ಪುತ್ರಿ ಸುಹಾನಾ ಖಾನ್​ ಸಿನಿಮಾಗಾಗಿ 200 ಕೋಟಿ ರೂಪಾಯಿ ಸುರಿಯಲಿರುವ ಶಾರುಖ್​ ಖಾನ್​

ಅನೇಕ ಕಾರಣಗಳಿಂದಾಗಿ ‘ಕಿಂಗ್​’ ಚಿತ್ರ ಹೈಪ್​ ಸೃಷ್ಟಿ ಮಾಡುತ್ತಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಮತ್ತು ಸುಹಾನಾ ಖಾನ್​ ನಟಿಸಲಿದ್ದಾರೆ. ಬರೋಬ್ಬರಿ 200 ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾವನ್ನು ಶಾರುಖ್​ ಖಾನ್​ ನಿರ್ಮಾಣ ಮಾಡಲಿದ್ದಾರೆ. ವಿದೇಶದ ಸಾಹಸ ನಿರ್ದೇಶಕರು ಈ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ.

ಪುತ್ರಿ ಸುಹಾನಾ ಖಾನ್​ ಸಿನಿಮಾಗಾಗಿ 200 ಕೋಟಿ ರೂಪಾಯಿ ಸುರಿಯಲಿರುವ ಶಾರುಖ್​ ಖಾನ್​
ಸುಹಾನಾ ಖಾನ್​, ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Apr 15, 2024 | 9:48 PM

ನಟ ಶಾರುಖ್​ ಖಾನ್​ (Shah Rukh Khan) ಅವರು 2023ರಲ್ಲಿ ಕಮ್​ಬ್ಯಾಕ್​ ಮಾಡಿದ್ದೂ ಅಲ್ಲದೇ ಭರ್ಜರಿ ಗೆಲುವ ಕೂಡ ಕಂಡರು. ಹಾಗಂತ ಅವರು ಮತ್ತೆ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಅವಸರ ತೋರುತ್ತಿಲ್ಲ. ಮತ್ತೆ ಅವರು ದೊಡ್ಡ ಪರದೆಯಲ್ಲಿ ದರ್ಶನ ನೀಡುವುದು 2025ರಲ್ಲಿ. ಅವರ ಮುಂದಿನ ಸಿನಿಮಾ ಹೆಸರು ‘ಕಿಂಗ್​’ (King) ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಅವರ ಪುತ್ರಿ ಸುಹಾನಾ ಖಾನ್​ (Suhana Khan) ಕೂಡ ನಟಿಸಲಿದ್ದಾರೆ. ಈ ಚಿತ್ರದ ಬಜೆಟ್​ ಬಗ್ಗೆ ದೊಡ್ಡ ಸುದ್ದಿ ಕೇಳಿಬಂದಿದೆ. ಶಾರುಖ್​ ಖಾನ್​ ಅವರು ‘ಕಿಂಗ್​’ ಚಿತ್ರದ ಮೇಲೆ 200 ಕೋಟಿ ರೂಪಾಯಿ ಬಂಡವಾಳ ಹೂಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹಲವು ಕಾರಣಗಳಿಂದಾಗಿ ‘ಕಿಂಗ್​’ ಸಿನಿಮಾ ಹೈಪ್​ ಸೃಷ್ಟಿ ಮಾಡುತ್ತಿದೆ. ಇದು ಹಿರಿತೆರೆಯಲ್ಲಿ ಶಾರುಖ್​ ಪುತ್ರಿ ಸುಹಾನಾ ಖಾನ್​ ಅವರ ಮೊದಲ ಸಿನಿಮಾ ಆಗಲಿದೆ. ಯಾಕೆಂದರೆ, ಈ ಹಿಂದೆ ಅವರು ನಟಿಸಿದ ‘ದಿ ಆರ್ಚೀಸ್​’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಆದ್ದರಿಂದ ಸುಹಾನಾಗೆ ದೊಡ್ಡ ಪರದೆಯಲ್ಲಿ ಸ್ವಾಗತ ಸಿಗಲಿಲ್ಲ. ಮೊದಲ ಬಾರಿಗೆ ಮಗಳು ಬಿಗ್​ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳಲಿರುವ ಸಿನಿಮಾ ಬಹಳ ಗ್ರ್ಯಾಂಡ್​ ಆಗಿರಬೇಕು ಎಂಬುದು ಶಾರುಖ್​ ಖಾನ್​ ಅವರ ಉದ್ದೇಶ.

ಶಾರುಖ್​ ಖಾನ್​ ಅವರಿಗೂ ‘ಕಿಂಗ್​’ ಚಿತ್ರ ಸ್ಪೆಷಲ್​ ಆಗಿರಲಿದೆ. ಯಾಕೆಂದರೆ, ‘ಡಂಕಿ’ ಬಳಿಕ ಅವರು ದೀರ್ಘ ಗ್ಯಾಪ್​ ತೆಗೆದುಕೊಂಡು ‘ಕಿಂಗ್​’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಅದನ್ನು ಅವರ ಕಮ್​ಬ್ಯಾಕ್​ ಸಿನಿಮಾ ಎಂದೇ ಪರಿಗಣಿಸಲಾಗುತ್ತದೆ. ಅಭಿಮಾನಿಗಳ ನಿರೀಕ್ಷೆಯೂ ಮುಗಿಲು ಮುಟ್ಟಿರುತ್ತದೆ. ಆದ್ದರಿಂದ ‘ಕಿಂಗ್​’ ಸಿನಿಮಾ ಸಿಕ್ಕಾಪಟ್ಟೆ ವಿಶೇಷವಾಗಿರಲೇಬೇಕು ಎಂದು ಶಾರುಖ್​ ಖಾನ್​ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶಾರುಖ್​, ಆಮಿರ್​, ಸಲ್ಲು ಬಗ್ಗೆ ಪಾಕ್​ ನಟಿಯ ಹೇಳಿಕೆ ವೈರಲ್​; ಏನಿದೆ ಈ ವಿಡಿಯೋದಲ್ಲಿ?

‘ಕಿಂಗ್​’ ಚಿತ್ರಕ್ಕೆ ಸುಜಯ್​ ಘೋಶ್​ ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ಇದರ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಸಿನಿಮಾದ ಪ್ರತಿ ದೃಶ್ಯ ಕೂಡ ವಿಶೇಷವಾಗಿರಬೇಕು ಎಂಬ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು ಪ್ಲ್ಯಾನ್​ ಮಾಡಲಾಗುತ್ತಿದೆ. ವಿದೇಶದ ಸ್ಟಂಟ್​ ಮಾಸ್ಟರ್​ಗಳನ್ನು ಕರೆದುಕೊಂಡು ಬಂದು ಆ್ಯಕ್ಷನ್​ ದೃಶ್ಯಗಳನ್ನು ಚಿತ್ರಿಸಲಾಗುವುದು. ಶಾರುಖ್​ ಖಾನ್​ ಅಭಿಮಾನಿಗಳು ಈ ಮೊದಲು ಕಂಡು ಕೇಳಿರದ ಆ್ಯಕ್ಷನ್​ ಸಿನಿಮಾ ಇದಾಗಬೇಕು ಎಂದು ‘ಕಿಂಗ್​’ ತಂಡದವರು ಶ್ರಮಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಸಿನಿಮಾದ ಬಜೆಟ್​ 200 ಕೋಟಿ ರೂಪಾಯಿ ಮೀರಲಿದೆ. ಶಾರುಖ್​ ಖಾನ್​ ಒಡೆತನದ ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ