Optical Illusion: ಈ ಚಿತ್ರದಲ್ಲಿ ಕಾಣೆಯಾಗಿರುವ ನಾಯಿ ಮರಿಯನ್ನು ಗುರುತಿಸಬಲ್ಲಿರಾ?
ಇಂದಿನ ಆಪ್ಟಿಕಲ್ ಇಲ್ಯೂಷನ್ ಸವಾಲಿನಲ್ಲಿ ಸುಂದರವಾದ ಉದ್ಯಾನವನದ ಚಿತ್ರವನ್ನು ಕಾಣಬಹುದು. ಈ ಚಿತ್ರದಲ್ಲಿ ವ್ಯಕ್ತಿಯೊಬ್ಬ ತನ್ನ ನಾಯಿಮರಿ ಕಳೆದುಹೋಗಿರುವುದರಿಂದ ಪೋಸ್ಟರ್ ಒಂದನ್ನು ಅಂಟಿಸಿದ್ದಾನೆ. ಆದರೆ ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಸೆಕೆಂಡುಗಳಲ್ಲಿ ಕಳೆದು ಹೋದ ನಾಯಿಮರಿಯನ್ನು ಆತನಿಗೆ ಹುಡುಕಿಕೊಡಿ. ಹುಡುಕುವಲ್ಲಿ ವಿಫಲವಾದರೆ ಈ ಲೇಖನದ ಅಂತ್ಯದಲ್ಲಿ ನೀಡಿರುವ ಚಿತ್ರದಲ್ಲಿ ನಾಯಿ ಮರಿ ಇರುವ ಜಾಗವನ್ನು ಕೆಂಪು ಬಣ್ಣದ ವೃತ್ತದಲ್ಲಿ ಗುರುತಿಸಲಾಗಿದೆ.
ಆಪ್ಟಿಕಲ್ ಇಲ್ಯೂಷನ್(Optical Illusion) ಮನರಂಜನೆಯ ಜೊತೆಗೆ ನಿಮ್ಮ ಬುದ್ಧಿವಂತಿಕೆಯ ಕೌಶಲ್ಯಗಳನ್ನು ಪರೀಕ್ಷಿಸುವ ಸವಾಲಿನ ಆಟವಾಗಿದೆ. ಇದು ನಿಮ್ಮ ಮೆದುಳನ್ನು ಚುರುಕುಗೊಳಿಸುವುದರ ಜೊತೆಗೆ ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸುತ್ತದೆ. ಇದೀಗಾ ಅಂಥದ್ದೇ ನಿಮ್ಮ ತಲೆಗೆ ಹುಳ ಬಿಡುವ ಚಿತ್ರವೊಂದು ಇಲ್ಲಿದೆ. ನೀವು ಈ ಚಿತ್ರವನ್ನು ಸರಿಯಾಗಿ ಗಮನಿಸಿದರೆ ಕಾಣಿಯಾಗಿರುವ ನಾಯಿ ಹೆದರಿ ಮೂಲೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೆಲವೇ ಸೆಕೆಂಡುಗಳಲ್ಲಿ ನೀವು ನಾಯಿಮರಿಯನ್ನು ಪತ್ತೆಹಚ್ಚುವಿರಿ.
ಇಂದಿನ ಸವಾಲಿನ ಚಿತ್ರದಲ್ಲಿ ಸುಂದರವಾದ ಕಿಕ್ಕಿರಿದ ಉದ್ಯಾನವನವನ್ನು ಕಾಣಬಹುದು. ಚಿತ್ರದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಪಾರಿವಾಳಗಳಿಗೆ ಕಾಳುಗಳನ್ನು ಹಾಕುತ್ತಿರುವುದನ್ನು ಕಾಣಬಹುದು. ವ್ಯಕ್ತಿಯ ಮುಂದಿನ ಬೆಂಚಿನಲ್ಲಿ ದಂಪತಿಗಳಿಬ್ಬರು ಕುಳಿತು ಮಾತನಾಡುತ್ತಿರುವುದನ್ನು ಕಾಣಬಹುದು. ಮಗುವೊಂದು ಬಲೂನುಗಳನ್ನು ಹಿಡಿದು ಓಡಾಡುತ್ತಿರುವುದನ್ನು ಕಾಣಬಹುದು. ಆದರೆ ಈ ಎಲ್ಲಾ ವಿವರಗಳ ನಡುವೆ ನೀವು ಕಳೆದುಹೋದ ನಾಯಿಮರಿಯನ್ನು ಕಂಡು ಹುಡುಕಬೇಕಿದೆ.
ನಾಯಿಮರಿ ಕಂದು ಬಣ್ಣದ್ದಾಗಿದ್ದು, ಕಾಣೆಯಾಗಿರುವ ಫೋಟೋ ನಿಮಗೆ ನಾಯಿ ಮರಿಯನ್ನು ಹುಡುಕಲು ಸಹಾಯ ಮಾಡುತ್ತದೆ. ನೀವು ಎಷ್ಟೇ ಹುಡುಕಿದರೂ ನಿಮ್ಮ ಕಣ್ಣಿಗೆ ನಾಯಿ ಮರಿ ಎಲ್ಲೂ ಪತ್ತೆಯಾಗದಿದ್ದರೆ, ಈ ಕೆಳಗೆ ನೀಡಿರುವ ಚಿತ್ರದಲ್ಲಿ ನಾಯಿ ಮರಿ ಇರುವ ಜಾಗವನ್ನು ಕೆಂಪು ಬಣ್ಣದ ವೃತ್ತದಲ್ಲಿ ಗುರುತಿಸಲಾಗಿದೆ.
ಇದನ್ನೂ ಓದಿ: ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಸೆಕೆಂಡುಗಳಲ್ಲಿ ಅನ್ ಲಾಕ್ ಆಗಿರುವ ಬೀಗವನ್ನು ಗುರುತಿಸಿ
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:46 am, Thu, 21 December 23