AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಟ್ನೆಸ್ ಕಾಯ್ದುಕೊಳ್ಳಲು ಜಾನ್ 25 ವರ್ಷಗಳಿಂದ ಸಿಹಿ ತಿಂದಿಲ್ಲ, ಮದ್ಯ ಸೇವಿಸಿಲ್ಲ; ಪಾಕ್ ನಟರೂ ಶಾಕ್

ಜೋಯಾ ಅಖ್ತರ್ ನಿರ್ದೇಶನದ ‘ಲಕ್ ಬೈ ಚಾನ್ಸ್’ ಸಿನಿಮಾದಲ್ಲಿ ಆ್ಯಲಿ ಖಾನ್ ನಟಿಸಿದ್ದರು. ಈ ಚಿತ್ರದಲ್ಲಿ ಜಾನ್ ಅಬ್ರಹಾಂ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ‘ತೆಹ್ರಾನ್’ ಸಿನಿಮಾದಲ್ಲಿ ಜಾನ್ ಜೊತೆ ಕೆಲಸ ಮಾಡೋ ಅವಕಾಶ ಆ್ಯಲಿಗೆ ಸಿಕ್ಕಿದೆ. ಅವರು ಜಾನ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಫಿಟ್ನೆಸ್ ಕಾಯ್ದುಕೊಳ್ಳಲು ಜಾನ್ 25 ವರ್ಷಗಳಿಂದ ಸಿಹಿ ತಿಂದಿಲ್ಲ, ಮದ್ಯ ಸೇವಿಸಿಲ್ಲ; ಪಾಕ್ ನಟರೂ ಶಾಕ್
ಜಾನ್ ಅಬ್ರಹಾಂ-ಆ್ಯಲಿ
ರಾಜೇಶ್ ದುಗ್ಗುಮನೆ
|

Updated on: May 01, 2024 | 2:28 PM

Share

ಫಿಟ್ನೆಸ್ ಕಾಯ್ದುಕೊಳ್ಳಲು ಸೆಲೆಬ್ರಿಟಿಗಳು ನಾನಾ ಕಸರತ್ತು ಮಾಡಬೇಕಾಗುತ್ತದೆ, ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಜಾನ್ ಅಬ್ರಹಾಂ (Johan Abraham). ಅವರು ಕಳೆದ 25 ವರ್ಷಗಳಿಂದ ಸಿಹಿಯನ್ನೇ ತಿಂದಿಲ್ಲ. ಸಿಹಿ ದೇಹಕ್ಕೆ ಹಾಳು ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಫಿಟ್ನೆಸ್ ಕಾಯ್ದುಕೊಂಡು ಹೊಗುತ್ತೇನೆ ಎನ್ನುವವರು ಸಿಹಿಯಿಂದ ಆದಷ್ಟು ದೂರ ಇರಬೇಕು. ಅಚ್ಚರಿ ಎಂದರೆ ಜಾನ್ ಅಬ್ರಹಾಂ ಅವರು ಸಂಪೂರ್ಣವಾಗಿ ಸಿಹಿಯಿಂದ ದೂರ ಇದ್ದಾರೆ. ಈ ಬಗ್ಗೆ ಬ್ರಿಟನ್-ಪಾಕ್ ನಟ ಆ್ಯಲಿ ಖಾನ್ ಅಚ್ಚರಿ ಹೊಹಾಕಿದ್ದಾರೆ. ‘ಅವರು ಸನ್ಯಾಸಿ ರೀತಿ ಬದುಕುತ್ತಿದ್ದಾರೆ. ಇದು ಅನೇಕರಿಗೆ ಮಾದರಿ’ ಎಂದಿದ್ದಾರೆ ಅವರು.

ಜೋಯಾ ಅಖ್ತರ್ ನಿರ್ದೇಶನದ ‘ಲಕ್ ಬೈ ಚಾನ್ಸ್’ ಸಿನಿಮಾದಲ್ಲಿ ಆ್ಯಲಿ ಖಾನ್ ನಟಿಸಿದ್ದರು. ಈ ಚಿತ್ರದಲ್ಲಿ ಜಾನ್ ಅಬ್ರಹಾಂ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ‘ತೆಹ್ರಾನ್’ ಸಿನಿಮಾದಲ್ಲಿ ಜಾನ್ ಜೊತೆ ಕೆಲಸ ಮಾಡೋ ಅವಕಾಶ ಆ್ಯಲಿಗೆ ಸಿಕ್ಕಿದೆ. ಅವರು ಜಾನ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಪಾಕ್ ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಆ್ಯಲಿ ಮಾತನಾಡಿದ್ದಾರೆ. ‘ನಿಮ್ಮಲ್ಲಿ ಟ್ಯಾಲೆಂಟ್ ಇಲ್ಲ ಎಂದರೆ ಚಿತ್ರರಂಗದಲ್ಲಿ ಹೆಚ್ಚು ವರ್ಷ ಬದುಕೋಕೆ ಆಗಲ್ಲ. ಜಾನ್ ಅವರು ಈ ವಯಸ್ಸಲ್ಲೂ ಶರ್ಟ್ ತೆಗೆದು ಪೋಸ್ ಕೊಡುತ್ತಾರೆ ಎಂದರೆ ಅದಕ್ಕೆ ಕಾರಣ ಕಳೆದ 25 ವರ್ಷಗಳಲ್ಲಿ ಅವರು ಸಿಹಿಯನ್ನೇ ಟೇಸ್ಟ್ ಮಾಡಿಲ್ಲ’ ಎಂದಿದ್ದಾರೆ.

‘ಜಾನ್​ಗೆ ಸಿಹಿ ತಿನ್ನೋ ಬಗ್ಗೆ ಪ್ರಶ್ನೆ ಮಾಡಿದೆ. ಅವರು 25 ವರ್ಷಗಳಿಂದ ಸಿಹಿಯನ್ನೇ ತಿಂದಿಲ್ಲ ಎಂದರು. ಮದ್ಯದ ರುಚಿ ನೋಡಿಲ್ಲ. ಅವರು ಸಿಗರೇಟ್ ಸೇದಲ್ಲ. ನೀವು ಪ್ರೋಟಿನ್​ಗೆ ಚಿಕನ್ ತಿನ್ನುತ್ತೀರಾ ಎಂದು ಕೇಳಿದೆ. ಅವರು ನಾನು ಸಸ್ಯಾಹಾರಿ ಎಂದರು. ಒಳ್ಳೆಯ ಆಹಾರ, ಒಳ್ಳೆಯ ವ್ಯಾಯಾಮ, ಒಳ್ಳೆಯ ನಿದ್ದೆಯಿಂದ ಮಾತ್ರ ದೇಹದ ಫಿಟ್ನೆಸ್ ಕಾಯ್ದುಕೊಳ್ಳಬಹುದು. ಯಾವುದೇ ಒಂದು ಇಲ್ಲದಿದ್ದರೂ ಫಿಟ್ನೆಸ್ ಹಾಳಾಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ಜಾನ್ ಅಬ್ರಹಾಂನ ಭೇಟಿ ಮಾಡಿದ ‘777 ಚಾರ್ಲಿ’ ನಿರ್ದೇಶಕ; ಸಿಗಲಿದೆ ಹೊಸ ಅಪ್​ಡೇಟ್?

ಜಾನ್ ಅಬ್ರಹಾಂ ಅವರು ದಿನನಿತ್ಯ ಮುಂಜಾನೆ 4:30ಕ್ಕೆ ಎದ್ದೇಳುತ್ತಾರೆ. ಅವರು ತಮ್ಮಿಷ್ಟದ ಕಾಜು ಕಟ್ಲಿಯನ್ನು 27 ವರ್ಷಗಳಿಂದ ತಿಂದೇ ಇಲ್ಲ. ಅವರು ಯಾವುದೇ ತಂಪು ಪಾನೀಯ ಸೇವಿಸುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ