Viral Video: ಜೆಸಿಬಿ, ಸಿಮೆಂಟ್ ಮಿಕ್ಸರ್ ಬಳಸಿ 2 ಲಕ್ಷ ಜನರಿಗೆ ಅಡುಗೆ
ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ಗಳನ್ನು ವಿವಿಧ ರೀತಿಯ ಕಾಮಗಾರಿ ಕೆಲಸಗಳಲ್ಲಿ ಬಳಸಲಾಗುತ್ತದೆ. ಆದ್ರೆ ಈ ಯಂತ್ರಗಳನ್ನು ಬಳಸಿ ಅಡುಗೆಯನ್ನು ಸಹ ಮಾಡಬಹುದೆಂದು ನಿಮಗೆ ಗೊತ್ತಾ? ಹೌದು ಮಧ್ಯಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸುಮಾರು 2 ಲಕ್ಷ ಅಡುಗೆ ತಯಾರಿಸಲು ಈ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಯಂತ್ರಗಳನ್ನು ಬಳಸಲಾಗಿದೆ. ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಬಳಸಿ ಅಡುಗೆ ತಯಾರಿಸುತ್ತಿರುವ ಪರಿಯನ್ನೊಮ್ಮೆ ನೀವೇ ನೋಡಿ.
ಜೆಸಿಬಿ ಮತ್ತು ಸಿಮೆಂಟ್ ಮಿಕ್ಸ್ರ್ಗಳನ್ನು ವಿವಿಧ ರೀತಿಯ ಕಾಮಗಾರಿ ಕೆಲಸಗಳಲ್ಲಿ ಬಳಸಲಾಗುತ್ತದೆ. ಆದ್ರೆ ಈ ಯಂತ್ರಗಳ ಸಹಾಯದಿಂದ ಅಡುಗೆಯನ್ನು ಸಹ ಮಾಡಬಹುದೆಂದು ನಿಮಗೆ ಗೊತ್ತಾ? ಅರೇ… ಗ್ರೈಂಡರ್, ಮಿಕ್ಸಿ ಇತ್ಯಾದಿಗಳ ಸಹಾಯದಿಂದ ಸುಲಭವಾಗಿ ಅಡುಗೆಯನ್ನು ತಯಾರು ಮಾಡಬಹುದು, ಆದ್ರೆ ಅಡುಗೆ ಮಾಡಲು ಯಾರಾದ್ರೂ ಈ ಬೃಹತ್ ಯಂತ್ರಗಳನ್ನು ಉಪಯೋಗಿಸ್ತಾರಾ? ಉಪಯೋಗಿಸಿದ್ರೂ ಅದೆಂಗೆ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಬಳಸಿ ಅಡುಗೆ ತಯಾರಿಸಲು ಸಾಧ್ಯ ಎಂದು ನೀವು ಭಾವಿಸಬಹುದು. ಹಾಗಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ.
ವರದಿಗಳ ಪ್ರಕಾರ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ದಂಡುವಾ ಧಾಮ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅಡುಗೆಯನ್ನು ತಯಾರಿಸಲು ಈ ಎರಡು ಬೃಹತ್ ಯಂತ್ರಗಳಾದ ಜೆಸಿಬಿ ಮತ್ತು ಸಿಮೆಂಟ್ ಮಿಕ್ಸರ್ ಯಂತ್ರಗಳನ್ನು ಬಳಸಲಾಗಿದೆ. ಹೌದು ಈ ಕಾರ್ಯಕ್ರಮದಲ್ಲಿ ಲಕ್ಷಗಟ್ಟಲೆ ಜನರು ಭಾಗವಹಿಸಿದ್ದು, ಇಷ್ಟು ಜನರಿಗೆ ಒಂದೇ ಬಾರಿಗೆ ವಿವಿಧ ಬಗೆಯ ಅಡುಗೆಯನ್ನು ತಯಾರು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಅಲ್ಲದೆ ಒಂದೇ ಬಾರಿಗೆ ಸುಮಾರು 2 ಲಕ್ಷ ಜನರಿಗೆ ಸುಮಾರು 1200 ಕೆಜಿ ತರಕಾರಿಗಳ ಸಾಂಬರ್ ತಯಾರಿಸಬೇಕಿತ್ತು. ಒಲೆಯ ಮುಂದೆ ಸೌಟು ಹಿಡಿದುಕೊಂಡು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಂಬರ್ ತಯಾರಿಸುವುದೆಂದರೆ ಸುಲಭದ ಮಾತೇ ಅಲ್ಲ, ಈ ಕಾರಣಕ್ಕಾಗಿ ಸಂಬಾರ್ ತಯಾರಿಸಲು ಜೆಸಿಬಿಯನ್ನು ಬಳಸಲಾಗಿದೆ. ಅಲ್ಲದೆ ಈ ಬಿಸಿ ಬಿಸಿ ಸಾಂಬರ್ ಅನ್ನು ಸೌಟಿನ ಬದಲಿಗೆ ಜೆಸಿಬಿ ಸಹಾಯದಿಂದಲೇ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ವರ್ಗಾಯಿಸಲಾಗಿದೆ. ಮತ್ತು ಊಟದ ಜೊತೆಗೆ ಮಾಲ್ಪರಿ ಸಿಹಿಯನ್ನು ಸಹ ತಯಾರಿಸಬೇಕಿತ್ತು, ಈ ಮಾಲ್ಪರಿ ಹಿಟ್ಟನ್ನು ಕೈಯಲ್ಲಿ ತಯಾರಿಸುವ ಬದಲು ಸಿಮೆಂಟ್ ಮಿಕ್ಸರ್ ಬಳಸಿ ತಯಾರಿಸಲಾಗಿದೆ. ಈ ಭರ್ಜರಿ ಅಡುಗೆ ತಯಾರಿಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ:
Published On - 2:43 pm, Thu, 21 December 23