Shah Rukh Khan: ‘ವಿರಾಟ್ ಕೊಹ್ಲಿ ನನ್ನ ಅಳಿಯ’; ಪ್ರೀತಿಯಿಂದ ಮಾತನಾಡಿದ ಶಾರುಖ್ ಖಾನ್
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಜೊತೆ ಉತ್ತಮ ಗೆಳೆತನ ಇದೆ. ಅವರು ವಿರಾಟ್ ಮೇಲಿರೋ ಪ್ರೀತಿ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ. ‘ನಾನು ಅನುಷ್ಕಾ ಜೊತೆ ಸಿನಿಮಾ ಮಾಡುತ್ತಿದ್ದೆ. ಆಗ ವಿರಾಟ್ ಸೆಟ್ಗೆ ಬರುತ್ತಿದ್ದರು. ಅವರು ಸಖತ್ ಫ್ರೆಂಡ್ಲಿ’ ಎಂದಿದ್ದಾರೆ ಶಾರುಖ್ ಖಾನ್.
ಶಾರುಖ್ ಖಾನ್ (Shah Rukh Khan) ಅವರಿಗೆ ಬಾಲಿವುಡ್ನ ಅನೇಕರ ಜೊತೆ ಒಳ್ಳೆಯ ಒಡನಾಟ ಇದೆ. ಅಷ್ಟೇ ಅಲ್ಲ ಐಪಿಎಲ್ನಲ್ಲಿ ಅವರು ತಂಡ ಹೊಂದಿರುವುದರಿಂದ ಕ್ರಿಕೆಟ್ ಜಗತ್ತಿನ ಜೊತೆ ಇದ್ದ ನಂಟು ಮತ್ತಷ್ಟು ಬಲವಾಗಿದೆ. ಅವರಿಗೆ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಜೊತೆ ಉತ್ತಮ ಗೆಳೆತನ ಇದೆ. ಅವರು ವಿರಾಟ್ ಮೇಲಿರೋ ಪ್ರೀತಿ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ.
‘ನಾನು ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಶಾರುಖ್ ನನ್ನ ಅಳಿಯ. ಇತರ ಆಟಗಾರರಿಗೆ ಹೋಲಿಸಿದರೆ ನಾನು ಅವರನ್ನು ಹೆಚ್ಚು ತಿಳಿದಿದ್ದೇನೆ. ವಿರಾಟ್ ಮತ್ತು ಅನುಷ್ಕಾ ಅವರು ಬಹಳ ಸಮಯದಿಂದ ನನಗೆ ಗೊತ್ತು. ನಾನು ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಅವರು ಡೇಟಿಂಗ್ ಮಾಡುತ್ತಾ ಇದ್ದಾಗಿನಿಂದಲೂ ನನಗೆ ವಿರಾಟ್ ಗೊತ್ತು. ಆಗ ನಾನು ಅನುಷ್ಕಾ ಜೊತೆ ಸಿನಿಮಾ ಮಾಡುತ್ತಿದ್ದೆ. ಆಗ ಅವರು ಸೆಟ್ಗೆ ಬರುತ್ತಿದ್ದರು. ಅವರು ಸಖತ್ ಫ್ರೆಂಡ್ಲಿ’ ಎಂದಿದ್ದಾರೆ ಶಾರುಖ್ ಖಾನ್.
‘ಪಠಾಣ್ ಸಿನಿಮಾ ಟೈಟಲ್ ಸಾಂಗ್ ಸ್ಟೆಪ್ನ ನಾನೇ ವಿರಾಟ್ಗೆ ಕಲಿಸಿದ್ದು. ಮೈದಾನದಲ್ಲಿ ಈ ಸ್ಟೆಪ್ನ ಅವರು ರವೀಂದ್ರ ಜಡೇಜಾ ಜೊತೆ ಪ್ರಯತ್ನಿಸಿದ್ದರು. ಅದನ್ನು ತುಂಬಾ ಕೆಟ್ಟದಾಗಿ ಮಾಡುತ್ತಿದ್ದರು. ಈ ರೀತಿ ಡ್ಯಾನ್ಸ್ ಮಾಡಿದಾಗ ದಯವಿಟ್ಟು ನನಗೆ ಕರೆ ಮಾಡಿ ಹೇಗೆ ಮಾಡೋದು ಎಂದು ಕೇಳಿ ಎಂಬುದಾಗಿ ನಾನು ಅವರಿಗೆ ಹೇಳಿದ್ದೆ’ ಎಂದಿದ್ದಾರೆ ಶಾರುಖ್.
ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಹೋಲಿಸಿದರೆ ಅನುಷ್ಕಾ ಶರ್ಮಾ ಆಸ್ತಿ ತುಂಬಾನೇ ಕಡಿಮೆ; ಇಲ್ಲಿದೆ ವಿವರ
ಅನುಷ್ಕಾ ಶರ್ಮಾಗೆ ಇಂದು (ಮೇ 1) ಜನ್ಮದಿನ. ಆದಿತ್ಯ ಚೋಪ್ರಾ ನಿರ್ದೇಶನದ ‘ರಬ್ ನೇ ಬನಾದಿ ಜೋಡಿ’ (2008) ಸಿನಿಮಾ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರದಲ್ಲಿ ಶಾರುಖ್ ಹೀರೋ ಆಗಿದ್ದರು. ‘ಜಬ್ ತಕ್ ಹೇ ಜಾನ್’ (2012), ‘ಯೇ ದಿಲ್ ಹೈ ಮುಷ್ಕಿಲ್’ (2016), ‘ಜಬ್ ಹ್ಯಾರಿ ಮೆಟ್ ಸೇಜಲ್’ (2017), ‘ಜೀರೋ’ (2018) ಸಿನಿಮಾಗಳಲ್ಲಿ ಶಾರುಖ್-ಅನುಷ್ಕಾ ತೆರೆ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:38 am, Wed, 1 May 24