AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಹೋಟೆಲ್ ರೂಮ್​​​ಗಳಲ್ಲಿ ಕಡ್ಡಾಯವಾಗಿ ಕಾಂಡೋಮ್ ಇಟ್ಟಿರಲೇಬೇಕಂತೆ; ಇದು ಸರ್ಕಾರದ ರೂಲ್ಸ್ 

ಜನಸಂಖ್ಯೆಯನ್ನು ನಿಯಂತ್ರಿಸಲು ಹಾಗೂ ಲೈಂಗಿಕವಾಗಿ ಹರಡುವಂತಹ ಸೋಂಕುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಂಡೋಮ್ ಬಳಕೆಗೆ ಸಂಬಂಧಿಸಿದಂತೆ ಪ್ರತಿಯೊಂದು ದೇಶದಲ್ಲಿಯೂ  ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅದೇ ರೀತಿ ಈ ಒಂದು ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ದಂಪತಿಗಳ ಸಲುವಾಗಿ ಇಲ್ಲಿನ ಪ್ರತಿಯೊಂದು ಹೋಟೆಲ್​​​ಗಳಲ್ಲಿಯೂ ಫ್ರೀ ಕಾಂಡೋಮ್​​​ಗಳನ್ನು ಇಡಲಾಗಿದೆಯಂತೆ. ಬನ್ನಿ ಅದು ಯಾವ ದೇಶ ಎಂಬುದನ್ನು ನೋಡೋಣ.

Viral Video: ಈ ಹೋಟೆಲ್ ರೂಮ್​​​ಗಳಲ್ಲಿ ಕಡ್ಡಾಯವಾಗಿ ಕಾಂಡೋಮ್ ಇಟ್ಟಿರಲೇಬೇಕಂತೆ; ಇದು ಸರ್ಕಾರದ ರೂಲ್ಸ್ 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Dec 21, 2023 | 1:18 PM

Share

ಇಂದು ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲದೆ ಅಸುರಕ್ಷಿತ ಲೈಂಗಿಕತೆಯ ಕಾರಣದಿಂದ ಏಡ್ಸ್ ರೋಗದ ಸಂಖ್ಯೆಯೂ ಹೆಚ್ಚಾಗುತ್ತಿದೆ.  ಈ ನಿಟ್ಟಿನಲ್ಲಿ ಈ ರೋಗವನ್ನು ತಡೆಗಟ್ಟಲು ಹಾಗೂ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ  ಕಾಂಡೋಮ್ ಬಳಕೆಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.  ಅದೇ ರೀತಿ ಉಗಾಂಡ ದೇಶದಲ್ಲಿಯೂ ಕೂಡಾ ಲೈಂಗಿಕವಾಗಿ ಹರಡುವಂತಹ ಸೋಂಕುಗಳನ್ನು ತಡೆಗಟ್ಟಲು ಹಾಗೂ ಜನಸಂಖ್ಯೆಯನ್ನು ನಿಯಂತ್ರಿಸಲು ಇಲ್ಲಿನ ಸರ್ಕಾರ ವಿಶೇಷ ಉಪಕ್ರಮವನ್ನು ತಗೆದುಕೊಂಡಿದೆ.  ಅದೇನೆಂದರೆ, ಈ ದೇಶದ ಪ್ರತಿಯೊಂದು ಹೋಟೆಲ್ ರೂಮ್​​​ಗಳಲ್ಲಿಯೂ ಕಡ್ಡಾಯವಾಗಿ ಫ್ರೀ ಕಾಂಡೋಮ್​​​ಗಳನ್ನು ಇಟ್ಟಿರಲೇಬೇಕು ಎಂಬ ಕ್ರಮವನ್ನು ತೆಗೆದುಕೊಂಡಿದೆ. ಹೋಟೇಲ್​​​ಗಳಲ್ಲಿ ತಂಗುವಂತಹ ದಂಪಂತಿಗಳಿಗಾಗಿ ಈ ಒಂದು ವಿಶೇಷ ಕ್ರಮವನ್ನು ತೆಗೆದುಕೊಳ್ಳಲಾಗಿದೆ,  ಈ ಮಾಹಿತಿಪೂರ್ಣ  ವಿಡಿಯೋವನ್ನು ಟ್ರಾವೆಲ್ ವ್ಲಾಗರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಭಾರೀ  ವೈರಲ್ ಆಗಿದೆ.

ಈ  ವೈರಲ್ ವಿಡಿಯೋವನ್ನು ಶಬೀರ್ ಅಹಮದ್ (@thepaktrekker) ಎಂಬ ಟ್ರಾವೆಲ್ ವ್ಲಾಗರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಉಗಾಂಡ ದೇಶದ ಹೋಟೆಲ್ ರೂಮ್​​ಗಳಲ್ಲಿ ಏತಕ್ಕಾಗಿ ಫ್ರೀ ಕಾಂಡೋಮ್​​​ಗಳನ್ನು ಇಟ್ಟಿದ್ದಾರೆ ಎಂಬುದಕ್ಕೆ ವಿವರಣೆಯನ್ನು ನೀಡುವುದನ್ನು ಕಾಣಬಹುದು.

ಹೋಟೆಲ್​​​​ಗಳಲ್ಲಿ ತಂಗುವ ದಂಪತಿಗಳ ಸಲುವಾಗಿ ಇಲ್ಲಿನ ಪ್ರತಿಯೊಂದು ಹೋಟೆಲ್​​​​ಗಳಲ್ಲಿ ಫ್ರೀ ಕಾಂಡೋಮ್​​​ಗಳನ್ನು ಇಡಲಾಗಿದೆ. ಇದು ಜನಸಂಖ್ಯೆಯನ್ನು ನಿಯಂತ್ರಿಸಲು ಇಲ್ಲಿನ ಸರ್ಕಾರ ತಗೆದುಕೊಂಡಂತಹ ವಿಶೇಷ ಕ್ರಮವಾಗಿದೆ ಎಂದು ಅವರು ವಿಡಿಯೋದಲ್ಲಿ ವಿವರಣೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಪನೀರ್ ಮಟರ್ ಮಸಾಲದಲ್ಲಿ ಪನೀರ್ ಇಲ್ಲ! ಮದುವೆ ಮನೆಯಲ್ಲಿ ಘನಘೋರ ಯುದ್ಧ  

ಡಿಸೆಂಬರ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 19.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 360K  ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್​​​​ ಕೂಡ ಬಂದಿವೆ. ಒಬ್ಬ ಬಳಕೆದಾರರು ʼಜೊತೆಗೆ ಸ್ಯಾನಿಟರಿ ಪ್ಯಾಡ್​​ಗಳನ್ನು ಸಹ ಇಡಬಹುದಲ್ವಾʼ ಎಂದು ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಕೆಲವರು ಈ ವಿಡಿಯೋಗೆ ತಮಾಷೆಯ ಕಮೆಂಟ್ಸ್ಗಳನ್ನು ಬರೆದುಕೊಂಡರೆ, ಇನ್ನೂ ಅನೇಕರು ಇದೊಂದು ಒಳ್ಳೆಯ ಉಪಕ್ರಮ, ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Follow Us
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ