ಕೊನೆಯ ಹಂತದಲ್ಲಿದೆ ಆರ್ಯನ್ ಖಾನ್ ವೆಬ್ ಸೀರಿಸ್ ಶೂಟಿಂಗ್; ಯಾವಾಗ ರಿಲೀಸ್?
ಆರ್ಯನ್ ಖಾನ್ ಅವರು ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದರು. ಈ ಪ್ರಕರಣ ಅತ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಘಟನೆಯಿಂದ ಅವರು ಸಂಪೂರ್ಣವಾಗಿ ಹೊರ ಬಂದಿದ್ದಾರೆ. ಈಗ ಅವರು ಸಿನಿಮಾ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಕೊನೆಯ ಕೆಲವು ದಿನಗಳ ಶೂಟ್ ನಡೆಯುತ್ತಿದೆ.
ಶಾರುಖ್ ಖಾನ್ (Shah Rukh Khan) ಮಗ ಆರ್ಯನ್ ಖಾನ್ ಅವರು ನಿರ್ದೇಶನದತ್ತ ಒಲವು ತೋರಿಸಿದ್ದಾರೆ. ‘ಸ್ಟಾರ್ಡಂ’ ಹೆಸರಿನ ಸೀರಿಸ್ನ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸೀರಿಸ್ ಬಗ್ಗೆ ಹೊಸ ಅಪ್ಡೇಟ್ ಒಂದು ಸಿಕ್ಕಿದೆ. ಈ ಸೀರಿಸ್ನ ಕೊನೆಯ ಹಂತದ ಶೂಟಿಂಗ್ ಇತ್ತೀಚೆಗೆ ಆರಂಭ ಆಗಿದೆ. ಈ ವರ್ಷಾಂತ್ಯಕ್ಕೆ ಸೀರಿಸ್ ರಿಲೀಸ್ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆರ್ಯನ್ ಖಾನ್ ಅವರು ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದರು. ಈ ಪ್ರಕರಣ ಅತ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಘಟನೆಯಿಂದ ಅವರು ಸಂಪೂರ್ಣವಾಗಿ ಹೊರ ಬಂದಿದ್ದಾರೆ. ಈಗ ಅವರು ಸಿನಿಮಾ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಕೊನೆಯ ಕೆಲವು ದಿನಗಳ ಶೂಟ್ನಲ್ಲಿ ಬಾಬಿ ಡಿಯೋಲ್ ಅವರ ಕೂಡ ಸೇರ್ಪಡೆ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಆರ್ಯನ್ ಖಾನ್ ಅವರು ಗುರುಗ್ರಾಮದ ರಾಯಲ್ ಪಾಮ್ಸ್ ಹೋಟೆಲ್ನ ಶೂಟ್ಗೆ ಬಳಸಿಕೊಂಡಿದ್ದರು. ಐದು ದಿನಗಳ ಕಾಲ ಇಲ್ಲಿ ಶೂಟ್ ಮಾಡಲಾಗಿತ್ತು. ಮೇ ಅಂತ್ಯಕ್ಕೆ ಶೂಟ್ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ಅಂಧೇರಿ ಈಸ್ಟ್ ಹಾಗೂ ಕೆಲವು ದ್ವೀಪಗಳಲ್ಲಿ ಶೂಟಿಂಗ್ ಮಾಡಲಾಗಿದೆ.
ಜೂನ್ 2023ರಲ್ಲಿ ‘ಸ್ಟಾರ್ಡಂ’ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಇದರಲ್ಲಿ ಆರು ಎಪಿಸೋಡ್ಗಳು ಇರಲಿವೆ. ಬಾಲಿವುಡ್ ಬಗ್ಗೆ ಇದರಲ್ಲಿ ಇರಲಿದೆ. ಯಾರೆಲ್ಲ ನಟಿಸಿದ್ದಾರೆ ಎನ್ನುವ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ. ಮೂಲಗಳ ಪ್ರಕಾರ ಶಾರುಖ್ ಖಾನ್, ರಣಬೀರ್ ಕಪೂರ್, ರಣವೀರ್ ಸಿಂಗ್ ಅತಿಥಿ ಪಾತ್ರ ಮಾಡಲಿದ್ದಾರಂತೆ.
ಇದನ್ನೂ ಓದಿ: ‘ವಿರಾಟ್ ಕೊಹ್ಲಿ ನನ್ನ ಅಳಿಯ’; ಪ್ರೀತಿಯಿಂದ ಮಾತನಾಡಿದ ಶಾರುಖ್ ಖಾನ್
‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಅಡಿಯಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯಾವ ಒಟಿಟಿಯಲ್ಲಿ ಈ ಸೀರಿಸ್ ರಿಲೀಸ್ ಆಗಲಿದೆ, ಯಾವ ರೀತಿಯಲ್ಲಿ ಈ ಸೀರಿಸ್ ಮೂಡಿ ಬರಲಿದೆ ಎನ್ನುವ ಕುತೂಹಲ ಮೂಡಿದೆ. ಕೆಲವು ವರದಿಗಳ ಪ್ರಕಾರ ಬಿಗ್ ಬಜೆಟ್ನಲ್ಲಿ ಈ ಸರಣಿ ಸಿದ್ಧವಾಗುತ್ತಿದೆ. ಇದಕ್ಕೆ ಇದಲ್ಲದೆ ಆರ್ಯನ್ ಖಾನ್ ಅವರು ಬಟ್ಟೆ ಬ್ರ್ಯಾಂಡ್ ಕೂಡ ಆರಂಭಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.