Viral Video: ಪನೀರ್ ಮಟರ್ ಮಸಾಲದಲ್ಲಿ ಪನೀರ್ ಇಲ್ಲ! ಮದುವೆ ಮನೆಯಲ್ಲಿ ಘನಘೋರ ಯುದ್ಧ  

ಈ ಸಮಾಜದಲ್ಲಿ ಎಂತೆಂತಹ ಕಾರಣಗಳಿಗೆಲ್ಲಾ ಜಗಳಗಳು ನಡೆದಿವೆ, ಯುದ್ಧಗಳು ನಡೆದಿವೆ. ಆದ್ರೆ ಇಲ್ಲೊಂದು ಮದುವೆಯಲ್ಲಿ ಮಾತ್ರ ಪನೀರ್ ಮಟರ್ ಮಸಾಲದಲ್ಲಿ ಪನೀರ್ ಇಲ್ಲ ಎಂಬ ಕಾರಣಕ್ಕೆ ದೊಡ್ಡ ರಂಪಾಟ ನಡೆದಿದೆ. ಈ ಜಗಳದ ವಿಡಿಯೋ ಇದೀಗ ವೈರಲ್ ಆಗಿದ್ದು, ಇನ್ನು ಮೂರನೇ ಮಹಾಯುದ್ಧ ಈ ಪನೀರ್ ಕಾರಣದಿಂದಲೇ  ನಡೆಯಬಹುದು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

Viral Video: ಪನೀರ್ ಮಟರ್ ಮಸಾಲದಲ್ಲಿ ಪನೀರ್ ಇಲ್ಲ! ಮದುವೆ ಮನೆಯಲ್ಲಿ ಘನಘೋರ ಯುದ್ಧ  
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 20, 2023 | 6:13 PM

ಪನೀರ್ ಮಟರ್ ಮಸಾಲ ಕರಿಯಲ್ಲಿ ಪನೀರ್ ಇಲ್ಲ ಎಂಬ ಕಾರಣಕ್ಕೆ ಯಾರಾದ್ರೂ ಜಗಳ ಮಾಡ್ತಾರಾ? ಅರೇ ಇಷ್ಟು ಸಣ್ಣ ವಿಷ್ಯಕ್ಕೆ ಯಾರು ಜಗಳವಾಡ್ತಾರೆ ಅಂತ ನೀವು ಭಾವಿಸಬಹುದು, ಆದ್ರೆ ಇಲ್ಲೊಂದು ಉತ್ತರ ಭಾರತದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆದಿದೆ. ಹೌದು ಮದುವೆ ಮನೆಯಲ್ಲಿ ಪನೀರ್ ಮಟರ್ ಮಸಾಲದಲ್ಲಿ ಪನೀರ್ ಇರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ  ಮಧು ಮತ್ತು ವರನ ಕುಟುಂಬ ಸದಸ್ಯರ ಮಧ್ಯೆ ಜಗಳ ಏರ್ಪಟ್ಟಿದೆ.  ಈ ಜಗಳದ ವಿಡಿಯೋ ಇದೀಗ ಎಲ್ಲೆಡೆ ವೈರಲ್  ಆಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಈ ಪನೀರ್ ಕಾರಣದಿಂದಲೇ ಜಗತ್ತಿನಲ್ಲಿ ಮೂರನೇ ಮಹಾಯುದ್ಧ ನಡೆದರೂ ನಡೆಯಬಹುದು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಈ ವಿಡಿಯೋವನ್ನು @gharkekalesh ಎಂಬ   X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ʼಪನೀರ್ ಮಟರ್ ಕರಿಯಲ್ಲಿ ಪನೀರ್ ಇಲ್ಲ ಎಂಬ ಕಾರಣಕ್ಕೆ ಮಧು ಮತ್ತು ವರನ ಕಡೆಯವರು ಮದುವೆ ಸಮಯದಲ್ಲಿ ಜಗಳಕ್ಕೆ ನಿಂತಿರುವ ದೃಶ್ಯʼ ಎಂಬ ಶೀರ್ಷಿಕೆಯನ್ನು ಸಹ ಬರೆಯಲಾಗಿದೆ.  ವಿಡಿಯೋದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಯುವಕರ ಗುಂಪೊಂದು ಮದುವೆ ಮನೆಯಲ್ಲಿ ಪರಸ್ಪರ ಕಿತ್ತಾಡುತ್ತಿರುವುದದು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ:

ವಿಡಿಯೋದಲ್ಲಿ ಮದುವೆ ಕಾರ್ಯಕ್ರಮದಲ್ಲಿ  ಪನೀರ್ ಮಟರ್ ಮಸಾಲದಲ್ಲಿ ಪನೀರ್ ಇರಲಿಲ್ಲ ಎಂಬ ಕಾರಣಕ್ಕೆ ಊಟದ ಹಾಲ್ನಲ್ಲಿಯೇ ವರ ಮತ್ತು ವಧುವಿನ ಸಂಬಂಧಿಕರ ನಡುವೆ ದೊಡ್ಡ ರಂಪಾಟವೇ ನಡೆದಿದೆ.   ಯುವಕರ ಗುಂಪೊಂದು ಪರಸ್ಪರ ಕುರ್ಚಿಗಳಲ್ಲಿ ಹೊಡೆದಾಡಿಕೊಂಡು ಜಗಳವಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಈ ಮನುಷ್ಯ ಯಾಕಿಷ್ಟು ಕ್ರೂರಿ? ಪಂಜರದಲ್ಲಿ ಬಂಧಿಯಾಗಿದ್ದ ಕಂದನನ್ನು ರಕ್ಷಿಸಲು ತಾಯಿ ಕೋತಿ ಪಟ್ಟ ಪಾಡು ನೋಡಿ 

ಡಿಸೆಂಬರ್ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 26.7K ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ  ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ.  ಒಬ್ಬ ಬಳಕೆದಾರರು ʼಪನೀರ್ ಇಲ್ಲ ಅಂದ್ರೆ ಮದುವೆ ಕೂಡಾ ಇಲ್ಲʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮೂರನೇ ಮಹಾಯುದ್ಧ ಈ ಪನೀರ್ ಕಾರಣದಿಂದಲೇ ನಡೆಯಬಹುದುʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು  ಪನೀರ್ ಕಾರಣಕ್ಕೂ ಜಗಳವಾಡುವುದುಂಟಾ, ಇದು ತುಂಬಾ ತಮಾಷೆಯಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ