ಶಾರುಖ್​, ಆಮಿರ್​, ಸಲ್ಲು ಬಗ್ಗೆ ಪಾಕ್​ ನಟಿಯ ಹೇಳಿಕೆ ವೈರಲ್​; ಏನಿದೆ ಈ ವಿಡಿಯೋದಲ್ಲಿ?

‘ಪಾಕಿಸ್ತಾನದ​ ನಟರು ಕೇವಲ ಭಾರತದ ಸಿನಿಮಾದಲ್ಲಿ ಅವಕಾಶ ಪಡೆಯುತ್ತಾರೆ ಎಂಬುದಷ್ಟೇ ವಿಷಯವಲ್ಲ. ಭಾರತೀಯರು ಪಾಕ್​​ ನಟರನ್ನು ಇಷ್ಟಪಡಲು ಆರಂಭಿಸುತ್ತಾರೆ. ಈ ನಟರು ಬಾಲಿವುಡ್​ಗೆ ಬಂದರೆ ಏನು ಗತಿ ಅಂತ ಆಮಿರ್​ ಖಾನ್​, ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಭಯಗೊಂಡಿದ್ದಾರೆ’ ಎಂದು ಪಾಕ್​ ನಟಿ​ ಮಾತನಾಡಿದ ವಿಡಿಯೋ ವೈರಲ್​ ಆಗಿದೆ.

ಶಾರುಖ್​, ಆಮಿರ್​, ಸಲ್ಲು ಬಗ್ಗೆ ಪಾಕ್​ ನಟಿಯ ಹೇಳಿಕೆ ವೈರಲ್​; ಏನಿದೆ ಈ ವಿಡಿಯೋದಲ್ಲಿ?
ಆಮಿರ್​ ಖಾನ್​, ಸಲ್ಮಾನ್​ ಖಾನ್​, ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Apr 04, 2024 | 4:57 PM

ಬಾಲಿವುಡ್​ನ ಸ್ಟಾರ್​ ನಟರಾದ ಆಮಿರ್​ ಖಾನ್​, ಶಾರುಖ್​ ಖಾನ್​, ಸಲ್ಮಾನ್​ ಖಾನ್​ (Salman Khan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಪಾಕಿಸ್ತಾನದಲ್ಲೂ ಅವರನ್ನು ಇಷ್ಟಪಡುವ ಜನರು ಇದ್ದಾರೆ. ಈ ನಡುವೆ ಪಾಕ್​ ನಟಿಯೊಬ್ಬರು ಸಲ್ಮಾನ್​ ಖಾನ್​, ಶಾರುಖ್​ ಖಾನ್​ ಹಾಗೂ ಆಮಿರ್​ ಖಾನ್ (Aamir Khan)​ ಬಗ್ಗೆ ನೀಡಿದ ಒಂದು ಹೇಳಿಕೆ ವೈರಲ್​ ಆಗುತ್ತಿದೆ. ಟಿವಿ ಕಾರ್ಯಕ್ರಮವೊಂದರಲ್ಲಿ ನಟಿ ನದಿಯಾ ಖಾನ್​ ಅವರು ಈ ಹೇಳಿಕೆ ನೀಡಿದ್ದಾರೆ. ಪಾಕ್​ ನಟರಿಂದಾಗಿ ಶಾರುಖ್​ ಖಾನ್​ (Shah Rukh Khan), ಸಲ್ಮಾನ್​ ಖಾನ್​, ಹಾಗೂ ಆಮಿರ್​ ಖಾನ್​ ಅವರಿಗೆ ಅಭದ್ರತೆ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ. ವೈರಲ್ ಆಗಿರುವ ಈ ವಿಡಿಯೋಗೆ ಭಾರತದ ಮಂದಿ ಕಮೆಂಟ್​ ಮಾಡುತ್ತಿದ್ದಾರೆ. ಆ ಮೂಲಕ ನಟಿಯ ಹೇಳಿಕೆಗೆ ತಿರುಗೇಟು ನೀಡಲಾಗುತ್ತಿದೆ.

‘ಭಾರತದ ಸಿನಿಮಾಗಳಲ್ಲಿ ಪಾಕ್​ ನಟರಾದ ಫವಾದ್​ ಖಾನ್​ ಮುಂತಾದವರು ನಟಿಸಿದ ಬಳಿಕ ಭಾರತದ ಟಾಪ್​ ಹೀರೋಗಳಿಗೆ ಅಭದ್ರತೆ ಕಾಡಲು ಆರಂಭಿಸಿದೆ. ರಾಜಕೀಯದ ವಿಷಯ ಇಟ್ಟುಕೊಂಡು ಎರಡು ದೇಶಗಳ ನಡುವೆ ಬ್ಯಾನ್​ ಹೇರುವ ಮೂಲಕ ನಮ್ಮ ದೇಶದ ನಟರು ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡದಂತೆ ಬಾಲಿವುಡ್​ ಮಂದಿ ನೋಡಿಕೊಂಡಿದ್ದಾರೆ. ಕೇವಲ ಭಾರತದ ರಾಜಕಾರಣಿಗಳಿಗೆ ಮಾತ್ರ ನಾವು ಸಮಸ್ಯೆ ಅಲ್ಲ. ಅಲ್ಲಿನ ಟಾಪ್​ ನಟರಿಗೂ ನಮ್ಮ ಬಗ್ಗೆ ಭಯ ಇದೆ’ ಎಂದು ನದಿಯಾ ಖಾನ್​ ಹೇಳಿದ್ದಾರೆ.

ಪಾಕಿಸ್ತಾನಿ ನಟಿಯ ವೈರಲ್​ ವಿಡಿಯೋ:

‘ಪಾಕ್​ ನಟರು ಕೇವಲ ಸಿನಿಮಾದಲ್ಲಿ ಅವಕಾಶ ಪಡೆಯುತ್ತಾರೆ ಎಂಬುದು ಮಾತ್ರ ವಿಷಯವಲ್ಲ. ಭಾರತದವರು ಪಾಕಿಸ್ತಾನದ ನಟರನ್ನು ಇಷ್ಟಪಡಲು ಆರಂಭಿಸುತ್ತಾರೆ. ನಮ್ಮ ನಟರಾದ ವಹಾಜ್​ ಅಲಿ ಮತ್ತು ಬಿಲಾಲ್​ ಅಬ್ಬಾಸ್​ ಖಾನ್​ ಅವರು ಭಾರತದಲ್ಲಿ ವೈರಲ್​ ಆಗಿದ್ದಾರೆ. ಅಲ್ಲಿ ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಈ ನಟರು ಬಾಲಿವುಡ್​ಗೆ ಬಂದರೆ ಏನು ಗತಿ ಅಂತ ಆಮಿರ್​ ಖಾನ್​, ಸಲ್ಮಾನ್​ ಖಾನ್​, ಶಾರುಖ್​ ಖಾನ್​ ಕೂಡ ಭಯಗೊಂಡಿದ್ದಾರೆ’ ಎಂದು ನದಿಯಾ ಖಾನ್​ ಮಾತನಾಡಿದ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: ಮೋದಿ ವಿರುದ್ಧ ದೂರು ನೀಡಲು ಮುಂದಾದ ಪಾಕ್​ ನಟಿ; ಖಡಕ್​ ಪ್ರತಿಕ್ರಿಯೆ ನೀಡಿದ ದೆಹಲಿ ಪೊಲೀಸರು

ಈ ವಿಡಿಯೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಈಕೆ ನೆಟ್ಟಗಿದ್ದಾರೆ ತಾನೆ?’ ಎಂದು ‘ಎಕ್ಸ್​’ (ಟ್ವಿಟರ್​) ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ‘ಈ ನಟಿ ಸಿಕ್ಕಾಪಟ್ಟೆ ಭ್ರಮೆಯಲ್ಲಿ ಇದ್ದಾರೆ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ‘ಭ್ರಮೆಗೂ ಒಂದು ಮಿತಿ ಇರಬೇಕು’ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಉರಿ ದಾಳಿ ಮತ್ತು ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಕಲಾವಿದರನ್ನು ಭಾರತದಲ್ಲಿ ಬ್ಯಾನ್​ ಮಾಡಲಾಯಿತು. ಅದೇ ರೀತಿ, ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ