಾರೆ.
ಅತ್ತಿಂದಿತ್ತ ಓಡಾಡುತ್ತ ಕಾಂಪೌಂಡ್ ಒಳಗೆ ನುಗ್ಗಲು ಯತ್ನಿಸಿದ ಆನೆಯನ್ನು ಕಂಡು ಅಲ್ಲಿದ್ದ ಜನರಿಗೆ ಭಯ ಶುರುವಾಗಿತ್ತು. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಗೆ ಜನರು ಬೇಸತ್ತು ಹೋಗಿದ್ದಾರೆ. ನಿತ್ಯ ಆತಂಕದಲ್ಲಿ ಜನ ದಿನ ದೂಡುತ್ತಿದ್ದಾರೆ.
ನಿತ್ಯವೂ ಊರು ಕಾಫಿ ತೋಟಗಳಿಗೆ ಕಾಡಾನೆಗಳ ಲಗ್ಗೆ ಇಡುತ್ತಿವೆ. ಒಬ್ಬೊಬ್ಬರಿಗೆ ಓಡಾಡುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಕಾಡಾನೆ ಹಾವಳಿ ತಡೆಯಲು ಜನರು ಆಗ್ರಹಿಸುತ್ತಿದ್ದಾರೆ.