ಐದನೇ ದಿನಕ್ಕೆ ನೆಲಕಚ್ಚಿದ ಅಕ್ಷಯ್ ಕುಮಾರ್ ಸಿನಿಮಾ; ಮುಗಿಯಿತು ಆಟ
Bade Miyan Chote Miyan Collection: ಮೊದಲು ಹಾಸ್ಯ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಅಕ್ಷಯ್ ಕುಮಾರ್ ಈಗ ಗಂಭೀರ ಹಾಗೂ ಆ್ಯಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ಇದು ಜನರಿಗೆ ಅಷ್ಟಾಗಿ ಇಷ್ಟ ಆಗುತ್ತಿಲ್ಲ. ಈಗ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ಅವರಿಗೆ ಮತ್ತೆ ಸೋಲಾಗಿದೆ.
ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ (Bade Miyan Chote Miyan) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿದೆ. ಏಪ್ರಿಲ್ 11ರಂದು ರಿಲೀಸ್ ಆದ ಈ ಚಿತ್ರ ಐದನೇ ದಿನಕ್ಕೆ ನೆಲಕಚ್ಚಿದೆ. ಈದ್ ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆದ ಹೊರತಾಗಿಯೂ ಚಿತ್ರವನ್ನು ಜನರು ಮೆಚ್ಚಿಕೊಂಡಿಲ್ಲ. ಈ ಚಿತ್ರ 100 ಕೋಟಿ ರೂಪಾಯಿ ತಲುಪೋದು ಅನುಮಾನ ಎನ್ನಲಾಗುತ್ತಿದೆ.
ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ಕಂಡ ಸೋಲುಗಳ ಸಂಖ್ಯೆ ಕಡಿಮೆ ಏನಿಲ್ಲ. ಆದಾಗ್ಯೂ ಅವರು ಸುಮ್ಮನೆ ಕುಳಿತಿಲ್ಲ. ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಮೊದಲು ಹಾಸ್ಯ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಅವರು, ಈಗ ಗಂಭೀರ ಹಾಗೂ ಆ್ಯಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ಇದು ಜನರಿಗೆ ಅಷ್ಟಾಗಿ ಇಷ್ಟ ಆಗುತ್ತಿಲ್ಲ. ಈಗ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ಅವರಿಗೆ ಮತ್ತೆ ಸೋಲಾಗಿದೆ.
‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೊದಲ ದಿನ (ಶನಿವಾರ) 15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ (ಶುಕ್ರವಾರ) ಈ ಸಿನಿಮಾ 7.6 ಕೋಟಿ ರೂಪಾಯಿ, ಮೂರನೇ ದಿನ (ಶನಿವಾರ) 8.5 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ (ಭಾನುವಾರ) 9.5 ಕೋಟಿ ರೂಪಾಯಿ ಗಳಿಕೆ ಮಾಡಿತು. ಸೋಮವಾರ (ಏಪ್ರಿಲ್ 15) ಸಿನಿಮಾದ ಗಳಿಕೆ ಸಂಪೂರ್ಣ ನೆಲಕಚ್ಚಿದೆ. ಈ ಚಿತ್ರ ಕೇವಲ 2.50 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಮೂಲಕ ಒಟ್ಟೂ ಕಲೆಕ್ಷನ್ 43 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ‘ಬಡೇ ಮಿಯಾ ಚೋಟೆ ಮಿಯಾ’ ಟ್ವಿಟರ್ ವಿಮರ್ಶೆ; ಅಕ್ಷಯ್, ಟೈಗರ್ಗಿಂತ ಪೃಥ್ವಿರಾಜ್ಗೆ ಹೆಚ್ಚು ಅಂಕ
ಮುಂದಿನ ದಿನಗಳಲ್ಲಿ ಅಕ್ಷಯ್ ಕುಮಾರ್ ನಟನೆಯ ಈ ಚಿತ್ರಕ್ಕೆ ಮತ್ತಷ್ಟು ತೊಂದರೆ ಆಗೋ ಸಾಧ್ಯತೆ ಇದೆ. ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್ ಸೇರಿ ಅನೇಕರು ನಟಿಸಿದ್ದರು. ಈ ಚಿತ್ರ 1100 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದು ತಂಡದವರು ಈ ಮೊದಲು ಹೇಳಿಕೊಂಡಿದ್ದರು. ಈಗ 100 ಕೋಟಿ ಗಳಿಸಲೂ ಸಿನಿಮಾ ಒದ್ದಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ