ಕಪಿಲ್ ಶರ್ಮಾ ಶೋನಲ್ಲಿದ್ದಾರೆ ಖ್ಯಾತ ಕಾಮಿಡಿಯನ್ಸ್; ಇವರ ಆಸ್ತಿ ಎಷ್ಟು ಕೋಟಿ ರೂಪಾಯಿ?

ಕಪಿಲ್ ಶರ್ಮಾ ಅವರು ಶ್ರೇಷ್ಠ ನಟ ಹಾಗೂ ಕಾಮಿಡಿಯನ್. ಅವರು ಅತ್ಯುತ್ತಮ ನಿರೂಪಕರೂ ಹೌದು. ಅವರು ಫನ್ನಿ ಡೈಲಾಗ್​ ಮೂಲಕ ಗಮನ ಸೆಳೆದಿದ್ದಾರೆ. ಜೀರೋದಿಂದ ಕರಿಯರ್ ಆರಂಭಿಸಿದ ಅವರ ಆಸ್ತಿ ಇಂದಿಗೆ 280 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಕಪಿಲ್ ಶರ್ಮಾ ಶೋನಲ್ಲಿದ್ದಾರೆ ಖ್ಯಾತ ಕಾಮಿಡಿಯನ್ಸ್; ಇವರ ಆಸ್ತಿ ಎಷ್ಟು ಕೋಟಿ ರೂಪಾಯಿ?
ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 30, 2024 | 8:03 AM

‘ದಿ ಗ್ರೇಟ್ ಇಂಡಿಯ್ ಕಪಿಲ್ ಶೋ’ (The Great Indian Kapil Show) ಪ್ರಸಾರಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು (ಮಾರ್ಚ್ 30) ನೆಟ್​ಫ್ಲಿಕ್ಸ್​ನಲ್ಲಿ ಈ ಶೋನ ಮೊದಲ ಎಪಿಸೋಡ್ ಪ್ರಸಾರ ಕಾಣಲಿದೆ. ಈ ಮೂಲಕ ಕಪಿಲ್ ಶರ್ಮಾ ಶೋ ಅವರು ಕಿರುತೆರೆಗೆ ಮರಳಿದಂತಾಗಲಿದೆ. ಈ ಸೀರಿಸ್​ಗಾಗಿ ಹಲವು ಸ್ಟಾರ್ ಕಾಮಿಡಿಯನ್ಸ್ ಕೈ ಜೋಡಿಸಿದ್ದಾರೆ. ಇದರಲ್ಲಿ ವಿಕ್ಕಿ ಗ್ರೋವರ್ ಕೂಡ ಇದ್ದಾರೆ. ಹಾಗಾದರೆ, ಎಲ್ಲರನ್ನೂ ನಗಿಸುವ ಈ ಕಲಾವಿದರ ಆಸ್ತಿ ಬಗ್ಗೆ ಇಲ್ಲಿದೆ ವಿವರ.

ಕಪಿಲ್ ಶರ್ಮಾ

ಕಪಿಲ್ ಶರ್ಮಾ ಅವರು ಶ್ರೇಷ್ಠ ನಟ ಹಾಗೂ ಕಾಮಿಡಿಯನ್. ಅವರು ಅತ್ಯುತ್ತಮ ನಿರೂಪಕರೂ ಹೌದು. ಅವರು ಫನ್ನಿ ಡೈಲಾಗ್​ ಮೂಲಕ ಗಮನ ಸೆಳೆದಿದ್ದಾರೆ. ಜೀರೋದಿಂದ ಕರಿಯರ್ ಆರಂಭಿಸಿದ ಅವರ ಆಸ್ತಿ ಇಂದಿಗೆ 280 ಕೋಟಿ ರೂಪಾಯಿಗೂ ಅಧಿಕವಾಗಿದೆ. ಇವರು ಅನೇಕರಿಗೆ ಮಾದರಿ. ಹಲವು ಕಿರುತೆರೆ ಶೋಗಳನ್ನು ಅವರು ನಡೆಸಿಕೊಟ್ಟಿದ್ದಾರೆ.

ಕೃಷ್ಣ ಅಭಿಷೇಕ್

ಗೋವಿಂದ್ ಅವರ ಸಂಬಂಧಿ ಕೃಷ್ಣ ಅಭಿಷೇಕ್ ಅವರು ಕೂಡ ಖ್ಯಾತ ಕಾಮಿಡಿಯನ್. ಅವರು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಇವರು ಹಲವು ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ಆಸ್ತಿ 30 ಕೋಟಿ ರೂಪಾಯಿ.

ಕಿಕು ಶಾರದಾ

ಕಿಕು ಶಾರದಾ ಅವರು ಮತ್ತೋರ್ವ ಖ್ಯಾತ ಹಾಸ್ಯ ಕಲಾವಿದ. ಇವರು ಮಹಿಳಾ ಪಾರ್ಟ್​ಗಳನ್ನು ಹಾಕಿ ಗಮನ ಸೆಳೆದವರು. ಇವರ ಆಸ್ತಿ 33 ಕೋಟಿ ರೂಪಾಯಿಗೂ ಅಧಿಕವಾಗಿದೆ. ಇವರು ಹಲವು ಶೋಗಳನ್ನು ನಿರೂಪಿಸಿದ್ದಾರೆ.

ಸುನೀಲ್ ಗ್ರೋವರ್

ನಟ ಹಾಗೂ ಕಾಮಿಡಿಯನ್ ಸುನಿಲ್ ಗ್ರೋವರ್ ಖ್ಯಾತಿ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಕಪಿಲ್ ಶರ್ಮಾ ಶೋ ಹಿಟ್ ಆಗುವಲ್ಲಿ ಇವರ ಪಾತ್ರವೂ ಅಧಿಕವಾಗಿದೆ. ಇವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಆಸ್ತಿ 21 ಕೋಟಿ ರೂಪಾಯಿ. ಇವರಿಗೆ ಈ ಮೊದಲು ಸಾಕಷ್ಟು ಅನಾರೋಗ್ಯ ಕಾಡಿತ್ತು. ಕಪಿಲ್ ಹಾಗೂ ಸುನೀಲ್ ಮಧ್ಯೆ ಉಂಟಾದ ಕಿರಿಕ್​ನಿಂದಾಗ ಇಬ್ಬರೂ ದೂರ ಆಗಿದ್ದರು. ಈಗ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ’ ಶೋ ಮೂಲಕ ಮತ್ತೆ ಒಂದಾಗಿದ್ದಾರೆ.

ರಾಜೀವ್ ಠಾಕೂರ್

ರಾಜೀವ್ ಠಾಕೂರ್ ಅವರು ಭಾರತದ ಖ್ಯಾತ ಕಾಮಿಡಿಯನ್. ಅವರು ಕೂಡ ಇದರ ಭಾಗವಾಗುತ್ತಿದ್ದಾರೆ. ಇವರ ಆಸ್ತಿ 17 ಕೋಟಿ ರೂಪಾಯಿ ಎನ್ನಲಾಗಿದೆ.

ಇದನ್ನೂ ಓದಿ: ಹೃದಯಾಘಾತದಿಂದ ಮೃತಪಟ್ಟ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ

ಶೋ ಬಗ್ಗೆ

ಇಷ್ಟು ದಿನ ಸೋನಿ ಟಿವಿಯಲ್ಲಿ ಕಪಿಲ್ ಶರ್ಮಾ ಶೋಗಳು ಬರುತ್ತಿದ್ದವು. ಆದರೆ ಈಗ ಅವರು ಕುಟುಂಬ ಬದಲಾಯಿಸಿದ್ದಾರೆ. ನೆಟ್​​ಫ್ಲಿಕ್ಸ್​ನಲ್ಲಿ ಈ ಶೋ ಪ್ರಸಾರ ಕಾಣಲಿದೆ ಅನ್ನೋದು ವಿಶೇಷ. ಈ ಶೋಗಾಗಿ ಫ್ಯಾನ್ಸ್ ಕಾದಿದ್ದಾರೆ. ಹೊಟ್ಟೆ ಹುಣ್ಣಾಗುವ ರೀತಿಯಲ್ಲಿ ಮನರಂಜನೆ ಸಿಗೋದು ಪಕ್ಕಾ ಅನ್ನೋದು ಟ್ರೇಲರ್ ಮೂಲಕ ಗೊತ್ತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ