Viral Video: ಟೊಮೆಟೊ ಕೆಚಪ್ ಅಂದ್ರೆ ಇಷ್ಟಾನಾ? ಈ ವಿಡಿಯೋ ನೋಡಿದ್ರೆ ಕೆಚಪ್ ತಿನ್ನಲ್ಲ
ಸಾಮಾನ್ಯವಾಗಿ ನೂಡಲ್ಸ್, ಗೋಬಿ ಮಂಚೂರಿ, ಫ್ರೆಂಚ್ ಫ್ರೈಸ್ ಸೇರಿದಂತೆ ಎಲ್ಲಾ ಬಗೆಯ ಫಾಸ್ಟ್ಫುಡ್ಗಳೊಂದಿಗೆ ಟೊಮೆಟೊ ಕೆಚಪ್ ಇರಲೇಬೇಕು. ಹಲವರಿಗೆ ಈ ಟೊಮೊಟೊ ಕೆಚಪ್ ಅಂದ್ರೆ ಬಲು ಇಷ್ಟ. ನಿಮಗೂ ಟೊಮೆಟೊ ಕೆಚಪ್ ಅಂದ್ರೆ ಇಷ್ಟನಾ ಹಾಗಿದ್ರೆ, ಫ್ಯಾಕ್ಟರಿಗಳಲ್ಲಿ ಈ ಕೆಚಪ್ ಅನ್ನು ಯಾವ ರೀತಿ ತಯಾರಿಸುತ್ತಾರೆ ಎಂಬುದನ್ನು ಒಮ್ಮೆ ನೋಡಿ.
ಫ್ರೆಂಚ್ ಫ್ರೈಸ್, ಬರ್ಗರ್, ಸ್ಯಾಂಡ್ವಿಚ್, ನೂಡಲ್ಸ್ ಸೇರಿದಂತೆ ಯಾವುದೇ ಫಾಸ್ಟ್ ಫುಡ್ ಗಳೊಂದಿಗೆ ಟೊಮೆಟೊ ಕೆಚಪ್ ಇರಲೇಬೇಕು. ಸಿಹಿ, ಹುಳಿ ಮತ್ತು ಮಸಾಲೆಯುಕ್ತ ರುಚಿಯ ಸಮ್ಮಿಶ್ರಣವಾದ ಈ ಟೊಮೆಟೊ ಕೆಪಚ್ಗಳನ್ನು ಹಲವು ಬಗೆಯ ಭಕ್ಷ್ಯಗಳ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಅದರಲ್ಲೂ ಇಟಾಲಿಯನ್ ಮತ್ತು ಚೈನಿಸ್ ಭಕ್ಷ್ಯಗಳು ಟೊಮೆಟೊ ಕೆಚಪ್ ಇಲ್ಲದೆ ಅಪೂರ್ಣ ಅಂತಾನೇ ಹೇಳಬಹುದು. ಹೆಚ್ಚಾಗಿ ಮಕ್ಕಳು ಕೆಚಪ್ ಅನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ನಿಮಗೂ ಕೂಡಾ ಈ ಕೆಚಪ್ ಅಂದ್ರೆ ಇಷ್ಟಾನಾ, ಕೆಚಪ್ ಇಲ್ಲದೆ ಎಣ್ಣೆಯಲ್ಲಿ ಕರಿದ ಆಹಾರಗಳು ಸೇರೋದೆ ಇಲ್ವಾ? ಹಾಗಿದ್ರೆ ಈ ಟೊಮೆಟೊ ಕೆಚಪ್ ಅನ್ನು ಹೇಗೆ ತಯಾರಿಸುತ್ತಾರೆ ಎಂಬ ಕುರಿತ ವಿಡಿಯೋವನ್ನು ಒಮ್ಮೆ ನೋಡಿ.
ಈ ವಿಡಿಯೋವನ್ನು @Shortbreak17812022 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಫ್ಯಾಕ್ಟರಿಯೊಂದರಲ್ಲಿ ಅನೈರ್ಮಲ್ಯವಾಗಿ ಹೇಗೆಲ್ಲಾ ಟೊಮೆಟೊ ಕೆಚಪ್ ಅನ್ನು ತಯಾರಿಸುತ್ತಾರೆ ಎಂಬ ದೃಶ್ಯವಾಳಿಯನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಫ್ಯಾಕ್ಟರಿಯೊಂದರಲ್ಲಿ ಅಲ್ಲಿನ ಕಾರ್ಮಿಕರು ಟೊಮೆಟೊಗಳನ್ನೆಲ್ಲಾ ತೊಳೆದು ಅದನ್ನು ಬೇಯಿಸಿ, ಆ ಬೇಯಿಸಿದ ಟೊಮೆಟೊಗಳನ್ನೆಲ್ಲಾ ಅಷ್ಟೇನು ಸ್ವಚ್ಛವಾಗಿರದ ದೊಡ್ಡ ದೊಡ್ಡ ಬಕೆಟ್ಗಳಿಗೆ ಹಾಕಿ ನಂತರ ಅದನ್ನು ಮಿಷಿನ್ಗಳಿಗೆ ವರ್ಗಾಯಿಸಿ, ಟೊಮೆಟೋ ಕೆಚಪ್ ತಯಾರಿಸುತ್ತಾರೆ. ಹೀಗೆ ಮಿಷಿನ್ಗಳಲ್ಲಿ ತಯಾರಾದ ಕೆಚಪ್ ಅನ್ನು ಸ್ವಚ್ಛವಾಗಿರದ ಬಕೆಟ್ಗಳಿಗೆ ಸುರಿದು, ಕೊನೆಯಲ್ಲಿ ಅವುಗಳನ್ನು ಬಾಟಲಿಗಳಿಗೆ ಹಾಕಿ ಪ್ಯಾಕ್ ಮಾಡುತ್ತಾರೆ. ಈ ವಿಡಿಯೋದಲ್ಲಿ ಫ್ಯಾಕ್ಟರಿಯಲ್ಲಿರುವ ಟೊಮೆಟೊ ಕೆಚಪ್ ತಯಾರಿಸುವ ಮಿಷಿನ್ಗಳನ್ನು ನೋಡಿದ್ರೆ ಅವುಗಳನ್ನು ತೊಳೆಯದೆ ಅದೆಷ್ಟು ವರ್ಷಗಳಾಗಿದೆಯೋ ಅಂತಾ ಅನ್ನಿಸುತ್ತದೆ. ಹೀಗೆ ಅನೈರ್ಮಲ್ಯವಾಗಿ ಟೊಮೆಟೊ ಕೆಚಪ್ ತಯಾರಿಸುವ ವಿಡಿಯೋವನ್ನು ನೋಡಿದ ಹಲವರು ದೇವ್ರೆ ಇನ್ನು ಮುಂದೆ ಈ ಕೆಚಪ್ ಅನ್ನು ನಾವು ತಿನ್ನಲ್ಲಪ್ಪಾ ಎಂದು ಹೇಳಿದ್ದಾರೆ.
ಇದನ್ನೂ ಓದಿ; ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ತಾಯಿ-ಮಗುವನ್ನು ರಕ್ಷಿಸಿದ ಬಸ್ ಡ್ರೈವರ್
ಡಿಸೆಂಬರ್ 09 ರಂದು ಹಂಚಿಕೊಳ್ಳಲಾದ ಈ ವಿಡಿಯೋ 18.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 231K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ನೋಡಿ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ʼಕೊನೆ ಪಕ್ಷ ಟೊಮೆಟೊಗಳನ್ನೇ ಬಳಸಿ ಕೆಚಪ್ ತಯಾರಿಸಿದ್ದಾರೆ ಅಲ್ವಾ, ಅದು ನಮ್ಮ ಪುಣ್ಯʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಲ್ಲಿ ನೈರ್ಮಲ್ಯ ಸತ್ತು ಹೋಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದ್ಯಾವುದೋ ಲೋಕಲ್ ಬ್ರಾಂಡ್, ದೊಡ್ಡ ದೊಡ್ಡ ಬ್ರಾಂಡ್ ತಮ್ಮ ಉತ್ಪನ್ನಗಳನ್ನು ತಯಾರಿಸುವಲ್ಲಿ ಉನ್ನತ ಮಟ್ಟದ ನೈರ್ಮಲ್ಯವನ್ನು ಕಾಪಾಡಿಕೊಳ್ಳುತ್ತವೆʼ ಎಂದು ಹೇಳಿದ್ದಾರೆ. ಇನ್ನೂ ಈ ವಿಡಿಯೋವನ್ನು ನೋಡಿದ ಹಲವರು ʼನಾವಿನ್ನು ಕೆಚಪ್ ತಿನ್ನಲ್ಲಪ್ಪಾʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: