AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿ, ಬೆಕ್ಕಿನ ಮರಿಗಳನ್ನು ಇಲ್ಲಿ ತಂದು ಬಿಡುವವರು ನಿಮ್ಮ ಹೆಂಡತಿ ಮಕ್ಕಳನ್ನು ಇಲ್ಲೇ ಬಿಡಿ; ಬ್ಯಾನರ್ ವೈರಲ್

ಅದೆಷ್ಟೋ ಜನರು ಕರುಣೆಯಿಲ್ಲದೆ ಇನ್ನೂ ಕಣ್ಣು ಬಿಟ್ಟು ಪ್ರಪಂಚವನ್ನು ಕಾಣದಿರುವ ಪುಟ್ಟ ನಾಯಿ ಮರಿಗಳನ್ನು, ಬೆಕ್ಕಿನ ಮರಿಗಳನ್ನು ತಂದು ಬೀದಿ ಬದಿಗಳಲ್ಲಿರುವ ಪೊದೆಗಳ ಬಳಿ ಒಟ್ಟು ಹೋಗುತ್ತಾರೆ. ಇಂತಹ ಅಮಾನವೀಯ ಕೃತ್ಯಗಳು ನಡೆಯುತ್ತಲೇ ಇರುತ್ತವೆ, ಇಂತಹವರಿಗೆ ಸರಿಯಾಗಿ ಬುದ್ದಿ ಕಲಿಸಲೆಂದೇ, ಯಾರೋ ಪುಣ್ಯಾತ್ಮರು  ಇಲ್ಲೊಂದು ಬೀದಿ ಬದಿಯಲ್ಲಿ ʼನಾಯಿ, ಬೆಕ್ಕಿನ ಮರಿಯನ್ನು ತಂದು ಇಲ್ಲಿ ಬಿಡುವವರು, ನಿಮ್ಮ ಹೆಂಡತಿ ಮಕ್ಕಳನ್ನು ಸಹ ತಂದು ಇಲ್ಲೇ ಬಿಡಿ ಯಾರಾದರೂ ಸಾಕುತ್ತಾರೆʼ ಎಂಬ ಅದ್ಭುತ ಬರಹವನ್ನು ಬರೆದಿರುವ ಬ್ಯಾನರ್  ಹಾಕಿದ್ದಾರೆ. ಈ ಕುರಿತ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. 

ನಾಯಿ, ಬೆಕ್ಕಿನ ಮರಿಗಳನ್ನು ಇಲ್ಲಿ ತಂದು ಬಿಡುವವರು ನಿಮ್ಮ ಹೆಂಡತಿ ಮಕ್ಕಳನ್ನು ಇಲ್ಲೇ ಬಿಡಿ; ಬ್ಯಾನರ್ ವೈರಲ್
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Dec 20, 2023 | 12:56 PM

Share

ಈ ಕೆಲವೊಬ್ರು ಹೆಂಗಂದ್ರೆ ತಮ್ಮ ಮನೆಯಲ್ಲಿ ನಾಯಿ ಅಥವಾ ಬೆಕ್ಕು ಮರಿ ಹಾಕಿದ್ರೆ, ಆ ಮರಿಗಳು ಹೆಣ್ಣಾಗಿದ್ದರೆ, ಇನ್ನೂ ಸರಿಯಾಗಿ ಕಣ್ಣು ಬಿಟ್ಟು ಪ್ರಪಂಚವನ್ನೇ ನೋಡದ ಆ ಮುಗ್ಧ ಜೀವಿಗಳನ್ನು  ತಂದು ಬೀದಿ ಬದಿಗಳಲ್ಲಿ  ಬಿಡುಹೋಗುತ್ತಾರೆ.  ಪಾಪ ಆ ಮರಿಗಳು ಹಸಿವಿನಿಂದ ಬೀದಿಯಲ್ಲಿ ಅಳುತ್ತಾ, ಚೀರುತ್ತಾ ಇರುತ್ತವೆ.  ಯಾರಾದರೂ ಕರುಣೆ ತೋರಿ ಆ ಮರಿಗಳನ್ನು ಮನೆಗೆ ತೆಗೆದುಕೊಂಡು ಹೋದ್ರೆ, ಅವುಗಳಿಗೆ ಒಳ್ಳೆಯ ಜೀವನ ಸಿಗುತ್ತೆ, ಆದರೆ ಆ ಮುಗ್ಧ ಜೀವಿಗಳನ್ನು  ಹಾಗೇನೆ ಬೀದಿಲಿ ಬಿಟ್ಟರೆ ಪಾಪ ಅವುಗಳು ಹಸಿವಿನಿಂದ ಸಾಯಲುಬಹುದು.  ಈ ರೀತಿ ಅದೆಷ್ಟೋ ಜನರು ಮಾನವೀಯತೆಯನ್ನು ಮರೆತು ಬೆಕ್ಕು, ನಾಯಿ ಮರಿಗಳನ್ನು ಬೀದಿಯಲ್ಲಿ ತಂದು ಎಸೆದುಬಿಡುತ್ತಾರೆ. ಇಂತಹವರಿಗೆ ಬುದ್ಧಿ ಕಲಿಸಬೇಕೆಂದೇ,  ಯಾರೋ ಪುಣ್ಯಾತ್ಮರು ಇಲ್ಲೊಂದು ಬೀದಿ ಬದಿಯಲ್ಲಿ ನಾಯಿ ಬೆಕ್ಕಿನ ಮರಿಗಳನ್ನು ಬಿಡುವ ಹಾಗೆ ನಿಮ್ಮ ಹೆಂಡತಿ ಮಕ್ಕಳನ್ನು ಸಹ ಬೀದಿಗೆ ಬಿಡಿ, ಅವರನ್ನು ಯಾರಾದರೂ ಸಾಕುತ್ತಾರೆ ಎಂಬ ಅದ್ಭುತವಾದ ಬ್ಯಾನರ್ ಒಂದನ್ನು ಹಾಕಿದ್ದಾರೆ. ಈ ಕುರಿತ ವಿಡಿಯೋ ಇದೀಗ  ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ.

@pommi_mangalore ಎಂಬ ಇನ್ಸ್ಟಾಗ್ರಾಮ್ ಪೇಜ್​​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ನಾಯಿ ಮತ್ತು ಬೆಕ್ಕಿನ ಮರಿಗಳನ್ನು ತಂದು ಬಿಡುವ ಜಾಗದಲ್ಲಿ ಒಂದು ಬ್ಯಾನರ್ ಅನ್ನು  ನೇತು ಹಾಕಲಾಗಿದ್ದು, ಅದರಲ್ಲಿ ಇಲ್ಲಿ ನಾಯಿ ಮರಿ, ಬೆಕ್ಕಿನ ಮರಿ ತಂದು ಬಿಡುವವರು ನಿಮ್ಮ ಹೆಂಡತಿ ಮಕ್ಕಳನ್ನು ಸಹ ಇಲ್ಲೇ ತಂದು ಬಿಡಿ ಯಾರಾದರೂ ಸಾಕುತ್ತಾರೆ, ಎಂಬ ಬರಹವನ್ನು  ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: ಭಾರೀ ಸುದ್ದಿಯಾಗಿದ್ದ ಲವ್ ಗುರು ಮಾತುಕನಾಥ್ – ಜೂಲಿ ಲವ್ ಸ್ಟೋರಿ, ಈಗ ಬ್ರೇಕಪ್​​​ ಮಾಡಿಕೊಂಡಿದ್ದು ಏಕೆ? 

ವೈರಲ್​​ ವಿಡಿಯೋ ಇಲ್ಲಿದೆ:

ನವೆಂಬರ್ 28ರಂದು ಹಂಚಿಕೊಳ್ಳಲಾದ ಈ ವಿಡಿಯೋ  1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 78.8K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಗಳು ಹರಿದುಬಂದಿವೆ. ಒಬ್ಬ ಬಳಕೆದಾರರು ʼ ಇದು ಸರಿಯಾಗಿ ಹಾಕಿದ್ದೀರಾ, ನಾನು ದಿನ ಕೆಲಸಕ್ಕೆ ಹೋಗೋವಾಗ ರಸ್ತೆ ಬದಿಗಳಲ್ಲಿರುವ ಪೊದೆಯ ಹಿಂದೆ ಎಷ್ಟೋ ನಾಯಿ ಮರಿಗಳು ಇರುತ್ತವೆ, ಪಾಪ ಇನ್ನೂ  ಸರಿಯಾಗಿ ಕಣ್ಣು ಸಹ ತೆರೆಯದ ಮುಗ್ಧ ಜೀವಿಗಳನ್ನು ಒಂದು ಚೂರು ಕಣಿಕರವಿಲ್ಲದೆ ಬೀದಿಲಿ ಎಸೆದು ಹೋಗುವವರಿಗೆ  ಈ ಬ್ಯಾನರ್ ಹೇಳಿ ಮಾಡಿಸಿದಂತಿದೆʼ ಎಂದು ಹೇಳಿದ್ದಾರೆ.  ಇನ್ನೊಬ್ಬ ಬಳಕೆದಾರರು ಇದು ಇದು ಆಕ್ಚುಲಿ ಚೆನ್ನಾಗಿರೋದು ಅಂದ್ರೆ ಎಂದು ಕಮೆಂಟ್ ಮಾಡಿದ್ದಾರೆ.  ಇನ್ನೂ ಅನೇಕರು ಈ ಬ್ಯಾನರ್  ಕಂಡು ಜನರಿಗೆ ಇದು ಒಂದೊಳ್ಳೆ ಸಂದೇಶ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ