- Kannada News Photo gallery Tokyo olympics 2020 21 photos Tokyo Olympics PM Narendra Modi Fulfills His Promise of Ice Cream with Badminton star PV Sindhu
PHOTOS: ಕೊಟ್ಟ ಮಾತು ಉಳಿಸಿಕೊಂಡ ಮೋದಿ: ಪಿವಿ ಸಿಂಧೂ ಜೊತೆ ಐಸ್ ಕ್ರೀಂ ಸವಿದ ಪ್ರಧಾನಿ
PV Sindhu: ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧೂ ಜೊತೆಗೆ ಪ್ರಧಾನಿ ಮೋದಿ ಐಸ್ ಕ್ರೀಂ ಸೇವಿಸಿದ್ದಾರೆ. ತಮ್ಮ ನಿವಾಸದಲ್ಲಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಡ ಏರ್ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಪಿ.ವಿ. ಸಿಂಧೂ ಜೊತೆಗೆ ಐಸ್ಕ್ರೀಂ ಸೇವಿಸಿದ್ದಾರೆ.
Updated on: Aug 16, 2021 | 1:49 PM

ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ (Tokyo Olympics) ಕ್ರೀಡಾಕೂಟದಿಂದ ವಾಪಾಸ್ ಬಂದ ಬಳಿಕ ನಿಮ್ಮ ಜೊತೆ ಐಸ್ ಕ್ರೀಂ ತಿನ್ನುವುದಾಗಿ ಪಿ.ವಿ. ಸಿಂಧೂಗೆ (PV Sindhu) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮಾತುಕೊಟ್ಟಿದ್ದರು. ಆ ಮಾತನ್ನು ಮೋದಿ ಉಳಿಸಿಕೊಂಡಿದ್ದಾರೆ.

ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧೂ ಜೊತೆಗೆ ಪ್ರಧಾನಿ ಮೋದಿ ಐಸ್ ಕ್ರೀಂ ಸೇವಿಸಿದ್ದಾರೆ. ತಮ್ಮ ನಿವಾಸದಲ್ಲಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಡ ಏರ್ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಪಿ.ವಿ. ಸಿಂಧೂ ಜೊತೆಗೆ ಐಸ್ಕ್ರೀಂ ಸೇವಿಸಿದ್ದಾರೆ.

ಇನ್ನೂ ಚಿನ್ನದ ಪದಕ ವಿಜೇತರಾದ ನೀರಜ್ ಚೋಪ್ರಾ ಅವರೊಂದಿಗೆ ವಿಶೇಷ ಮಾತುಕತೆ ನಡೆಸಿದ್ದಾರೆ.

ನೀರಜ್ ಚೋಪ್ರಾ ಫೇವರೆಟ್ ಚೂರ್ಮಾ ಮಾಡಿಸಿ ಊಟ ಕೂಡ ಮಾಡಿದ್ದಾರೆ.

ಭಾರತದ ಕುಸ್ತಿಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ.

ಭಾರತ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಜೊತೆ ಮೋದಿ ಮಾತುಕತೆ ನಡೆಸಿದರು.

ಭಾರತ ಹಾಕಿ ತಂಡದ ಎಲ್ಲ ಆಟಗಾರರ ಜೊತೆ ನರೇಂದ್ರ ಮೋದಿ.
