Viral Video: ಇದು ಯಾವ್ದು ಗುರು ಹೊಸ ಹೆಲ್ಮೆಟ್; ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಎಲ್ಬೋ ಪೈಪ್ ಧರಿಸಿದ ಆಸಾಮಿ

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು, ಇಲ್ಲದಿದ್ರೆ ಪೋಲಿಸರು ಗ್ಯಾರಂಟಿ ಫೈನ್ ಹಾಕ್ತಾರೆ. ಹೀಗೆ ಇಲ್ಲೊಬ್ಬ ಆಸಾಮಿ ಹೆಲ್ಮೆಟ್ ಧರಿಸಿಲ್ಲ ಅಂತಾ ಪೋಲಿಸರು ಫೈನ್ ಹಾಕಿದ್ರೆ ಕಷ್ಟ ಎನ್ನುತ್ತಾ, ಹೆಲ್ಮೆಟ್ ಬದಲಿಗೆ ತಲೆಗೆ ಎಲ್ಬೋ ಪೈಪ್ ಧರಿಸಿ ಬೈಕ್ ಸವಾರಿ ಮಾಡಿದ್ದಾನೆ. ಈ ಹಾಸ್ಯಮಯ  ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ತಲೆ ಸೇಫ್ ಆಗಿದೆ ಇನ್ನು ಪೋಲಿಸರು ಫೈನ್ ಹಾಕಂಗಿಲ್ಲ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ. 

Viral Video: ಇದು ಯಾವ್ದು ಗುರು ಹೊಸ ಹೆಲ್ಮೆಟ್; ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಎಲ್ಬೋ ಪೈಪ್ ಧರಿಸಿದ ಆಸಾಮಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 21, 2023 | 6:13 PM

ಹೆಲ್ಮೆಟ್ ಜೀವ ರಕ್ಷಾ ಕವಚ ಇದ್ದಂತೆ. ಅದಕ್ಕಾಗಿ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರನು ಕೂಡಾ ಹೆಲ್ಮೆಟ್ ಧರಿಸಲೇಬೇಕು ಎಂದು ಹೇಳುತ್ತಾರೆ. ಹೆಲ್ಮೆಟ್ ಧರಿಸಿಲ್ಲ ಅಂದ್ರೆ ಪೋಲಿಸರು ಫೈನ್ ಕೂಡಾ ಹಾಕುತ್ತಾರೆ. ಫೈನ್ ಯಾರು ಕಟ್ಟೋದು ಎಂದು ಕಾಟಾಚರಕ್ಕೆ ಅದೆಷ್ಟೋ ಜನರು ಹೆಲ್ಮೆಟ್ ಧರಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ, ನನ್ನತ್ರ ಹೆಲ್ಮೆಟ್ ಕೂಡ ಇಲ್ಲ, ಪೋಲಿಸರು ಫೈನ್ ಹಾಕಿದ್ರೆ ಕಷ್ಟ ಎನ್ನುತ್ತಾ, ಹೆಲ್ಮೆಟ್ ಇಲ್ಲದಿದ್ರೆ ಏನಂತೆ, ಪೈಪನ್ನೇ ಹೆಲ್ಮೆಟ್ ಮಾಡಿಕೊಳ್ಳುತ್ತೇನೆ ಎಂದು  ತಲೆಗೆ ಎಲ್ಬೋ ಪೈಪ್ ಧರಿಸಿ ನಗರದಲ್ಲಿ ಬೈಕ್ ಸವಾರಿ ಮಾಡಿದ್ದಾನೆ.  ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಂತಹ ಅದ್ಭುತ ಪ್ರತಿಭೆಗಳು ಕೇವಲ ನಮ್ಮ ಭಾರತದಲ್ಲಿ ಮಾತ್ರ ಕಾಣಸಿಗಲು ಸಾಧ್ಯ ಎಂದು ನೆಟ್ಟಿಗರು ಹೇಳಿದ್ದಾರೆ.

@troll_le_dostaa ಎಂಬ ಇನ್ಸ್ಟಾಗ್ರಾಮ್ ಪೇಜ್​​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಯಾವುದು ಹೊಸ ಹೆಲ್ಮೆಟ್ ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ಬೈಕ್ ಸವಾರನೊಬ್ಬ ಹೆಲ್ಮೆಟ್ ಇಲ್ಲ ಎಂಬ ಕಾರಣಕ್ಕೆ ಎಲ್ಬೋ ಪೈಪ್ ಅನ್ನು ತಲೆಗೆ ಸಿಕ್ಕಿಸಿಕೊಂಡು ರಸ್ತೆಯಲ್ಲಿ ಬೈಕ್ ಓಡಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಜೆಸಿಬಿ, ಸಿಮೆಂಟ್ ಮಿಕ್ಸರ್ ಬಳಸಿ 2 ಲಕ್ಷ ಜನರಿಗೆ ಅಡುಗೆ 

ವೈರಲ್​​ ವಿಡಿಯೋ ಇಲ್ಲಿದೆ:

ಡಿಸೆಂಬರ್ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 223K  ಲೈಕ್ಸ್​​ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸ್​​​ಗಳು ಹರಿದುಬಂದಿವೆ. ಒಬ್ಬ ಬಳಕೆದಾರರು ಇಂತಹ ತಮಾಷೆಯ ವಿಷಯಗಳು ನಮ್ಮ ಭಾರತದಲ್ಲಿ ಮಾತ್ರ ಕಾಣಸಿಗಲು ಸಾಧ್ಯ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼತಲೆ ಸೇಫ್ ಆಗಿದೆ, ಪೋಲಿಸರು ಹಿಡಿದು ಫೈನ್ ಹಾಕಂಗಿಲ್ಲʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಮಾರ್ಕೆಟಿಗೆ ಬಂದಿರೋ ಹೊಸ ಹೆಲ್ಮೆಟ್ʼ ಎಂದು ತಮಾಷೆ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ