ಕತ್ತಲಾದ್ರೂ ಕಾದಿದ್ದ ಜನಸಾಗರ; ಮನೆಯಿಂದ ಹೊರಬಂದು ವಿಶ್​ ಮಾಡಿದ ಶಾರುಖ್​, ಸಲ್ಲು

ದಿನವಿಡೀ ಹಬ್ಬದ ಖುಷಿಯಲ್ಲಿ ಬ್ಯುಸಿಯಾಗಿದ್ದ ಸಲ್ಮಾನ್​ ಖಾನ್​ ಸಂಜೆ ವೇಳೆಗೆ ಮನೆಯ ಬಾಲ್ಕನಿಗೆ ಬಂದರು. ಕತ್ತಲಾಗಿದ್ದರೂ ಅಭಿಮಾನಿಗಳ ಉತ್ಸಾಹ ಕಮ್ಮಿ ಆಗಿರಲಿಲ್ಲ. ಸಾವಿರಾರು ಜನರು ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಎದುರು ಮೊಬೈಲ್​ ಫೋನ್​ ಟಾರ್ಚ್​ ಆನ್​ ಮಾಡಿ ಅಭಿಮಾನ ಪ್ರದರ್ಶಿಸಿದರು. ಎಲ್ಲರ ಕಡೆಗೂ ಕೈ ಬೀಸಿ ಸಲ್ಮಾನ್​ ಖಾನ್​ ವಿಶ್​ ಮಾಡಿದರು. ಅದೇ ರೀತಿ ಶಾರುಖ್​ ಖಾನ್ ಅವರು ಸಂಜೆ ವೇಳೆಗೆ ಪುತ್ರ ಅಬ್ರಾಮ್​ ಜತೆ ‘ಮನ್ನತ್​’ ಬಾಲ್ಕನಿಗೆ ಬಂದು ಅಭಿಮಾನಿಗಳತ್ತ ಕೈ ಬೀಸಿದರು.

ಕತ್ತಲಾದ್ರೂ ಕಾದಿದ್ದ ಜನಸಾಗರ; ಮನೆಯಿಂದ ಹೊರಬಂದು ವಿಶ್​ ಮಾಡಿದ ಶಾರುಖ್​, ಸಲ್ಲು
ಶಾರುಖ್​ ಖಾನ್​, ಸಲ್ಮಾನ್​ ಖಾನ್​
Follow us
ಮದನ್​ ಕುಮಾರ್​
|

Updated on: Apr 11, 2024 | 10:32 PM

ಬಾಲಿವುಡ್​ನ ಸ್ಟಾರ್​ ನಟರಾದ ಆಮಿರ್​ ಖಾನ್​, ಶಾರುಖ್​ ಖಾನ್​, ಸಲ್ಮಾನ್​ ಖಾನ್​ (Salman Khan) ಮುಂತಾದವರು ಅದ್ದೂರಿಯಾಗಿ ಈದ್​ (Eid 2024) ಹಬ್ಬ ಆಚರಿಸಿದ್ದಾರೆ. ಇಂದು (ಏಪ್ರಿಲ್​ 11) ಸಿನಿಮಾ ಕೆಲಸಗಳಿಗೆ ಬಿಡುವು ನೀಡಿ ಅವರು ಹಬ್ಬದ ಆಚರಣೆಯಲ್ಲಿ ಭಾಗಿ ಆಗಿದ್ದಾರೆ. ಈ ವಿಶೇಷ ದಿನದಂದು ಅವರನ್ನು ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಹಾಗಾಗಿ ಸಲ್ಮಾನ್​ ಖಾನ್​ ಹಾಗೂ ಶಾರುಖ್​ ಖಾನ್​ (Shah Rukh Khan) ಅವರ ಮನೆ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಕಾದಿದ್ದರು. ಅವರಿಗೆಲ್ಲ ಶಾರುಖ್​, ಸಲ್ಲು ದರ್ಶನ​ ನೀಡಿದ್ದಾರೆ. ಮನೆಯ ಬಾಲ್ಕನಿಗೆ ಬಂದು ಈದ್​ ಶುಭಾಶಯ ತಿಳಿಸಿದ್ದಾರೆ.

ಬರ್ತ್​ಡೇ ಹಾಗೂ ಈದ್​ ರೀತಿಯ ವಿಶೇಷ ದಿನದಂದು ಈ ಸ್ಟಾರ್​ ನಟರ ಮನೆ ಎದುರು ಅಭಿಮಾನಿಗಳು ಸೇರುತ್ತಾರೆ. ಇಂದು (ಏ.11) ಕೂಡ ಹಾಗೆಯೇ ಆಯಿತು. ಬೆಳಗ್ಗೆಯಿಂದಲೇ ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​ ಅವರ ಮನೆ ಮುಂದೆ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಕತ್ತಲಾಗುವ ತನಕವೂ ಸಲ್ಮಾನ್​ ಖಾನ್​ ಅವರ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು.

ಬೆಳಗ್ಗೆಯಿಂದ ಹಬ್ಬದ ಖುಷಿಯಲ್ಲಿ ಬ್ಯುಸಿ ಆಗಿದ್ದ ಸಲ್ಮಾನ್​ ಖಾನ್​ ಅವರು ಸಂಜೆ ನಂತರ ಮನೆಯ ಬಾಲ್ಕನಿಗೆ ಬಂದರು. ಆಗಲೂ ಅಭಿಮಾನಿಗಳ ಉತ್ಸಾಹ ಕಡಿಮೆ ಆಗಿರಲಿಲ್ಲ. ಸಾವಿರಾರು ಅಭಿಮಾನಿಗಳು ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಎದುರು ಮೊಬೈಲ್​ ಟಾರ್ಚ್​ ಆನ್​ ಮಾಡಿ ಅಭಿಮಾನ ಪ್ರದರ್ಶಿಸಿದರು. ಎಲ್ಲರ ಕಡೆಗೂ ಕೈ ಬೀಸಿ ಸಲ್ಮಾನ್​ ಖಾನ್​ ವಿಶ್​ ಮಾಡಿದರು. ಅದೇ ರೀತಿ ಶಾರುಖ್​ ಖಾನ್ ಅವರು ಸಂಜೆ ವೇಳೆಗೆ ಪುತ್ರ ಅಬ್ರಾಮ್​ ಜೊತೆ ‘ಮನ್ನತ್​’ ಬಾಲ್ಕನಿಗೆ ಬಂದು ಅಭಿಮಾನಿಗಳತ್ತ ಕೈ ಬೀಸಿದರು.

ಇದನ್ನೂ ಓದಿ: ಸಲ್ಮಾನ್​ ಖಾನ್​ ಮನೆಗೆ ಪದೇಪದೇ ಭೇಟಿ ನೀಡುತ್ತಿರುವ ಅಟ್ಲಿ; ಏನು ಸಮಾಚಾರ?

ನಡೆಯಿತು ಲಾಠಿಚಾರ್ಚ್​

ಈದ್​ ಹಬ್ಬದ ಪ್ರಯುಕ್ತ ಮಧ್ಯಾಹ್ನ ಸಲ್ಮಾನ್​ ಖಾನ್​ ಅವರ ಮನೆ ಎದುರು ಜನಸಾಗರವೇ ಸೇರಿತ್ತು. ಅದರಿಂದ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ವಾಹನಗಳ ಸಂಚಾರಕ್ಕೆ ಅಡಚಣೆ ಆಗಿದ್ದರಿಂದ ಪೊಲೀಸರು ಲಾಠಿಚಾರ್ಜ್​ ಮಾಡುವುದು ಅನಿವಾರ್ಯ ಆಯಿತು. ಹಾಗಿದ್ದರೂ ಕೂಡ ಜನರ ಉತ್ಸಾಹ ಕುಂದಲಿಲ್ಲ. ಸಂಜೆ ತನಕ ಕಾದಿದ್ದ ಅಭಿಮಾನಿಗಳು ಸಲ್ಮಾನ್​ ಖಾನ್​ ಅವರನ್ನು ನೋಡಿಕೊಂಡು ವಾಪಸ್​ ತೆರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ