AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akay Kohli: ಹೇಗಿದ್ದಾನೆ ಅನುಷ್ಕಾ-ವಿರಾಟ್ ಪುತ್ರ ಅಕಾಯ್? ಲೀಕ್ ಆಯ್ತು ವಿಚಾರ

ಅನುಷ್ಕಾ ಶರ್ಮಾ ಹಾಗೂ ವಿರಾಟ್ ದಂಪತಿ ವಮಿಕಾ ಜನಿಸಿದ ಬಳಿಕ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದ್ದರು. ಸದ್ಯಕ್ಕಂತೂ ಮಗಳ ಫೋಟೋಗಳನ್ನು ರಿವೀಲ್ ಮಾಡುವುದಿಲ್ಲ ಎಂದು ಹೇಳಿದ್ದರು. ಅದೇ ರೀತಿ ಅಕಾಯ್ ವಿಚಾರದಲ್ಲೂ ಅವರು ಇದೇ ಪಾಲಿಸಿಯನ್ನು ಅನ್ವಯಿಸಿದ್ದಾರೆ.ಈಗ ಅಕಾಯ್​ ಹೇಗಿದ್ದಾನೆ ಎಂಬುದನ್ನು ಕಿರುತೆರೆ ನಟನೊಬ್ಬರು ವಿವರಿಸಿದ್ದರು.

Akay Kohli: ಹೇಗಿದ್ದಾನೆ ಅನುಷ್ಕಾ-ವಿರಾಟ್ ಪುತ್ರ ಅಕಾಯ್? ಲೀಕ್ ಆಯ್ತು ವಿಚಾರ
ವಿರಾಟ್-ಅನುಷ್ಕಾ ಶರ್ಮಾ
Follow us
ರಾಜೇಶ್ ದುಗ್ಗುಮನೆ
| Updated By: ಗಂಗಾಧರ​ ಬ. ಸಾಬೋಜಿ

Updated on: May 01, 2024 | 3:16 PM

ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್ ಕೊಹ್ಲಿ ದಂಪತಿ ತಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇತರ ಸೆಲೆಬ್ರಿಟಿಗಳಂತೆ ಅವರು ಮಕ್ಕಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಇದಕ್ಕೆ ಕಾರಣ ಹಲವು. ವಮಿಕಾ ಹಾಗೂ ಅಕಾಯ್ ಇಬ್ಬರ ಫೋಟೋಗಳನ್ನು ಅನುಷ್ಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈಗ ಅಕಾಯ್ ನೋಡೋಕೆ ಯಾವ ರೀತಿ ಇದ್ದಾನೆ ಅನ್ನೋ ವಿಚಾರ ರಿವೀಲ್ ಆಗಿದೆ. ಕಿರುತೆರೆ ನಟ ಆಮಿರ್ ಅಲಿ ಅವರು ಅಕಾಯ್​ನ ಫೋಟೋ ನೋಡಿದ್ದಾರಂತೆ. ಅವರು ಸ್ಟಾರ್ ದಂಪತಿಯ ಮಗನ ಬಗ್ಗೆ ಮಾತನಾಡಿದ್ದಾರೆ.

ಆಮಿರ್ ಅಲಿ ಅವರು ವಿರಾಟ್ ಕೊಹ್ಲಿ ಜೊತೆ ಜಾಹೀರಾತೊಂದರಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ವಿರಾಟ್ ಅವರು ಆಮಿರ್​ಗೆ ಮಗನ ಫೋಟೋ ತೋರಿಸಿದ್ದಾರೆ. ‘ನಾವು ಜಾಹೀರಾತು ಶೂಟಿಂಗ್ ವೇಳೆ ಕ್ರಿಕೆಟ್ ಬಗ್ಗೆ ಮಾತನಾಡಿದೆ. ಯಾವಾಗ ಕುಟುಂಬದ ಬಗ್ಗೆ ಮಾತನಾಡಿದೆನೋ ಅವರ ಮುಖದಲ್ಲಿ ಬೇರೆಯದೇ ರೀತಿಯ ಸ್ಪಾರ್ಕ್ ಇತ್ತು’ ಎಂದಿದ್ದಾರೆ ಆಮಿರ್. ಈ ಮೂಲಕ ವಿರಾಟ್ ತಮ್ಮ ಕುಟುಂಬವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ತೋರಿಸಿದ್ದಾರೆ.

‘ವಿರಾಟ್ ಅವರು ಮಗಳ ಫೋಟೋ ತೋರಿಸಿದರು. ಅನುಷ್ಕಾ ಬಗ್ಗೆ ಮಾತನಾಡಿದರು. ಆಗ ಅವರ ಮುಖದಲ್ಲಿ ಬೇರೆಯದೇ ಚಾರ್ಮ್ ಇತ್ತು. ಅದು ನನಗೆ ಇಷ್ಟ ಆಯಿತು. ನೀವು ಮಾಧ್ಯಮಗಳಿಂದ ಅವರನ್ನು ದೂರವೇ ಇಟ್ಟಿದ್ದು ಒಳ್ಳೆಯದಾಯಿತು ಎಂದು ನಾನು ಅವರಿಗೆ ಹೇಳಿದೆ. ಇದು ಅನುಷ್ಕಾ ಅವರ ನಿರ್ಧಾರ ಎಂದು ವಿರಾಟ್ ತಿಳಿಸಿದರು. ಅಕಾಯ್ ಸಖತ್ ಕ್ಯೂಟ್ ಆಗಿದ್ದಾನೆ. ಆತ ಗುಂಡು ಗುಂಡಾಗಿದ್ದಾನೆ’ ಎಂದಿದ್ದಾರೆ ಆಮಿರ್.

ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಹೋಲಿಸಿದರೆ ಅನುಷ್ಕಾ ಶರ್ಮಾ ಆಸ್ತಿ ತುಂಬಾನೇ ಕಡಿಮೆ; ಇಲ್ಲಿದೆ ವಿವರ

ಅನುಷ್ಕಾ ಶರ್ಮಾ ಹಾಗೂ ವಿರಾಟ್ ದಂಪತಿ ವಮಿಕಾ ಜನಿಸಿದ ಬಳಿಕ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದ್ದರು. ಸದ್ಯಕ್ಕಂತೂ ಮಗಳ ಫೋಟೋಗಳನ್ನು ರಿವೀಲ್ ಮಾಡುವುದಿಲ್ಲ ಎಂದು ಹೇಳಿದ್ದರು. ಅದೇ ರೀತಿ ಅಕಾಯ್ ವಿಚಾರದಲ್ಲೂ ಅವರು ಇದೇ ಪಾಲಿಸಿಯನ್ನು ಅನ್ವಯಿಸಿದ್ದಾರೆ. ಅನುಷ್ಕಾ ಶರ್ಮಾಗೆ ಇಂದು (ಮೇ 1) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ