AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೇಮಲು’ ಫ್ಯಾನ್ಸ್‌ಗೆ ಶಾಕಿಂಗ್ ನ್ಯೂಸ್; ಆ ಒಂದು ಕಾರಣಕ್ಕೆ ಸೀಕ್ವೆಲ್ ಕೈ ಬಿಟ್ಟ ಚಿತ್ರತಂಡ

'ಪ್ರೇಮಲು' ಚಿತ್ರದ ಸೀಕ್ವೆಲ್ 'ಪ್ರೇಮಲು 2' ಸದ್ಯಕ್ಕೆ ರದ್ದಾಗಿದೆ. ಕಥೆ ಅಂದುಕೊಂಡಷ್ಟು ಚೆನ್ನಾಗಿ ಮೂಡಿಬಾರದ ಕಾರಣ ತಂಡ ಈ ನಿರ್ಧಾರ ಕೈಗೊಂಡಿದೆ ಎಂದು ನಟ ನಸ್ಲೆನ್ ಖಚಿತಪಡಿಸಿದ್ದಾರೆ. ಮೊದಲ ಭಾಗದ ಯಶಸ್ಸಿನ ನಂತರ ಸೀಕ್ವೆಲ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಇದು ನಿರಾಶಾದಾಯಕ ಸುದ್ದಿ. ಆದರೆ, ಉತ್ತಮ ಕಥೆ ಇಲ್ಲದೆ ಸಿನಿಮಾ ಮಾಡದಿರುವ ತಂಡದ ಬುದ್ಧಿವಂತಿಕೆಯ ನಿರ್ಧಾರವನ್ನು ಹಲವರು ಶ್ಲಾಘಿಸಿದ್ದಾರೆ.

'ಪ್ರೇಮಲು' ಫ್ಯಾನ್ಸ್‌ಗೆ ಶಾಕಿಂಗ್ ನ್ಯೂಸ್; ಆ ಒಂದು ಕಾರಣಕ್ಕೆ ಸೀಕ್ವೆಲ್ ಕೈ ಬಿಟ್ಟ ಚಿತ್ರತಂಡ
ಪ್ರೇಮಲು
ರಾಜೇಶ್ ದುಗ್ಗುಮನೆ
|

Updated on: May 30, 2026 | 10:07 AM

Share

2024ರಲ್ಲಿ ತೆರೆಕಂಡ ‘ಪ್ರೇಮಲು’ ಸಿನಿಮಾ (Premalu) ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ನಸ್ಲೆನ್ ಮತ್ತು ಮಮಿತಾ ಬೈಜು ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಯುವ ಪ್ರೇಕ್ಷಕರ ಮನಗೆದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಕೇವಲ ಮಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತಾದ್ಯಂತ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಹೀಗಾಗಿ, ‘ಪ್ರೇಮುಲು’ ಚಿತ್ರಕ್ಕೆ ಸೀಕ್ವೆಲ್ ಮಾಡಲು ತಂಡ ಪ್ಲ್ಯಾನ್ ಮಾಡಿತ್ತು. ಆದರೆ, ಈಗ ಅದನ್ನು ಕೈ ಬಿಟ್ಟಿದೆ.

ಮೊದಲ ಭಾಗದ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಅದೇ ನಟರು ಹಾಗೂ ತಾಂತ್ರಿಕ ವರ್ಗದೊಂದಿಗೆ ‘ಪ್ರೇಮಲು 2’ ಮಾಡಲು ಚಿತ್ರತಂಡ ಯೋಜನೆ ರೂಪಿಸಿತ್ತು. 2026ರ ಮಧ್ಯಭಾಗದಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭವಾಗಬೇಕಿತ್ತು. ಆದರೆ, ಈಗ ಈ ಸೀಕ್ವೆಲ್‌ಗಾಗಿ ಕಾಯುತ್ತಿದ್ದ ಸಿನಿಪ್ರೇಮಿಗಳಿಗೆ ಒಂದು ನಿರಾಶಾದಾಯಕ ಸುದ್ದಿ ಹೊರಬಿದ್ದಿದೆ.

ಇತ್ತೀಚಿನ ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿದ ನಟ ನಸ್ಲೆನ್, ‘ಪ್ರೇಮಲು 2′ ಸದ್ಯಕ್ಕೆ ಸೆಟ್ಟೇರುತ್ತಿಲ್ಲ ಎಂಬ ಶಾಕಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಕಥೆ ಅಂದುಕೊಂಡಷ್ಟು ಚೆನ್ನಾಗಿ ಮೂಡಿಬರದ ಕಾರಣ, ಸೀಕ್ವೆಲ್ ಮಾಡುವ ಆಲೋಚನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಸಿನಿಪ್ರೇಮಿಗಳಿಗೆ ಬೇಸರ ತಂದಿರುವುದು ನಿಜವಾದರೂ, ಚಿತ್ರತಂಡ ತೆಗೆದುಕೊಂಡಿರುವ ಈ ನಿರ್ಧಾರ ತುಂಬಾನೇ ಬುದ್ಧಿವಂತಿಕೆಯಿಂದ ಕೂಡಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇತ್ತೀಚಿನ ದಿನಗಳಲ್ಲಿ ಕೇವಲ ಹೈಪ್ ಕ್ರಿಯೇಟ್ ಮಾಡಲು, ಸರಿಯಾದ ಕಥೆ ಇಲ್ಲದಿದ್ದರೂ ಸೀಕ್ವೆಲ್‌ಗಳನ್ನು ಅನೌನ್ಸ್ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಆದರೆ ನಂತರ ಅವು ಅರ್ಧಕ್ಕೆ ನಿಲ್ಲುತ್ತವೆ ಅಥವಾ ವಿಳಂಬವಾಗುತ್ತವೆ.’ಪ್ರೇಮಲು’ ಮೊದಲ ಭಾಗ ದೊಡ್ಡ ಮಟ್ಟದ ಕ್ಲಾಸಿಕ್ ಹಿಟ್ ಆಗಿರುವುದರಿಂದ, ಎರಡನೇ ಭಾಗದ ಮೇಲೆ ಸಹಜವಾಗಿಯೇ ಬೆಟ್ಟದಷ್ಟು ನಿರೀಕ್ಷೆ ಇತ್ತು. ಒಂದು ವೇಳೆ ಕೇವಲ ಹೆಸರಿಗಾಗಿ ಕಳಪೆ ಕಥೆಯೊಂದಿಗೆ ಸಿನಿಮಾ ಮಾಡಿದ್ದರೆ, ಅದು ಮೊದಲ ಭಾಗದ ಹೆಸರನ್ನೂ ಕೆಡಿಸುವ ಸಾಧ್ಯತೆ ಇರುತ್ತಿತ್ತು ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ಸಿನಿಮಾದಿಂದ ಅದೃಷ್ಟ ಬದಲು, ಮಮಿತಾ ಬೈಜು ಈಗ ಸ್ಟಾರ್ ನಟಿ 

ಕಥೆ ಸರಿಯಾಗಿ ಬಾರದಿದ್ದಾಗ ಹಠಕ್ಕೆ ಬಿದ್ದು ಸಿನಿಮಾ ಮಾಡುವ ಬದಲು, ಆ ಯೋಜನೆಯನ್ನೇ ಕೈಬಿಟ್ಟು ‘ಪ್ರೇಮಲು’ ತಂಡ ಒಳ್ಳೆಯ ಕೆಲಸ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More