ಫಹಾದ್ ಫಾಸಿಲ್ ಹಿಂದಿ ಸಿನಿಮಾಗಳಿಂದ ದೂರ ಇರೋದೇಕೆ? ಕಾರಣ ಕೊಟ್ಟ ನಟ

‘ಕರಣ್ ಜೋಹರ್, ವಿಕ್ಕಿ ಕೌಶಲ್ ಜೊತೆ ನನಗೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಕರಣ್ ಜೋಹರ್ ಅವರು ನನ್ನ ಸಿನಿಮಾಗಳನ್ನು ನೋಡಿ ಅದರಲ್ಲಿ ಏನು ಇಷ್ಟ ಆಯಿತು ಎಂಬುದನ್ನು ಚರ್ಚೆ ಮಾಡುತ್ತಾರೆ’ ಎಂದಿದ್ದಾರೆ ಅವರು.

ಫಹಾದ್ ಫಾಸಿಲ್ ಹಿಂದಿ ಸಿನಿಮಾಗಳಿಂದ ದೂರ ಇರೋದೇಕೆ? ಕಾರಣ ಕೊಟ್ಟ ನಟ
ಫಹಾದ್
Follow us
ರಾಜೇಶ್ ದುಗ್ಗುಮನೆ
|

Updated on: May 08, 2024 | 8:54 AM

ಮಲಯಾಳಂ ನಟ ಫಹಾದ್ ಫಾಸಿಲ್ (Fahad Faasil) ಅವರು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರೆಂದಿಗೂ ಬಾಲಿವುಡ್​ನತ್ತ ಮುಖ ಮಾಡಿಲ್ಲ. ಹಾಗಂತ ಅವರಿಗೆ ಹಿಂದಿ ಸಿನಿಮಾಗಳಿಂದ ಆಫರ್​ಗಳು ಬಂದಿಲ್ಲ ಎಂದಲ್ಲ. ಈ ಚಿತ್ರಗಳನ್ನು ಒಪ್ಪಿಕೊಳ್ಳದೆ ಇರಲು ಅವರು ಕಾರಣ ನೀಡಿದ್ದಾರೆ. ಇತ್ತೀಚೆಗೆ ಫಿಲ್ಮ್​ ಕಂಪ್ಯಾನಿಯನ್​ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಫಹಾದ್ ಫಾಸಿಲ್ ಮಾಹಿತಿ ನೀಡಿದ್ದಾರೆ.

ಫಹಾದ್ ಫಾಸಿಲ್ ಅವರು ಮೊದಲಿನಿಂದಲೂ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಇದಲ್ಲದೆ, ಪರಭಾಷೆಯ ‘ಸೂಪರ್ ಡಿಲಕ್ಸ್’, ‘ವಿಕ್ರಮ್’, ‘ಪುಷ್ಪ’ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅವರಿಗೆ ಈ ಮೊದಲು ಹಿಂದಿ ಆಫರ್​ಗಳು ಬಂದಿದ್ದವು. ಆದರೆ, ಅವರಿಗೆ ಯಾವುದೂ ಇಷ್ಟ ಆಗಿಲ್ಲ.

‘ಇದು ಐದಾರು ವರ್ಷಗಳ ಹಿಂದಿನ ಮಾತು. ನನ್ನನ್ನು ಅಪ್ರೋಚ್ ಮಾಡಿದ ಮೊದಲ ಹಿಂದಿ ಚಿತ್ರಕ್ಕೆ ನಾನು ಯೆಸ್ ಹೇಳಿದ್ದೆ. ಆದರೆ, ಸ್ಕ್ರಿಪ್ಟ್ ಫೈನಲ್ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಆ ಬಳಿಕ ನಿರ್ದೇಶಕರು ಬೇರೆಯವರನ್ನು ಆಯ್ಕೆ ಮಾಡಿಕೊಂಡರು. ನಾನು ಚಿತ್ರದಿಂದ ಹೊರ ನಡೆದೆ. ಯಾವುದೇ ಗಂಭೀರ ಅಥವಾ ಸರಿಯಾದ ಕಥೆ ಹಿಂದಿಯಲ್ಲಿ ನನಗೆ ಸಿಕ್ಕಿಲ್ಲ’ ಎಂದಿದ್ದಾರೆ ಫಹಾದ್ ಫಾಸಿಲ್.

‘ನನಗೆ ಸರಿಯಾಗಿ ಹಿಂದಿ ಬರೋದಿಲ್ಲ. ಹೀಗಾಗಿ, ಕಾಶ್ಮೀರದಲ್ಲಿ ಸರಿಯಾಗಿ ಹಿಂದಿ ಮಾತನಾಡಲು ಬರದೇ ಇರುವ ದಕ್ಷಿಣ ಭಾರತದ ವ್ಯಕ್ತಿಯಾಗಿ ಕಾಣಿಸಿಕೊಳ್ಳಬೇಕು. ನಾನು ಹಿಂದಿ ಸಿನಿಮಾ ಮಾಡೋಕೆ ರೆಡಿ ಇದ್ದೇನೆ. ನಾನು ತೆಲುಗು, ತಮಿಳು ಸಿನಿಮಾ ಮಾಡಿದ್ದೇನೆ. ಹಿಂದಿಯನ್ನೂ ಮಾಡುತ್ತೇನೆ. ಆದರೆ, ಯಾವಾಗ ಗೊತ್ತಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ರಿಯಾಲಿಟಿ ಶೋನಲ್ಲಿ ಅಪಹಾಸ್ಯ; ಅಸಮಾಧಾನಗೊಂಡ ಕರಣ್ ಜೋಹರ್ ಏನು ಮಾಡಿದ್ರು ನೋಡಿ

‘ಕರಣ್ ಜೋಹರ್, ವಿಕ್ಕಿ ಕೌಶಲ್ ಜೊತೆ ನನಗೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಕರಣ್ ಜೋಹರ್ ಅವರು ನನ್ನ ಸಿನಿಮಾಗಳನ್ನು ನೋಡಿ ಅದರಲ್ಲಿ ಏನು ಇಷ್ಟ ಆಯಿತು ಎಂಬುದನ್ನು ಚರ್ಚೆ ಮಾಡುತ್ತಾರೆ’ ಎಂದಿದ್ದಾರೆ ಅವರು. ಫಹಾದ್ ಫಾಸಿಲ್ ನಟನೆಯ ‘ಆವೇಶಂ’ ಸಿನಿಮಾ ಹಿಟ್ ಆಗಿದೆ. ಬೆಂಗಳೂರಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.