AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಬದುಕಿರುವವರೆಗೂ ಶ್ರೀದೇವಿ ಬಯೋಪಿಕ್‌ಗೆ ಒಪ್ಪಿಗೆ ನೀಡಲ್ಲ ಎಂದ ಬೋನಿ ಕಪೂರ್

2018ರಲ್ಲಿ ಶ್ರೀದೇವಿ ದುಬೈನ ಹೋಟೆಲ್ ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅವರ ಸಾವಿನ ಬಗ್ಗೆ ಇನ್ನೂ ಅನೇಕರಿಗೆ ಅನುಮಾನ ಇದೆ. ಹೀಗಾಗಿ, ಬಯೋಪಿಕ್ ಮಾಡಿದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಅನ್ನೋದು ಅನೇಕರ ಅಭಿಪ್ರಾಯ ಆಗಿತ್ತು. ಆದರೆ, ಇದಕ್ಕೆ ಬೋನಿ ಕಪೂರ್ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ನಾನು ಬದುಕಿರುವವರೆಗೂ ಶ್ರೀದೇವಿ ಬಯೋಪಿಕ್‌ಗೆ ಒಪ್ಪಿಗೆ ನೀಡಲ್ಲ ಎಂದ ಬೋನಿ ಕಪೂರ್
ಬೋನಿ-ಶ್ರೀದೇವಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 04, 2024 | 11:04 AM

ನಟಿ ಶ್ರೀದೇವಿ (Sridevi) ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕ ಎಲ್ಲರ ಮನ ಗೆದ್ದರು. ಅವರನ್ನು ಆರಾಧಿಸುವ ಅನೇಕರು ಇದ್ದಾರೆ. ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಫೇಮಸ್ ಆಗಿದ್ದಾರೆ. ಅವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಮದುವೆ ಆದ ವ್ಯಕ್ತಿ (ಬೋನಿ ಕಪೂರ್) ಪ್ರೀತಿಸಿದ್ದು, ಅತಿಯಾಗಿ ಮದ್ಯ ಸೇವನೆ ಮಾಡುತ್ತಾರೆ ಎನ್ನುವ ಆರೋಪ, ಅವರ ಸಾವು ಹೀಗೆ ಹಲವು ವಿಚಾರಗಳು ಚರ್ಚೆಯಲ್ಲಿದ್ದವು. ಅವರ ಬಗ್ಗೆ ಬಯೋಪಿಕ್ ಸಿದ್ಧವಾಗಲಿದೆ ಎನ್ನುವ ವಿಚಾರ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಇದಕ್ಕೆಲ್ಲ ಬೋನಿ ಕಪೂರ್ ಅವರು ಫುಲ್​ಸ್ಟಾಪ್ ಇಟ್ಟಿದ್ದಾರೆ.

ಬೋನಿ ಕಪೂರ್ ಅವರು ಬಾಲಿವುಡ್​ನ ಖ್ಯಾತ ನಿರ್ಮಾಪಕ. ಅವರು ‘ಮೈದಾನ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಪ್ರಚಾರದಲ್ಲಿ ಅವರು ನಿರತರಾಗಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ನೀಡಿದ ವಿವಿಧ ಸಂದರ್ಶನಗಳಲ್ಲಿ ಶ್ರೀದೇವಿಯನ್ನು ಪ್ರಸ್ತಾಪಿಸಿದಾಗ ಅವರು ಭಾವುಕರಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಅವರಿಗೆ ಶ್ರೀದೇವಿ ಅವರ ಬಯೋಪಿಕ್ ಕುರಿತ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಅವರು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

ಬೋನಿ ಕಪೂರ್ ಅವರಿಗೆ ಆಗಲೇ ಮದುವೆ ಆಗಿತ್ತು. ಮೋನಾ ಜೊತೆ ಅವರು ಸಂಸಾರ ನಡೆಸುತ್ತಿದ್ದರು. ಆದಾಗ್ಯೂ ಶ್ರೀದೇವಿ ಜೊತೆ ಅವರಿಗೆ ಪ್ರೀತಿ ಮೂಡಿತು. 1996ರಲ್ಲಿ  ಇವರು ಮದುವೆ ಆದರು. ಅವರಿಗೆ ಜಾನ್ವಿ ಮತ್ತು ಖುಷಿ ಹೆಸರಿನ ಹೆಣ್ಣು ಮಕ್ಕಳಿದ್ದಾರೆ. 2018ರಲ್ಲಿ ಶ್ರೀದೇವಿ ದುಬೈನ ಹೋಟೆಲ್ ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅವರ ಸಾವಿನ ಬಗ್ಗೆ ಇನ್ನೂ ಅನೇಕರಿಗೆ ಅನುಮಾನ ಇದೆ. ಹೀಗಾಗಿ, ಬಯೋಪಿಕ್ ಮಾಡಿದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಅನ್ನೋದು ಅನೇಕರ ಅಭಿಪ್ರಾಯ ಆಗಿತ್ತು. ಆದರೆ, ಇದಕ್ಕೆ ಬೋನಿ ಕಪೂರ್ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

‘ಶ್ರೀದೇವಿ ಅವರ ಜೀವನಾಧಾರಿತ ಬಯೋಪಿಕ್ ಮಾಡಲು ನೀವು ಎಂದಾದರೂ ಯೋಚಿಸಿದ್ದೀರಾ’ ಎಂದು ಅವರಿಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಬೋನಿ ಕಪೂರ್, ‘ಶ್ರೀದೇವಿ ತಮ್ಮ ಖಾಸಗಿ ಜೀವನವನ್ನು ಖಾಸಗಿಯಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಿದ್ದರು. ಆದ್ದರಿಂದ ಅವರ ಮರಣದ ನಂತರವೂ ಇದನ್ನು ಅನುಸರಿಸಬೇಕಿದೆ. ಅವರ ಜೀವನದ ಮೇಲೆ ಬಯೋಪಿಕ್ ಬರುವುದಿಲ್ಲ. ನಾನು ಬದುಕಿರುವವರೆಗೂ ಬಯೋಪಿಕ್‌ಗೆ ಒಪ್ಪಿಗೆ ನೀಡುವುದಿಲ್ಲ’ ಎಂದಿದ್ದಾರೆ. ಕುಟುಂಬದವರ ಒಪ್ಪಿಗೆ ಪಡೆಯದೇ ಬಯೋಪಿಕ್ ಮಾಡೋದು ಅಸಾಧ್ಯ. ಹೀಗಾಗಿ, ಶ್ರೀದೇವಿ ಬಯೋಪಿಕ್ ದೊಡ್ಡ ಪರದೆಮೇಲೆ ಬರೋದು ಅನುಮಾನವೇ.

ಇದನ್ನೂ ಓದಿ: ಜಾನ್ವಿ ಕಪೂರ್-ಶಿಖರ್ ಸಂಬಂಧವನ್ನು ಖಚಿತಪಡಿಸಿದ ಬೋನಿ ಕಪೂರ್

ಶ್ರೀದೇವಿಗಿಂತ ಮೊದಲು ಬೋನಿ ಕಪೂರ್ ಮೋನಾ ಶೌರಿ ಅವರನ್ನು ಮದುವೆಯಾಗಿದ್ದರು. ಅವರು 1983ರಿಂದ 1996 ರವರೆಗೆ ಒಟ್ಟಿಗೆ ಇದ್ದರು. ನಂತರ ಬೋನಿ ಕಪೂರ್ ಶ್ರೀದೇವಿಯನ್ನು ಮದುವೆ ಆದರು ಮತ್ತು ಮೋನಾಗೆ ವಿಚ್ಛೇದನ ನೀಡಿದರು. ಮೋನಾ ಮತ್ತು ಬೋನಿಗೆ ಅರ್ಜುನ್ ಮತ್ತು ಅಂಶುಲಾ ಹೆಸರಿನ ಮಕ್ಕಳಿದ್ದಾರೆ. ಶ್ರೀದೇವಿಯೊಂದಿಗಿನ ಮದುವೆಯ ನಂತರ ಅರ್ಜುನ್ ಮತ್ತು ಮಗಳು ಅಂಶುಲಾ ಬೋನಿ ಕಪೂರ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು. ಶ್ರೀದೇವಿ ಸಾವಿನ ಬಳಿಕ ಅರ್ಜುನ್ ಕಪೂರ್ ಮನಸ್ಸು ಬದಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ