AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಗಿದಿಲ್ಲ ‘ಬಾಹುಬಲಿ’ ಕತೆ, ರಾಜಮೌಳಿ ಹಾಕಿದ್ದಾರೆ ಹಲವು ಯೋಜನೆ

‘ಬಾಹುಬಲಿ’ ಸಿನಿಮಾದ ಪ್ರೀಕ್ವೆಲ್ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಅನಿಮೇಟೆಡ್ ಸರಣಿ ಬಿಡುಗಡೆ ಆಗುತ್ತಿದೆ. ‘ಬಾಹುಬಲಿ’ ಕತೆಯನ್ನು ಮುಂದುವರೆಸುವ ಬಗ್ಗೆ ಹಲವು ಯೋಜನೆಗಳು ಇವೆಯೆಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

ಮುಗಿದಿಲ್ಲ ‘ಬಾಹುಬಲಿ’ ಕತೆ, ರಾಜಮೌಳಿ ಹಾಕಿದ್ದಾರೆ ಹಲವು ಯೋಜನೆ
ಮಂಜುನಾಥ ಸಿ.
|

Updated on: May 08, 2024 | 11:18 AM

Share

ಭಾರತೀಯ ಚಿತ್ರರಂಗ (Movie) ಇಂದು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದಕ್ಕೆಲ್ಲ ಮೂಲ ಕಾರಣವಾಗಿದ್ದು ರಾಜಮೌಳಿ (SS Rajamouli) ನಿರ್ದೇಶನದ ‘ಬಾಹುಬಲಿ’ ಸಿನಿಮಾ. ಆ ಸಿನಿಮಾದ ಬಳಿಕ ಭಾರತೀಯ ಚಿತ್ರರಂಗವನ್ನು ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗವನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಯ್ತು. ರಾಜಮೌಳಿ ಹಾಕಿಕೊಟ್ಟ ದಾರಿಯಲ್ಲಿ ಹಲವರು ನಡೆದು ಯಶಸ್ವಿಯೂ ಆಗಿದ್ದಾರೆ. ಭಾರತೀಯ ಚಿತ್ರರಂಗದ ಪತಾಕೆಯನ್ನು ಎತ್ತರತ್ತೆರಕ್ಕೆ ಹಾರಿಸುತ್ತಾ ಸಾಗಿಸುತ್ತಿದ್ದಾರೆ. ಭಾರತೀಯ ಚಿತ್ರ ಇತಿಹಾಸದಲ್ಲಿ ‘ಬಾಹಬಲಿ’ಗೆ ವಿಶೇಷ ಸ್ಥಾನವಿದೆ. ಸಿನಿಮಾ ಬಿಡುಗಡೆ ಆಗಿ ಏಳು ವರ್ಷಗಳಾಗಿದ್ದರೂ ಸಹ ಈಗಲೂ ಆ ಸಿನಿಮಾದ ದೃಶ್ಯಗಳು ವೈರಲ್ ಆಗುತ್ತಲೇ ಇರುತ್ತವೆ. ‘ಬಾಹುಬಲಿ’ (Bahubali) ಸಿನಿಮಾದ ಕತೆ ಎರಡು ಭಾಗಗಳಲ್ಲಿ ಸಿನಿಮಾ ಆಗಿತ್ತು. ಆದರೆ ನಿರ್ದೇಶಕ ರಾಜಮೌಳಿ ‘ಬಾಹುಬಲಿ’ ಕತೆಯನ್ನು ಮುಂದುವರೆಸುವ ಇರಾದೆ ಹೊಂದಿದ್ದಾರೆ. ಈ ಬಗ್ಗೆ ಸ್ವತಃ ರಾಜಮೌಳಿ ಮಾತನಾಡಿದ್ದಾರೆ.

‘ಬಾಹುಬಲಿ’ ಇದೀಗ ಕಾರ್ಟೂನ್ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಅನಿಮೇಟೆಡ್ ಸರಣಿ ಬಿಡುಗಡೆ ಆಗಲಿದೆ. ‘ಬಾಹುಬಲಿ’ ಸಿನಿಮಾದ ಪ್ರೀಕ್ವೆಲ್ ಇದಾಗಿದ್ದು, ಕಾರ್ಟೂನ್​ನಲ್ಲಿ ಮಾಹಿಷ್ಮತಿ ಸಾಮ್ರಾಜ್ಯದ ಉಗಮ, ಅಲ್ಲಿ ಅಧಕಾರಕ್ಕೆ ನಡೆದ ಯುದ್ಧಗಳು ಇನ್ನಿತರೆ ವಿಷಯಗಳನ್ನು ಒಳಗೊಂಡಿರಲಿದೆ. ಕಾರ್ಟೂನ್ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆಂದು ಆಗಮಿಸಿದ್ದ ರಾಜಮೌಳಿ, ‘ಬಾಹುಬಲಿ’ ಕತೆಯ ಬಗ್ಗೆ ತಮಗಿರುವ ಹಲವು ಯೋಜನೆಗಳ ಬಗ್ಗೆಯೂ ಮಾತನಾಡಿದ್ದಾರೆ.

‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಕಾರ್ಟೂನಿನ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಳ್ಳಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜಮೌಳಿ, ‘ಅನಿಮೇಟೆಡ್ ಸರಣಿ ಬಿಡುಗಡೆ ಆಗುತ್ತಿರುವುದು ಕೇವಲ ಆರಂಭವಷ್ಟೆ. ‘ಬಾಹುಬಲಿ’ ಕುರಿತಂತೆ ನನಗೆ ಹಲವು ಯೋಚನೆಗಳಿವೆ. ‘ಬಾಹುಬಲಿ’ ಕತೆ ಮುಂದುವರೆಯಲಿದೆ. ಅದು ಇಲ್ಲಿಗೆ ನಿಲ್ಲುವುದಿಲ್ಲ. ಸಿನಿಮಾ, ಅನಿಮೇಟೆಡ್ ಸರಣಿ ಮಾತ್ರವೇ ಅಲ್ಲದೆ ಬೇರೆ-ಬೇರೆ ರೂಪದಲ್ಲಿ ಜನರ ಮುಂದೆ ಬರಲಿದೆ. ಆ ಬಗ್ಗೆ ಹಲವು ಯೋಜನೆಗಳಿವೆ ಆದರೆ ಸೂಕ್ತ ಸಮಯ ಬಂದಾಗ ಅದನ್ನೆಲ್ಲ ಹಂಚಿಕೊಳ್ಳುವೆ’ ಎಂದಿದ್ದಾರೆ.

ಇದನ್ನೂ ಓದಿ:‘ಬಾಹುಬಲಿ’ ಚಿತ್ರದ ಪ್ರಚಾರಕ್ಕೆ ಖರ್ಚು ಮಾಡಿದ ಬಜೆಟ್ ಎಷ್ಟು? ಕೇಳಿದ್ರೆ ಅಚ್ಚರಿ ಪಡ್ತೀರಾ

‘ಬಾಹುಬಲಿ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಿತ್ತು. ಮೊದಲ ಭಾಗ 2015 ರಲ್ಲಿ ಹಾಗೂ ಎರಡನೇ ಭಾಗ 2017 ರಲ್ಲಿ ತೆರೆಗೆ ಬಂದಿತ್ತು. ಎರಡೂ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಈ ಸಿನಿಮಾದ ಮೂಲಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಭಾರಿ ದೊಡ್ಡ ಸ್ಟಾರ್​ಡಂ ಪ್ರಭಾಸ್​ಗೆ ದೊರಕಿತು. ರಾಣಾ ದಗ್ಗುಬಾಟಿ ಸಹ ಇದೇ ಸಿನಿಮಾದಿಂದ ಸ್ಟಾರ್ ಎನಿಸಿಕೊಂಡರು. ಇದೀಗ ರಾಜಮೌಳಿ ಮಹೇಶ್ ಬಾಬು ಜೊತೆಗೆ ಹೊ ಸಿನಿಮಾ ಮಾಡುತ್ತಿದ್ದಾರೆ. ಮಹೇಶ್ ಬಾಬು ಜೊತೆಗೆ ಮಾಡಲಿರುವ ಸಿನಿಮಾ ಸಾಹಸಮಯ ಯಾತ್ರೆಯ ಕುರಿತಾದ ಸಿನಿಮಾ ಆಗಿರಲಿದೆಯಂತೆ. ಸಿನಿಮಾಕ್ಕೆ ಸಕಲ ತಯಾರಿಗಳನ್ನು ಮುಗಿಸಿದ್ದು, ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ.

‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಅನಿಮೇಟೆಡ್ ಸರಣಿ ಮೇ 17 ಕ್ಕೆ ಬಿಡುಗಡೆ ಆಗಲಿದೆ. ಈ ಅನಿಮೇಟೆಡ್ ಸರಣಿಯನ್ನು ಶರದ್ ದೇವರಾಜನ್ ನಿರ್ದೇಶನ ಮಾಡಿದ್ದಾರೆ. ಕತೆಯ ಮೇಲುಸ್ತುವಾರಿಯನ್ನು ಎಸ್​ಎಸ್ ರಾಜಮೌಳಿ ನೋಡಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆಯೇ ‘ಬಾಹುಬಲಿ’ ಅನಿಮೇಟೆಡ್ ಸರಣಿ ನಿರ್ಮಾಣಕ್ಕೆ ವೇದಿಕೆ ರೂಪುಗೊಂಡಿತ್ತು. ಆದರೆ ಆ ಪ್ರಾಜೆಕ್ಟ್ ಅಂದುಕೊಂಡಂತೆ ಬರಲಿಲ್ಲವೆಂದು ನಿಲ್ಲಿಸಲಾಗಿತ್ತು. ಆ ನಂತರ ಹೊಸ ಕ್ರಿಯೇಟರ್​ಗಳ ಸಹಾಯದಿಂದ ಈಗ ಪ್ರಾಜೆಕ್ಟ್ ಪೂರ್ಣಗೊಳಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ