ಹೃದಯಾಘಾತದಿಂದ ಮೃತಪಟ್ಟ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ

ಡ್ಯಾನಿಯಲ್ ಅವರು ಎದೆನೋವಿನಿಂದ ಇತ್ತೀಚೆಗೆ ಚೆನ್ನೈ ಆಸ್ಪತ್ರೆಗೆ ದಾಖಲಾದರು. ನಂತರ ಅವರು ಕೊನೆಯುಸಿರು ಎಳೆದರು. ಇಂದು (ಮಾರ್ಚ್ 30) ಅವರ ಅಂತ್ಯಕ್ರಿಯೆ ನಡೆಯಲಿದೆ.

ಹೃದಯಾಘಾತದಿಂದ ಮೃತಪಟ್ಟ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ
ಡ್ಯಾನಿಯಲ್ ಬಾಲಾಜಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Mar 30, 2024 | 7:51 AM

ತಮಿಳಿನ ಖ್ಯಾತ ಖಳ ನಟ ಡ್ಯಾನಿಯಲ್ ಬಾಲಾಜಿ (Daniel Balaji) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಗೌತಮ್ ವಾಸುದೇವ ಮೆನನ್ ನಿರ್ದೇಶನದ ‘ಕಾಖ ಕಾಖ’ ಸಿನಿಮಾದಲ್ಲಿ ಸೂರ್ಯ ಜೊತೆ ತೆರೆ ಹಂಚಿಕೊಂಡು ಅವರು ಗಮನ ಸೆಳೆದಿದ್ದರು. ಡ್ಯಾನಿಯಲ್ ಅವರು ಸಣ್ಣ ವಯಸ್ಸಿಗೆ ನಿಧನ ಹೊಂದಿದ್ದು ಅನೇಕರಿಗೆ ಬೇಸರ ತರಿಸಿದೆ. ಅವರ ಅಗಲುವಿಕೆಯಿಂದ ಎಲ್ಲರೂ ಶಾಕ್​ಗೆ ಒಳಗಾಗುವಂತೆ ಆಗಿದೆ.

ಡ್ಯಾನಿಯಲ್ ಬಾಲಾಜಿ ಅವರು ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಬಣ್ಣದ ಲೋಕದ ಜೊತೆ ನಂಟು ಬೆಳೆಸಿಕೊಂಡರು. ಅವರು ಕಮಲ್ ಹಾಸನ್ ಅವರ ಹಿಸ್ಟಾರಿಕ್ ಡ್ರಾಮಾ ‘ಮರುಢನಯಗಂ’ ಸಿನಿಮಾದಲ್ಲಿ  ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದರು. ಈ ಸಿನಿಮಾ ಅರ್ಧಕ್ಕೆ ನಿಂತಿತು. ಡ್ಯಾನಿಯಲ್ ಬಾಲಾಜಿ ಅವರು ‘ಚಿತ್ತಿ’ ಹೆಸರಿನ ಧಾರಾವಾಹಿಯಲ್ಲೂ ನಟಿಸಿದ್ದರು.

ನಂತರದ ದಿನಗಳಲ್ಲಿ ಬಾಲಾಜಿ ಅವರಿಗೆ ಕಮಲ್ ಹಾಸನ್ ಜೊತೆ ನಟಿಸೋ ಅವಕಾಶ ಸಿಕ್ಕಿತು. ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಮೂಲಕ ಮೆಚ್ಚುಗೆ ಪಡೆದು ಬಂದರು. ಮಮ್ಮೂಟಿ ನಟನೆಯ ‘ಬ್ಲ್ಯಾಕ್’ ಸಿನಿಮಾದಲ್ಲಿ ಬಾಲಾಜಿ ಬಣ್ಣ ಹಚ್ಚಿದ್ದರು. ಮೋಹನ್​ಲಾಲ್ ನಟನೆಯ ‘ಭಗವಾನ್’, ಮಮ್ಮೂಟಿ ನಟನೆಯ ‘ಡ್ಯಾಡಿ ಕೂಲ್’ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದರು.

ಇದನ್ನೂ ಓದಿ: ಅಣ್ಣ ಬೋನಿ ಜೊತೆ ಮಾತು ಬಿಟ್ಟ ಅನಿಲ್ ಕಪೂರ್; ಸಿನಿಮಾ ವಿಚಾರದಲ್ಲಿ ಕಿರಿಕ್

ಡ್ಯಾನಿಯಲ್ ಅವರು ಎದೆನೋವಿನಿಂದ ಇತ್ತೀಚೆಗೆ ಚೆನ್ನೈ ಆಸ್ಪತ್ರೆಗೆ ದಾಖಲಾದರು. ನಂತರ ಅವರು ಕೊನೆಯುಸಿರು ಎಳೆದರು. ಇಂದು (ಮಾರ್ಚ್ 30) ಅವರ ಅಂತ್ಯಕ್ರಿಯೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ