Viral: ಭಾರೀ ಸುದ್ದಿಯಾಗಿದ್ದ ಲವ್ ಗುರು ಮಾತುಕನಾಥ್ – ಜೂಲಿ ಲವ್ ಸ್ಟೋರಿ, ಈಗ ಬ್ರೇಕಪ್​​​ ಮಾಡಿಕೊಂಡಿದ್ದು ಏಕೆ? 

17 ವರ್ಷಗಳ ಹಿಂದೆ ಬಿಹಾರದ ಪ್ರೇಮಕಥೆಯೊಂದು ಇಡೀ ದೇಶದಲ್ಲಿ ಸಂಚಲನ ಮೂಡಿಸುವಷ್ಟು ಚರ್ಚೆಯಾಗಿತ್ತು. ಅದುವೇ ಪ್ರೊಫೆಸರ್ ಮಾತುಕನಾಥ್  ಚೌಧರಿ ಮತ್ತು ಅವರ ವಿದ್ಯಾರ್ಥಿನಿ  ಜೂಲಿ ಪ್ರೇಮಕಥೆ. ಇಡೀ ಸಮಾಜವನ್ನು ಎದುರುಹಾಕಿಕೊಂಡು, ತಮಗೆ ಬಂದಂತಹ ಕಷ್ಟಗಳನ್ನೆಲ್ಲಾ  ಮೆಟ್ಟಿ ನಿಂತು ಜೊತೆಯಾಗಿ ಜೀವನ ನಡೆಸಿದ್ದ, ಈ ಜೋಡಿ  2014ರಲ್ಲಿ  ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟು, ಇಬ್ಬರೂ ಒಬ್ಬಂಟಿಯಾಗಿ ಜೀವನ ನಡೆಸಲು ಶುರು ಮಾಡುತ್ತಾರೆ.  ಅಷ್ಟಕ್ಕೂ ತಮ್ಮ ಬೋಲ್ಡ್ ಲವ್ ಸ್ಟೋರಿಯಿಂದಲೇ ಭಾರಿ ಸುದ್ದಿಯಾಗಿದ್ದ ಈ  ಈಗ ಜೂಲಿ ಎಲ್ಲಿದ್ದಾರೆ,  ಮಾತುಕನಾಥ್ ಏನು ಮಾಡುತ್ತಿದ್ದಾರೆ ಎಂದು ನಿಮಗೆ ಗೊತ್ತಾ? ಈ ಕುರಿತ ಮಾಹಿತಿ ಇಲ್ಲಿದೆ. 

Viral: ಭಾರೀ ಸುದ್ದಿಯಾಗಿದ್ದ ಲವ್ ಗುರು ಮಾತುಕನಾಥ್ - ಜೂಲಿ ಲವ್ ಸ್ಟೋರಿ, ಈಗ ಬ್ರೇಕಪ್​​​ ಮಾಡಿಕೊಂಡಿದ್ದು ಏಕೆ? 
ವೈರಲ್​​ ಫೋಟೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 20, 2023 | 10:54 AM

ಒಂದು ಕಾಲದಲ್ಲಿ ಬಿಹಾರದ ಪ್ರೇಮಕಥೆಯೊಂದು ಇಡೀ ದೇಶದಲ್ಲಿಯೇ ಭಾರಿ ಸಂಚಲನವನ್ನು ಸೃಷ್ಟಿ ಮಾಡಿತ್ತು. ಆ ಪ್ರೇಮಕಥೆ ಬೇರೆ ಯಾರದ್ದೂ ಅಲ್ಲ, ಲವ್ ಗುರು ಮಾತುಕನಾಥ್ ಮತ್ತು ಅವರ ವಿದ್ಯಾರ್ಥಿನಿ ಜೂಲಿಯಾರದ್ದು.  ಇವರಿಬ್ಬರ ನಡುವೆ 30 ವರ್ಷ ವಯಸ್ಸಿನ ಅಂತರವಿತ್ತು. ಈ ಕಾರಣದಿಂದಾಗಿಯೇ ಇವರ ಪ್ರೇಮಕಥೆ  ಭಾರಿ ಚರ್ಚೆಗೆ ಗ್ರಾಸವಾಗಿತ್ತು, ಮತ್ತು ಇವರಿಬ್ಬರ ಲವ್ಸ್ಟೋರಿಯನ್ನು 21 ನೇ ಶತಮಾನದ ʼಬೋಲ್ಡ್ ಲವ್ಸ್ಟೋರಿʼ ಎಂದೇ ಕರೆಯಲಾಗುತ್ತಿತ್ತು.   ತಮ್ಮ ಪ್ರೀತಿಗೆ ಎದುರಾದಂತಹ ಅಡೆತಡೆಗಳನ್ನು, ಸಮಾಜದ ಚುಚ್ಚು ಮಾತುಗಳನ್ನೆಲ್ಲಾ ಮೆಟ್ಟಿ ನಿಂತು ಜೊತೆಯಾಗಿ ಜೀವನ ನಡೆಸಿದ್ದ  ಈ ಜೋಡಿ 2014ರಲ್ಲಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟು, ಇಬ್ಬರೂ ಒಬ್ಬಂಟಿಯಾಗಿ  ಜೀವನ ನಡೆಸಲು ಶುರು ಮಾಡುತ್ತಾರೆ. ಅಷ್ಟಕ್ಕೂ ತಮ್ಮ ಬೋಲ್ಡ್ ಲವ್ ಸ್ಟೋರಿಯಿಂದಲೇ ಭಾರೀ ಚರ್ಚೆಯಲ್ಲಿದ್ದ  ಈ ಜೂಲಿ ಈಗ ಎಲ್ಲಿದ್ದಾರೆ ಮತ್ತು ಮಾತುಕನಾಥ್  ಏನು ಮಾಡುತ್ತಿದ್ದಾರೆ ಗೊತ್ತಾ? ಈ ಕುರಿತ ಮಾಹಿತಿ ಇಲ್ಲಿದೆ.

ಲವ್ ಗುರು ಮಾತುಕನಾಥ್ ಮತ್ತು ಜೂಲಿ ನಡುವಿನ ಪ್ರೇಮಕಥೆ  ಆರಂಭವಾದದ್ದು, 2004 ರಲ್ಲಿ, ಆ ಸಮಯದಲ್ಲಿ  ಪಾಟ್ನಾ ವಿಶ್ವ ವಿದ್ಯಾನಿಲಯದಲ್ಲಿ  ಹಿಂದಿ ಪ್ರೊಫೆಸರ್ ಆಗಿದ್ದ  ಮಾತುಕನಾಥ್ ಕಾಲೇಜಿನಲ್ಲಿ ಒಂದು ಶಿಬಿರವನ್ನು ಏರ್ಪಡಿಸುತ್ತಾರೆ. ಆ ಶಿಬಿರದಲ್ಲಿ  ವಿದ್ಯಾರ್ಥಿನಿ ಜೂಲಿ ಕೂಡಾ ಭಾಗವಹಿಸಿದ್ದರು. ಹೀಗೆ ಭೇಟಿಯಾದ ಇವರಿಬ್ಬರು, ಪ್ರೇಮ ಬಲೆಯಲ್ಲಿ ಬೀಳಲು ಜಾಸ್ತಿ ಸಮಯವೇನು ಬೇಕಾಗಿರಲಿಲ್ಲ,  ಸ್ವತಃ ಜೂಲಿಯೇ  ಮಾತುಕನಾಥ್ ಬಳಿ ತನ್ನ ಪ್ರೇಮ ಪ್ರಸ್ತಾಪವನ್ನು  ಮಾಡುತ್ತಾರೆ.  ಈ ಮೊದಲೇ ಮದುವೆಯಾಗಿ ಮಗುವಿದ್ದರೂ ಕೂಡಾ ಮತುಕನಾಥ್ ಜೂಲಿಯೊಂದಿಗೆ ತನ್ನ ಜೀನವವನ್ನು ನಡೆಸಬೇಕೆಂದು ನಿರ್ಧರಿಸುತ್ತಾರೆ.  ಹೀಗೆ  ಆರಂಭವಾದ ಇವರ ಪ್ರೇಮಕತೆ 2006ರಲ್ಲಿ  ಜಗತ್ ಜಾಹಿರಾಗುತ್ತದೆ. ಅಲ್ಲದೆ  ಇವರಿಬ್ಬರ ನಡುವೆ ತಂದೆ ಮತ್ತು ಮಗಳಿಗಿರುವಷ್ಟು ವಯಸ್ಸಿನ ಅಂತರವಿದ್ದಿದ್ದರಿಂದ  ಇವರ ಪ್ರೇಮಕಥೆ ಇಡೀ ದೇಶದಲ್ಲಿ ಭಾರಿ ಚರ್ಚೆಗೂ ಗ್ರಾಸವಾಗಿತ್ತು.

ರಾಷ್ಟ್ರಮಟ್ಟದಲ್ಲಿ ಇವರಿಬ್ಬರ ಪ್ರೇಮಕಥೆ ಸುದ್ದಿಯಾಗುತ್ತಿದ್ದಂತೆ ಮಾತುಕನಾಥ್ ಅವರ  ಪತ್ನಿ ವಿಚ್ಛೇದನವನ್ನು ಪಡೆದುಕೊಂಡು ಬೇರೆಯಾಗುತ್ತಾರೆ. ಅಲ್ಲದೆ ಪತ್ನಿ ನೀಡಿದ ಕೌಟುಂಬಿಕ ದೌರ್ಜನ್ಯದ ಆರೋಪದ ಮೇಲೆ  ಮಾತುಕನಾಥ್ ಅವರನ್ನು ಬಂಧಿಸಿ ಜೈಲಿಗೆ ಸಹ ಅಟ್ಟಲಾಗುತ್ತದೆ.   ಇವರ ವಿವಾದಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಜುಲೈ 15, 2009ರಂದು  ಮಾತುಕನಾಥ್ ಅವರನ್ನು  ಪ್ರೊಫೆಸರ್ ಹುದ್ದೆಯಿಂದ ವಜಾಗೊಳಿಸಲಾಯಿತು.  ಈ ಎಲ್ಲಾ ಘಟನೆಯ ನಂತರ ಮತುಕನಾಥ್ ʼಲವ್ ಗುರು ಎಂದೇ ಹೆಸರುವಾಸಿಯಾಗುತ್ತಾರೆ.  ಹೀಗೆ ಜೈಲಿನಿಂದ ಹೊರಬಂದ ನಂತರ ಮಾತುಕನಾಥ್  ಜೂಲಿಯನ್ನು ಯಾವುದೇ  ಕಾರಣಕ್ಕೂ ಬಿಟ್ಟುಕೊಡದೆ,  ಪಾಟ್ನವನ್ನು ತೊರೆದು ಭಾಗಲ್ಪರಕ್ಕೆ ಬಂದು ಜೊತೆಯಾಗಿ ಜೀವನ ನಡೆಸಲು  ಪ್ರಾರಂಭಿಸುತ್ತಾರೆ.

ಹೀಗೆ ಹಂತ ಹಂತಕ್ಕೂ ಸಮಾಜದ ಚುಚ್ಚು ಮಾತುಗಳನ್ನು, ಅಡತಡೆಗಳನ್ನು  ಮೆಟ್ಟಿ ನಿಂತು ಜೀವನ ಸಾಗಿಸಿದ ಈ ಜೋಡಿ 2014 ರಲ್ಲಿ  ಪರಸ್ಪರ ಒಪ್ಪಿಗೆಯಿಂದ ಬೇರ್ಪಡುತ್ತಾರೆ. ಹೌದು ಇವರಿಬ್ಬರೂ ಸಹ ಜೊತೆಯಾಗಿ ಪ್ರೀತಿ, ಸಂತೋಷದಿಂದ ಜೀವನ ನಡೆಸುತ್ತಿದ್ದಾಗ ಜೂಲಿ ನಿಧಾನವಾಗಿ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವನ್ನು ತೋರಲು ಪ್ರಾರಂಭಿಸಿದರು, ಹಾಗೂ ಜೂಲಿ ಹೆಚ್ಚಾಗಿ  ಆಧ್ಯಾತ್ಮ ಕೇಂದ್ರಗಳಿಗೆ ಒಬ್ಬಂಟಿಯಾಗಿ ಹೋಗಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದ ಇವರಿಬ್ಬರ ಸಂಬಂಧದಲ್ಲಿ  ಬಿರುಕು ಮೂಡಲು ಆರಂಭವಾಯಿತು. ನಂತರ ಇವರಿಬ್ಬರು ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟು, ಇಬ್ಬರೂ ಒಬ್ಬಂಟಿಯಾಗಿ ಜೀವನ ನಡೆಸಲು ಆರಂಭಿಸುತ್ತಾರೆ.   ಜೂಲಿ  ಆಧ್ಯಾತ್ಮದ ಕಡೆ ಮುಖ ಮಾಡಿ,  ಸಪ್ತ ಸಾಗರವನ್ನು ದಾಟಿ ವೆಸ್ಟ್ ಇಂಡೀಸ್ಗೆ ತೆರಳಿದರೆ,  ಮಾತುಕನಾಥ್ ಭಾಗಲ್ಪುರದಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸಲು ಆರಂಭಿಸುತ್ತಾರೆ. ನಂತರ ಇವರಿಬ್ಬರ ನಡುವೆ ಯಾವ ಸಂಪರ್ಕವೂ ಇರಲಿಲ್ಲ.

ಇದಾದ ನಂತರ  ಆರು ವರ್ಷಗಳ ಬಳಿಕ ಅಂದ್ರೆ, 2020ರ  ಕೊರೋನಾ ಮಹಾಮಾರಿ ಸಮಯದಲ್ಲಿ ಜೂಲಿ ಅವರಿಗೆ ಆರೋಗ್ಯ ಹದಗೆಟ್ಟಿರುವ ವಿಷಯ ಮಾತುಕನಾಥ್ ಅವರಿಗೆ ತಿಳಿಯುತ್ತದೆ. ಈ ವಿಷಯ ತಿಳಿದ ತಕ್ಷಣ  ಮತುಕನಾಥ್   ವೆಸ್ಟ್ ಇಂಡಿಸ್ಗೆ ಹೋಗಿ, ಅಲ್ಲಿ 4 ತಿಂಗಳ ಕಾಲ ಜೂಲಿ ಜೊತೆಗಿದ್ದು ಅವರ ಆರೈಕೆಯನ್ನು ಮಾಡುತ್ತಾರೆ. ಅಲ್ಲದೆ ಈ  ಲಾಕ್ಡೌನ್ ಸಮಯದಲ್ಲಿ ಜೂಲಿಯವರು ಅನಾರೋಗ್ಯದಿಂದ ಹಾಸಿಗೆ ಹಿಡಿದಂತಹ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.  ಈ ಸಂದರ್ಭದಲ್ಲಿ ಹಲವು ವರ್ಷಗಳ ಬಳಿಕ ತನ್ನ ಪ್ರೇಮಿಯನ್ನು  ಭೇಟಿಯಾದಾಗ ಜೂಲಿಯು ಹೃದಯ ತುಂಬಿ ಸಂತೋಷಪಟ್ಟಿದ್ದರು ಎಂದು ಹೇಳುತ್ತಾರೆ  ಮಾತುಕನಾಥ್. ಮತ್ತು ಈ ಸಮಯದಲ್ಲಿ ಮಾತುಕನಾಥ್  ಜೂಲಿಯನ್ನು ಭಾರತಕ್ಕೆ ಬರುವಂತೆ ಒತ್ತಾಯಿಸಿದರೂ ಜೂಲಿ ಇಲ್ಲಿಗೆ ಬರಲು ಒಪ್ಪಲಿಲ್ಲ, ಅವರು ಇಂದಿಗೂ  ವೆಸ್ಟ್ ಇಂಡೀಸ್ ಅಲ್ಲಿಯೇ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ಇದನ್ನೂ ಓದಿ: ಟೊಮೆಟೊ ಕೆಚಪ್ ಅಂದ್ರೆ ಇಷ್ಟಾನಾ? ಈ ವಿಡಿಯೋ ನೋಡಿದ್ರೆ ಕೆಚಪ್ ತಿನ್ನಲ್ಲ

ಇತ್ತಕಡೆ  ಕುಟುಂಬ ಮತ್ತು ಹೆಂಡತಿ ಮಕ್ಕಳಿಂದ ದೂರವಾಗಿ ಒಬ್ಬಂಟಿಯಾಗಿರುವ ಮಾತುಕನಾಥ್  ಕೊರೋನಾ ಬಳಿಕ   ಭಾಗಲ್ಪುರದ ತಮ್ಮ ಗ್ರಾಮದಲ್ಲಿ ಖಾಸಗಿ ಶಾಲೆಯೊಂದನ್ನು ತೆರೆದು, ಅಲ್ಲಿ ಮಕ್ಕಳಿಗೆ  ಜ್ಞಾನಾರ್ಜನೆಯನ್ನು ಮಾಡುತ್ತಾ  ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!