AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಮನುಷ್ಯ ಯಾಕಿಷ್ಟು ಕ್ರೂರಿ? ಪಂಜರದಲ್ಲಿ ಬಂಧಿಯಾಗಿದ್ದ ಕಂದನನ್ನು ರಕ್ಷಿಸಲು ತಾಯಿ ಕೋತಿ ಪಟ್ಟ ಪಾಡು ನೋಡಿ 

ತಾಯಿ ಪ್ರೀತಿಯ ಮುಂದೆ ಎಲ್ಲವೂ ಶೂನ್ಯ.  ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಸಹ ಅವುಗಳ ಮರಿಗಳನ್ನು ಅಷ್ಟೇ ಪ್ರೀತಿಸುತ್ತವೆ. ಇಂತಹ ತಾಯಿ ಮಗುವಿನ ಬಾಂಧವ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ  ಆಗಾಗ್ಗೆ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಹೃದಯಸ್ಪರ್ಶಿ ವಿಡಿಯೋ  ವೈರಲ್ ಆಗಿದೆ. ತಾಯಿ ಕೋತಿಯೊಂದು ಪಂಜರದೊಳಗೆ ಬಂಧಿಯಾಗಿದ್ದ ತನ್ನ ಮರಿಕೋತಿಯನ್ನು ರಕ್ಷಿಸಲು ದೊಡ್ಡ ಸಾಹಸವನ್ನೇ ಮಾಡಿದೆ.  ಈ ತಾಯಿ ಕೋತಿಯ ನಿಷ್ಕಲ್ಮಶ ಪ್ರೀತಿಯನ್ನು ಕಂಡು ಹಲವರು ಭಾವುಕರಾಗಿದ್ದಾರೆ.

Viral Video: ಈ ಮನುಷ್ಯ ಯಾಕಿಷ್ಟು ಕ್ರೂರಿ? ಪಂಜರದಲ್ಲಿ ಬಂಧಿಯಾಗಿದ್ದ ಕಂದನನ್ನು ರಕ್ಷಿಸಲು ತಾಯಿ ಕೋತಿ ಪಟ್ಟ ಪಾಡು ನೋಡಿ 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Dec 20, 2023 | 4:19 PM

Share

ಈ ಜಗತ್ತಿನಲ್ಲಿ ತಾಯಿ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲ.  ಯಾವುದೇ ಸ್ವಾರ್ಥವಿಲ್ಲದೆ ನಿಷ್ಕಲ್ಮಶ ಪ್ರೀತಿಯನ್ನು ತೋರುವ ಜೀವವವೊಂದಿದೆಯೆಂದರೆ ಅದು ತಾಯಿ ಮಾತ್ರ. ಕೇವಲ ಮನುಷ್ಯರು ಮಾತ್ರವಲ್ಲ,  ಪ್ರಾಣಿಗಳು ಸಹ ತಮ್ಮ ಮರಿಗಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತವೆ, ಜೋಪಾನವಾಗಿ ನೋಡಿಕೊಳ್ಳುತ್ತವೆ. ಅಲ್ಲದೆ ವೈರಿಗಳ ದಾಳಿಯಿಂದ ತಮ್ಮ ಮರಿಗಳನ್ನು ರಕ್ಷಿಸಲು ಈ ಪ್ರಾಣಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತವೆ.  ಪ್ರಾಣಿ ಸಾಮ್ರಾಜ್ಯದ ಇಂತಹ ಹಲವಾರು ಹೃದಯಸ್ಪರ್ಶಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ  ಆಗಾಗ್ಗೆ ಹರಿದಾಡುತ್ತಿರುತ್ತವೆ. ಈಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿತ್ತು, ಪಂಜರದೊಳಗೆ ಬಂಧಿಯಾಗಿದ್ದ ಮರಿಕೋತಿಯನ್ನು, ತಾಯಿ ಕೋತಿ ತನ್ನ ಧೈರ್ಯ ಮತ್ತು ಸಾಹಸದಿಂದ  ಬಿಡಿಸಿಕೊಂಡು ತನ್ನ ಮಗುವಿನ ರಕ್ಷಣೆಯನ್ನು ಮಾಡಿದೆ. ಈ ವಿಡಿಯೋವನ್ನು ನೋಡಿದ ಅನೇಕರು ತಾಯಿ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ ಎಂದು ಭಾವುಕರಾಗಿದ್ದಾರೆ.

@gunsnrosesgirl13 ಈ ವಿಡಿಯೋವನ್ನು ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು,  ಪಂಜರದೊಳಗೆ ಬಂಧಿಯಾಗಿದ್ದ ಕೋತಿ ಮರಿಯನ್ನು, ತಾಯಿಕೋತಿ ತನ್ನ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ  ಪಂಜರದಿಂದ ಬಿಡಿಸಿ ರಕ್ಷಣೆ ಮಾಡುವಂತಹ  ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.

ವೈರಲ್​ ವಿಡಿಯೋ ಇಲ್ಲಿದೆ:

20 ಸೆಕೆಂಡುಗಳ ಈ ವಿಡಿಯೋದಲ್ಲಿ  ಒಬ್ಬ ವ್ಯಕ್ತಿ ಪುಟ್ಟ ಕೋತಿಮರಿಯನ್ನು ಪಂಜರದೊಳಗೆ ಬಂಧಿಸಿರುತ್ತಾನೆ.  ಅಲ್ಲಿ ಹಲವಾರು ಕೋತಿಗಳಿದ್ದರೂ, ಈ ಮರಿಯನ್ನು ಯಾರಿದಂಲೂ ರಕ್ಷಿಸಲು ಸಾಧ್ಯವಾಗಲಿಲ್ಲ, ಹೀಗೆ ಸುಮ್ಮನೆ ಮನುಷ್ಯರಿಗೆ ಹೆದರಿಕೊಂಡು ನಿಂತರೆ ನನ್ನ ಮಗುವನ್ನು ನಾನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಭಾವಿಸಿದ ತಾಯಿ ಕೋತಿ, ಧೈರ್ಯವಾಗಿ ಮುನ್ನುಗ್ಗಿ, ಮರಿ ಕೋತಿಯನ್ನು ಬಂಧಿಸಿದ್ದ, ಪಂಜರವನ್ನೇ ಎತ್ತಿಕೊಂಡು ಬಂದು, ಪಂಜರದಿಂದ ಮರಿಯನ್ನು ಬಿಡಿಸಿಕೊಂಡು, ದೇವ್ರೇ ನನ್ನ ಮಗು ಕೊನೆಗೂ ನನ್ನ ಮಡಿಲು ಸೇರಿತಲ್ವಾ ಎಂದು ನಿಟ್ಟುಸಿರು ಬಿಡುತ್ತಾ  ಮರಿ ಕೋತಿಯನ್ನು ಮಡಿಲಲ್ಲಿ ಮಲಗಿಸಿ ಮುದ್ದಾಡುವ  ಹೃದಯಸ್ಪರ್ಶಿ ದೃಶ್ಯವನ್ನು  ಕಾಣಬಹುದು.

ಇದನ್ನೂ ಓದಿ: ಭಾರೀ ಸುದ್ದಿಯಾಗಿದ್ದ ಲವ್ ಗುರು ಮಾತುಕನಾಥ್ – ಜೂಲಿ ಲವ್ ಸ್ಟೋರಿ, ಈಗ ಬ್ರೇಕಪ್​​​ ಮಾಡಿಕೊಂಡಿದ್ದು ಏಕೆ? 

ಡಿಸೆಂಬರ್ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 15.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಲೈಕ್ಸ್ಗಳನ್ನು ಪಡೆದುಕೊಂಡಿದೆ.  ಒಬ್ಬ ಬಳಕದಾರರು ʼತಾಯಿ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲʼ ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು ʼತಾಯಿ ಮತು ಮಗುವನ್ನು ಯಾರಿಂದಲೂ ದೂರಮಾಡಲು ಸಾಧ್ಯವಿಲ್ಲ. ಆ ಕೋತಿ ಮರಿಯನ್ನು ಪಂಜರದೊಳಗೆ ಬಂಧಿಸಿದ ವ್ಯಕ್ತಿಯನ್ನು ಜೈಲಿಗೆ ಹಾಕಬೇಕುʼ ಎಂದು ಹೇಳಿದ್ದಾರೆ.  ಇನ್ನೂ ಅನೇಕರು ಈ ತಾಯಿಯ ನಿಷ್ಕಲ್ಮಶ ಪ್ರೀತಿಯನ್ನು ಕಂಡು ಭಾವುಕರಾಗಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ