ಈ ಫೋಟೋದಲ್ಲಿ ಇರೋ ಎಲ್ಲರೂ ಈಗ ಹೀರೋಯಿನ್; ಯಾರೆಂದು ಗುರುತಿಸುತ್ತೀರಾ?
ಶಾರುಖ್ ಖಾನ್ ಹಾಗೂ ಚಂಕಿ ಪಾಂಡೆ ಫ್ರೆಂಡ್ಸ್. ಶಾರುಖ್ ಖಾನ್ ಬಾಲಿವುಡ್ನಲ್ಲಿ ಆಗತಾನೇ ಗುರುತಿಸಿಕೊಳ್ಳುತ್ತಿದ್ದರು. ಆಗ ಚಂಕಿ ಪಾಂಡೆ ಮನೆಗೆ ಶಾರುಖ್ ಅವರು ಆಗಮಿಸುತ್ತಿದ್ದರು. ಇದರಿಂದಾಗಿ ಇಬ್ಬರ ಮಧ್ಯೆ ಗೆಳೆತನ ಬೆಳೆದಿತ್ತು. ಶಾರುಖ್ ಖಾನ್ ಹಾಗೂ ಚಂಕಿ ಮಧ್ಯೆ ಈಗಲೂ ಫ್ರೆಂಡ್ಶಿಪ್ ಇದೆ.
ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಆಗಾಗ ವೈರಲ್ ಆಗುತ್ತವೆ. ಅನೇಕ ಸೆಲೆಬ್ರಿಟಿಗಳು ತಮ್ಮ ಬಾಲ್ಯದ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಈಗ ನಟಿಯ ಒಂದು ಫೋಟೋ ವೈರಲ್ ಆಗಿದೆ. ಇದರಲ್ಲಿ ಇರೋ ಎಲ್ಲರೂ ಸ್ಟಾರ್ ಕಿಡ್ಗಳು. ಈಗ ಬೆಳೆದು ದೊಡ್ಡವರಾಗಿದ್ದಾರೆ. ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ಬೇರಾರೂ ಅಲ್ಲ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ (Ananya Pandey) ಹಾಗೂ ಶಾರುಖ್ ಖಾನ್ ಮಗಳು ಸುಹಾನಾ ಖಾನ್.
ಶಾರುಖ್ ಖಾನ್ ಹಾಗೂ ಚಂಕಿ ಪಾಂಡೆ ಫ್ರೆಂಡ್ಸ್. ಶಾರುಖ್ ಖಾನ್ ಬಾಲಿವುಡ್ನಲ್ಲಿ ಆಗತಾನೇ ಗುರುತಿಸಿಕೊಳ್ಳುತ್ತಿದ್ದರು. ಆಗ ಚಂಕಿ ಪಾಂಡೆ ಮನೆಗೆ ಶಾರುಖ್ ಅವರು ಆಗಮಿಸುತ್ತಿದ್ದರು. ಇದರಿಂದಾಗಿ ಇಬ್ಬರ ಮಧ್ಯೆ ಗೆಳೆತನ ಬೆಳೆದಿತ್ತು. ಶಾರುಖ್ ಖಾನ್ ಹಾಗೂ ಚಂಕಿ ಮಧ್ಯೆ ಈಗಲೂ ಫ್ರೆಂಡ್ಶಿಪ್ ಇದೆ. ವಿಶೇಷ ಎಂದರೆ ಇವರ ಮಕ್ಕಳ ಮಧ್ಯೆಯೂ ಒಳ್ಳೆಯ ಗೆಳೆತನ ಬೆಳೆದಿದೆ. ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ಹಾಗೂ ಶಾರುಖ್ ಮಕ್ಕಳಾದ ಸುಹಾನಾ ಖಾನ್-ಆರ್ಯನ್ ಖಾನ್ ಬೆಸ್ಟ್ ಫ್ರೆಂಡ್ಸ್.
ಈ ಮೊದಲು ಅನನ್ಯಾ ಪಾಂಡೆ ಹಾಗೂ ಸುಹಾನಾ ಖಾನ್ ಒಟ್ಟಾಗಿ ಐಪಿಎಲ್ ಮ್ಯಾಚ್ ನೋಡಲು ತೆರಳಿದ್ದರು. ಆಗ ಅವರಿನ್ನೂ ಚಿಕ್ಕವರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ. ಅನೇಕರು ಇವರನ್ನು ಪತ್ತೆ ಹಚ್ಚಿದರೆ, ಇನ್ನೂ ಕೆಲವರಿಗೆ ಇವರು ಗುರುತು ಸಿಕ್ಕಿಲ್ಲ. ಅನನ್ಯಾ ಹಾಗೂ ಸುಹಾನಾ ಈಗ ಸಖತ್ ಗ್ಲಾಮರಸ್ ಆಗಿದ್ದಾರೆ. ಅವರು ಸಖತ್ ಬೋಲ್ಡ್ ಆಗಿ ಆಗಾಗ ಗಮನ ಸೆಳೆಯುತ್ತಾರೆ.
ಅನನ್ಯಾ ಪಾಂಡೆ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಸಿಕ್ಕಿಲ್ಲ. ಅವರ ನಟನೆಯ ಮೊದಲ ಸಿನಿಮಾ ‘ಸ್ಟುಡೆಂಟ್ ಆಫ್ ದಿ ಇಯರ್ 2’. ಈ ಚಿತ್ರ ಅಂದುಕೊಂಡಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ನಂತರ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದರೂ ಅವರ ಜೀವನದಲ್ಲಿ ದೊಡ್ಡ ಬದಲಾವಣೆ ಏನೂ ಆಗಿಲ್ಲ. ಕಳೆದ ವರ್ಷ ಅವರ ನಟನೆಯ ‘ಡ್ರೀಮ್ ಗರ್ಲ್ 2’ ಸಿನಿಮಾ ಬಿಡುಗಡೆ ಕಂಡಿತು. ಈ ಚಿತ್ರ ಗೆಲ್ಲೋಕೆ ಸಾಧ್ಯವಾಗಿಲ್ಲ. ಸದ್ಯ ಅವರ ಕೈಯಲ್ಲಿ ಒಂದೆರಡು ಸಿನಿಮಾಗಳಿವೆ. ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಸಿನಿಮಾ ಆಫರ್ಗಳು ಅವರಿಗೆ ಸಿಗುತ್ತಿವೆ ಎನ್ನುವ ಆರೋಪವೂ ಇದೆ.
ಇದನ್ನೂ ಓದಿ: ಪುತ್ರಿ ಸುಹಾನಾ ಖಾನ್ ಸಿನಿಮಾಗಾಗಿ 200 ಕೋಟಿ ರೂಪಾಯಿ ಸುರಿಯಲಿರುವ ಶಾರುಖ್ ಖಾನ್
ಸುಹಾನಾ ಖಾನ್ ಅವರು ‘ದಿ ಆರ್ಚೀಸ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಳೆದ ವರ್ಷ ಈ ಚಿತ್ರ ನೇರವಾಗಿ ಒಟಿಟಿ ಮೂಲಕ ರಿಲೀಸ್ ಆಯಿತು. ಅವರು ಅಮೆರಿಕದಲ್ಲಿ ನಟನಾ ತರಬೇತಿ ಪಡೆದು ಬಂದಿದ್ದಾರೆ. ಈಗ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ಶಾರುಖ್ ಖಾನ್ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಕೂಡ ನಟಿಸಲಿದ್ದಾರೆ ಎಂದು ವರದಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:55 am, Thu, 2 May 24