AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ಅಕ್ಷಯ್ ಸಿನಿಮಾ; ಭವಿಷ್ಯ ನುಡಿದ ನಿರ್ಮಾಪಕ

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಇತ್ತೀಚೆಗೆ ದೊಡ್ಡ ಗೆಲುವು ಕಂಡಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಇಬ್ಬರೂ ‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದು ಟ್ರೇಲರ್ ನೋಡಿದ ಎಲ್ಲರಿಗೂ ಗೊತ್ತಾಗಿದೆ

1100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ಅಕ್ಷಯ್ ಸಿನಿಮಾ; ಭವಿಷ್ಯ ನುಡಿದ ನಿರ್ಮಾಪಕ
ಅಕ್ಷಯ್-ಟೈಗರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 05, 2024 | 1:10 PM

Share

ಕಳೆದ ವರ್ಷ ಬಾಲಿವುಡ್​ನ ‘ಜವಾನ್’ (Jawan Movie) ಹಾಗೂ ‘ಪಠಾಣ್’ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದ್ದವು. ‘ಗದರ್ 2’, ‘ಜೈಲರ್’ ಸೇರಿ ಅನೇಕ ಸಿನಿಮಾಗಳು 500+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮಿಂಚಿವೆ. ಈ ವರ್ಷ ಯಾವ ಚಿತ್ರವೂ ಈವರೆಗೆ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿಲ್ಲ. ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಹಾಗೂ ಪೃಥ್ವಿರಾಜ್​ ಸುಕುಮಾರ್ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಲಿದೆ ಎಂದು ನಿರ್ಮಾಪಕರು ಭವಿಷ್ಯ ನುಡಿದಿದ್ದಾರೆ.

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಇತ್ತೀಚೆಗೆ ದೊಡ್ಡ ಗೆಲುವು ಕಂಡಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಇಬ್ಬರೂ ‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದು ಟ್ರೇಲರ್ ನೋಡಿದ ಎಲ್ಲರಿಗೂ ಗೊತ್ತಾಗಿದೆ. ಈ ರೀತಿಯ ಆ್ಯಕ್ಷನ್ ಸಿನಿಮಾಗಳು ಅಭಿಮಾನಿಗಳಿಗೆ ಹೆಚ್ಚು ಇಷ್ಟ ಆಗುತ್ತಿದೆ. ಇದೇ ನಂಬಿಕೆಯಲ್ಲಿ ನಿರ್ಮಾಪಕರೂ ಇದ್ದಾರೆ. ಏಪ್ರಿಲ್ 10ರಂದು ಸಿನಿಮಾ ರಿಲೀಸ್ ಆಗುತ್ತಿದೆ.

ನಿರ್ಮಾಪಕ ವಷು ಭಗ್ನಾನಿ ಅವರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಕಲೆಕ್ಷನ್ ಬಗ್ಗೆ ಹೇಳಿದ್ದಾರೆ. ‘ವಿಶ್ವಾದ್ಯಂತ 1100 ಕೋಟಿ ರೂಪಾಯಿ ಪಕ್ಕಾ’ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಜಾಕಿ ಭಗ್ನಾನಿ ಕೂಡ ಹೌದು ಎಂದು ಉತ್ತರಿಸಿದ್ದಾರೆ.

ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗಿ ಸಿನಿಮಾಗಳು ಫ್ಲಾಪ್ ಎನಿಸಿಕೊಂಡ ಉದಾಹರಣೆ ಸಾಕಷ್ಟಿದೆ. ಸಿನಿಮಾದ ಕಂಟೆಂಟ್, ಸಿನಿಮಾದಲ್ಲಿ ಹೇಳಲಾದ ವಿಚಾರ, ಅದನ್ನು ಕಟ್ಟಿಕೊಟ್ಟ ರೀತಿ ಎಲ್ಲವೂ ಮುಖ್ಯವಾಗುತ್ತವೆ. ಇದರ ಆಧಾರದ ಮೇಲೆ ಸಿನಿಮಾ ಗೆಲ್ಲುತ್ತದೆಯೋ ಅಥವಾ ಇಲ್ಲವೋ ಅನ್ನೋದು ನಿರ್ಧಾರ ಆಗುತ್ತದೆ. ಈಗ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಯಾವ ರೀತಿಯಲ್ಲಿ ರೆಸ್ಪಾನ್ಸ್ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ಪ್ರಶಾಂತ್ ನೀಲ್ ಒತ್ತಾಯಕ್ಕೆ ನಾನು ಆ ಸಿನಿಮಾ ಮಾಡಿದೆ’; ಒಪ್ಪಿಕೊಂಡ ಪೃಥ್ವಿರಾಜ್

‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾನ ಅಲಿ ಅಬ್ಬಾಸ್ ಝಪರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾನ 350 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಪಡಿಸಲಾಗಿದೆ. ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್ ಜೊತೆ ಮಾನುಷಿ ಚಿಲ್ಲರ್, ಅಲಾಯಾ, ಸೋನಾಕ್ಷಿ ಸಿನ್ಹಾ ಮೊದಲಾದವರು ನಟಿಸಿದ್ದಾರೆ.  ಈದ್ ಪ್ರಯುಕ್ತ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!