AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚು ಜನರ ತಲುಪಲು ವಿಫಲವಾಯಿತು ಹೊಸ ಕಪಿಲ್ ಶರ್ಮಾ ಶೋ; ಕಾರಣಗಳೇನು?

ಕಪಿಲ್ ಶರ್ಮಾ ಕಾರ್ಯಕ್ರಮವನ್ನು ಎಲ್ಲರೂ ನೋಡುತ್ತಿದ್ದ ಕಾಲವೊಂದಿತ್ತು. ಕಪಿಲ್ ಶರ್ಮಾ ಅವರ ಕಾರ್ಯಕ್ರಮವನ್ನು ಗ್ರಾಮೀಣ ಪ್ರೇಕ್ಷಕರು ಹೆಚ್ಚಾಗಿ ವೀಕ್ಷಿಸುತ್ತಿದ್ದರು. ಕಪಿಲ್ ಶರ್ಮಾ ಅವರ ಕಾರ್ಯಕ್ರಮವನ್ನು ವೀಕ್ಷಿಸುವ ಈ ಪ್ರೇಕ್ಷಕರು ಇನ್ನೂ ನೆಟ್‌ಫ್ಲಿಕ್ಸ್‌ನಿಂದ ದೂರವಿದ್ದಾರೆ.

ಹೆಚ್ಚು ಜನರ ತಲುಪಲು ವಿಫಲವಾಯಿತು ಹೊಸ ಕಪಿಲ್ ಶರ್ಮಾ ಶೋ; ಕಾರಣಗಳೇನು?
ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:May 08, 2024 | 10:38 AM

ಕಾಮಿಡಿ ರಿಯಾಲಿಟಿ ಶೋ ‘ದಿ ಲಾಫ್ಟರ್ ಚಾಲೆಂಜ್’ನ ಕಪಿಲ್ ಶರ್ಮಾ ಗೆದ್ದರು. ಆ ಬಳಿಕ ಕಲರ್ಸ್ ಟಿವಿ ಶೋ ಒಂದನ್ನು ನಡೆಸಲು ಕಪಿಲ್​ಗೆ ಅವಕಾಶ ನೀಡಿತು. ‘ಕಾಮಿಡಿ ನೈಟ್ ವಿತ್ ಕಪಿಲ್’ನ ಅವರು ಆರಂಭಿಸಿದರು. ಹಾಸ್ಯನಟರಾದ ಸುನಿಲ್ ಗ್ರೋವರ್ ಮತ್ತು ಭಾರ್ತಿ ಸಿಂಗ್ ಕಪಿಲ್ ಜೊತೆ ಕೈ ಜೋಡಿಸಿದರು. ಆದರೆ ಸ್ವಲ್ಪ ಸಮಯದ ನಂತರ, ವಾಹಿನಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕಪಿಲ್ ಕಲರ್ಸ್ ತೊರೆದರು. ಕಲರ್ಸ್ ಟಿವಿಗೆ ವಿದಾಯ ಹೇಳಿದ ನಂತರ ಕಪಿಲ್ ಸೋನಿ ಟಿವಿಯಲ್ಲಿ ‘ದಿ ಕಪಿಲ್ ಶರ್ಮಾ ಶೋ’ (The Kapil Sharma) ಆರಂಭಿಸಿದರು. ಸೋನಿ ಟಿವಿಯಿಂದ ಹೊರ ಬಂದಿರೋ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನೊಂದಿಗೆ ನೆಟ್‌ಫ್ಲಿಕ್ಸ್‌ ಪ್ರವೇಶಿಸಿದ್ದಾರೆ. ಆದರೆ, ಟಿವಿಯಲ್ಲಿ ಕಪಿಲ್ ಶೋ ಪಡೆದ ಯಶಸ್ಸಿಗೆ ಹೋಲಿಸಿದರೆ, ಒಟಿಟಿಯಲ್ಲಿ ಅದರ ಕ್ರೇಜ್ ಕಾಣಿಸುತ್ತಿಲ್ಲ. ಈ ಕಾರ್ಯಕ್ರಮದ ಬಗ್ಗೆ ಹೆಚ್ಚು ಚರ್ಚೆ ಇಲ್ಲ. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಏಕೆ ಜನಪ್ರಿಯತೆ ಪಡೆದಿಲ್ಲ ಎಂಬುದಕ್ಕೆ ಇಲ್ಲಿದೆ ಕಾರಣಗಳು.

ಸ್ವರೂಪ ಬದಲಾಗಿಲ್ಲ

‘ದಿ ಕಾಮಿಡಿ ನೈಟ್ ವಿತ್ ಕಪಿಲ್’ನಿಂದ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು ಕಪಿಲ್ ಶರ್ಮಾ. 11 ವರ್ಷಗಳಲ್ಲಿ ಕಾಮಿಡಿಯಲ್ಲಿ ಅನೇಕ ಬದಲಾವಣೆಗಳ ಹೊರತಾಗಿಯೂ, ಕಪಿಲ್ ಶರ್ಮಾ ಶೋನಲ್ಲಿ ಬಾಡಿ ಶೇಮಿಂಗ್ ಮತ್ತಿತ್ಯಾದಿ ವಿಚಾರಗಳು ನಡೆದೇ ಇವೆ. ಮೂಲ ಸ್ವರೂಪ ಬದಲಾಗಿಲ್ಲ. ಕಪಿಲ್ ಶರ್ಮಾ ಅವರ ಹಾಸ್ಯದ ಶೈಲಿ ಮತ್ತು ಮಾಡುವ ನಾಟಕಗಳು ಹಳೆಯದಾಗಿವೆ. ಮುಂದಿನ 10 ವರ್ಷಗಳವರೆಗೆ ಈ ಕಾರ್ಯಕ್ರಮ ಟಿವಿಯಲ್ಲಿ ನಡೆಯಬಹುದು. ಆದರೆ OTT ಪ್ರೇಕ್ಷಕರು ಈ ಸ್ವರೂಪದಿಂದ ಪ್ರಭಾವಿತರಾಗಲಿಲ್ಲ.

 OTT ವೇದಿಕೆ

ಕಪಿಲ್ ಶರ್ಮಾ ಅವರ ಕಾರ್ಯಕ್ರಮವನ್ನು ಎಲ್ಲರೂ ನೋಡುತ್ತಿದ್ದ ಕಾಲವೊಂದಿತ್ತು. ಕಪಿಲ್ ಶರ್ಮಾ ಅವರ ಕಾರ್ಯಕ್ರಮವನ್ನು ಗ್ರಾಮೀಣ ಪ್ರೇಕ್ಷಕರು ಹೆಚ್ಚಾಗಿ ವೀಕ್ಷಿಸುತ್ತಿದ್ದರು. ಕಪಿಲ್ ಶರ್ಮಾ ಅವರ ಕಾರ್ಯಕ್ರಮವನ್ನು ವೀಕ್ಷಿಸುವ ಈ ಪ್ರೇಕ್ಷಕರು ಇನ್ನೂ ನೆಟ್‌ಫ್ಲಿಕ್ಸ್‌ನಿಂದ ದೂರವಿದ್ದಾರೆ. ಅನೇಕರು ನೆಟ್​ಫ್ಲಿಕ್ಸ್​ನ ದುಬಾರಿ ಚಂದಾದಾರಿಕೆಯನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ.

ಅಂತರಾಷ್ಟ್ರೀಯ ಪ್ರೇಕ್ಷಕರು

‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ನೆಟ್​ಫ್ಲಿಕ್ಸ್ ಮೂಲಕ 150ಕ್ಕೂ ಹೆಚ್ಚು ದೇಶಗಳಲ್ಲಿ ನೋಡಬಹುದು. ಆದರೆ, ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಅಂತರರಾಷ್ಟ್ರೀಯ ಟಾಕ್ ಶೋಗಳು ಮತ್ತು ಹಾಸ್ಯ ಕಾರ್ಯಕ್ರಮಗಳಿಗೆ ಹೋಲಿಸಿದರೆ, ಕಪಿಲ್ ಅವರ ಕಾರ್ಯಕ್ರಮವು ತುಂಬಾ ಹಿಂದುಳಿದಿದೆ. ನೆಟ್‌ಫ್ಲಿಕ್ಸ್‌ನ ಅತ್ಯಂತ ಪ್ರಸಿದ್ಧ ಟಾಕ್ ಶೋ ‘ಮೈ ನೆಕ್ಸ್ಟ್ ಗೆಸ್ಟ್’ನಲ್ಲಿ ಶಾರುಖ್ ಜೊತೆ ಅನೇಕ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಸೇರಿಕೊಂಡಿದ್ದಾರೆ. ಹಾಸ್ಯದ ಹೊರತಾಗಿ ಅನೇಕ ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಇದನ್ನೂ ಓದಿ: ಕಪಿಲ್ ಶರ್ಮಾ ಶೋನಲ್ಲಿದ್ದಾರೆ ಖ್ಯಾತ ಕಾಮಿಡಿಯನ್ಸ್; ಇವರ ಆಸ್ತಿ ಎಷ್ಟು ಕೋಟಿ ರೂಪಾಯಿ?

ಅತಿಥಿಗಳು

ಇಲ್ಲಿಯವರೆಗೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ನಾವು ರಣಬೀರ್ ಕಪೂರ್-ನೀತು ಕಪೂರ್, ಸನ್ನಿ ಡಿಯೋಲ್, ವಿಕ್ಕಿ ಕೌಶಲ್, ಸನ್ನಿ ಮತ್ತು ಬಾಬಿ ಡಿಯೋಲ್ ಅವರಂತಹ ಅನೇಕ ಸೆಲೆಬ್ರಿಟಿಗಳನ್ನು ನೋಡಿದ್ದೇವೆ. ಆದರೆ ಆಲಿಯಾ ಭಟ್, ಕತ್ರಿನಾ ಕೈಫ್, ಅಕ್ಷಯ್ ಕುಮಾರ್ ಅವರಂತಹ ಅನೇಕ ಮುಖಗಳು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಶೋನಲ್ಲಿ ಈವರೆಗೆ ಕಾಣಿಸಿಕೊಂಡಿಲ್ಲ. ಇದು ನೆಟ್​ಫ್ಲಿಕ್ಸ್ ನಡೆಸಿಕೊಡುತ್ತಿರುವ ಶೋ ಆಗಿರುವುದರಿಂದ  ನೆಟ್‌ಫ್ಲಿಕ್ಸ್​ನೊಂದಿಗೆ ಒಪ್ಪಂದ ಮಾಡಿಕೊಂಡ ಸಿನಿಮಾ ಕಲಾವಿದರಿಗೆ ಮಾತ್ಇರ ಆಮಂತ್ರಣ ಸಿಗುತ್ತಿದೆ. ಉದಾಹರಣೆಗೆ, ರಣಬೀರ್ ಕಪೂರ್ ನಟನೆಯ ‘ಅನಿಮಲ್’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ರಣಬೀರ್ ಸಹೋದರಿ ರಿದ್ಧಿಮಾ ನೆಟ್‌ಫ್ಲಿಕ್ಸ್ ಸರಣಿ ‘ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ರಣಬೀರ್ ಹಾಗೂ ರಿದ್ಧಿಮಾ ಈ ಶೋಗೆ ಅತಿಥಿಯಾಗಿ ಬಂದಿದ್ದರು.  ಇದರರ್ಥ ಟಿವಿಯಂತೆ ಕಪಿಲ್‌ಗೆ ಇನ್ನು ಮುಂದೆ ಎಲ್ಲಾ ಸೆಲೆಬ್ರಿಟಿಗಳನ್ನು ತಮ್ಮ ಶೋನಲ್ಲಿ ಸೇರಿಸಿಕೊಳ್ಳುವ ಸ್ವಾತಂತ್ರ್ಯ ಇರುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:08 am, Wed, 8 May 24

ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ