‘ನಾನು ನಿಮ್ಮ ಹೃದಯದಲ್ಲಿದ್ದೇನೆ’; ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ ಖರೀದಿಸಿದ ಅದಾ ಶರ್ಮಾ
ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು ವಾಸ ಮಾಡುತ್ತಿದ್ದರು. 2020ರ ಜೂನ್ 14ರಂದು ಅವರು ನಿಧನ ಹೊಂದಿದರು. ಇದಾದ ಬಳಿಕ ಈ ಫ್ಲ್ಯಾಟ್ ಖಾಲಿಯೇ ಉಳಿದಿತ್ತು.

ನಟಿ ಅದಾ ಶರ್ಮಾ (Adah Sharma) ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಕಾರಣದಿಂದ ಅವರು ಸಾಕಷ್ಟು ಸುದ್ದಿ ಆದರು. ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿದೆ. ಈಗ ಅವರು ಮತ್ತೊಂದು ವಿಶೇಷ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಸಾಯುವಾಗ ಉಳಿದುಕೊಂಡಿದ್ದ ಮನೆಯನ್ನು ಅವರು ಖರೀದಿ ಮಾಡಿದ್ದಾರೆ. ಈ ವಿಚಾರದಲ್ಲಿ ಮೌನ ವಹಿಸಿದ್ದ ಅವರು ಆ ಬಗ್ಗೆ ಮಾತನಾಡಿದ್ದಾರೆ.
ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು ವಾಸ ಮಾಡುತ್ತಿದ್ದರು. 2020ರ ಜೂನ್ 14ರಂದು ಅವರು ನಿಧನ ಹೊಂದಿದರು. ಇದಾದ ಬಳಿಕ ಈ ಫ್ಲ್ಯಾಟ್ ಖಾಲಿಯೇ ಉಳಿದಿತ್ತು. ಯಾರೊಬ್ಬರೂ ಈ ಮನೆಯಲ್ಲಿ ಉಳಿದುಕೊಳ್ಳಲು ಮುಂದೆ ಬಂದಿರಲಿಲ್ಲ. ಹೀಗಾಗಿ, ಇದರ ಮಾಲೀಕರು ಈ ಅಪಾರ್ಟ್ಮೆಂಟ್ನ ಮಾರುವ ನಿರ್ಧಾರಕ್ಕೆ ಬಂದಿದ್ದರು. ನಂತರ ಅದಾ ಶರ್ಮಾ ಅವರನ್ನು ಇದನ್ನು ಖರೀದಿ ಮಾಡಿದ್ದಾರೆ.
‘ನಾನು ಎಲ್ಲರ ಹೃದಯದಲ್ಲಿ ವಾಸಿಸುತ್ತಿದ್ದೇನೆ. ಮಾತನಾಡಲು ಇದು ಸರಿಯಾದ ಸಮಯ. ನಾನು ಆ ಮನೆ ನೋಡಲು ಹೋದಾಗ ಮಾಧ್ಯಮದ ಗಮನ ಸಂಪೂರ್ಣವಾಗಿ ನನ್ನ ಮೇಲೆ ಇತ್ತು. ನಾನು ಖಾಸಗಿ ವಿಚಾರವನ್ನು ನನ್ನಲ್ಲೇ ಇಟ್ಟುಕೊಳ್ಳಲು ಬಯಸುವ ವ್ಯಕ್ತಿ. ನನ್ನ ಸಿನಿಮಾಗಳಿಗಾಗಿ ಮಾತ್ರ ಸುದ್ದಿಯಲ್ಲಿ ಇರಲು ಬಯಸುತ್ತೇನೆ. ನಾನು ಉಳಿದ ವಿಚಾರಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳಲು ಇಷ್ಟಪಡುತ್ತೇನೆ’ ಎಂದಿದ್ದಾರೆ ಅವರು.
ಸುಶಾಂತ್ ಸಿಂಗ್ ಮೃತಪಟ್ಟ ಬಳಿಕ ಅವರ ಬಗ್ಗೆ ಕೆಲವರು ತಪ್ಪಾಗಿ ಮಾತನಾಡಿದ್ದರು. ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದೆಲ್ಲ ಹೇಳಿದ್ದರು. ಈ ವಿಚಾರ ಕೇಳಿ ಅದಾ ಶರ್ಮಾಗೆ ಬೇಸರ ಆಗಿತ್ತಂತೆ. ‘ಈ ಜಗತ್ತಿನಲ್ಲಿ ಇಲ್ಲದ ವ್ಯಕ್ತಿಯ ಬಗ್ಗೆ ಮಾತನಾಡುವುದು ತಪ್ಪು ಎಂದು ನಾನು ಭಾವಿಸಿದೆ. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಹೀಗಾಗಿ, ನಾನು ಆ ಮನೆ ಖರೀದಿಸಿದೆ. ಅವರ ಬಗ್ಗೆ ಮಾಡಿದ ಕೆಲವು ಕಮೆಂಟ್ಗಳನ್ನು ನೋಡಿದೆ. ನನ್ನನ್ನು ಟ್ರೋಲ್ ಮಾಡಿ. ಆದರೆ, ಜಗತ್ತಿನಲ್ಲಿ ಇಲ್ಲದ ಆ ವ್ಯಕ್ತಿ ಬಗ್ಗೆ ಮಾತನಾಡಬೇಡಿ’ ಎಂದು ಕೋರಿದ್ದಾರೆ ಅವರು.
ಇದನ್ನೂ ಓದಿ: ಮತ್ತೆ ಮದುವೆ ಆದ ಸುಶಾಂತ್ ಮಾಜಿ ಪ್ರೇಯಸಿ; ಫೋಟೋ ವೈರಲ್
ಸುಶಾಂತ್ ವಾಸವಾಗಿದ್ದು 4 ಬಿಎಚ್ಕೆ ಮನೆ. ಸಮುದ್ರಕ್ಕೆ ಮುಖ ಮಾಡಿ ಈ ಮನೆ ಇದ್ದು, 2500 ಸ್ಕ್ವೇರ್ ಫೀಟ್ ಇದೆ. 6ನೇ ಅಂತಸ್ತಿನಲ್ಲಿ ಈ ಮನೆ ಇದೆ. 2022ರಲ್ಲಿ ಈ ಮನೆ ಮಾರಾಟದ ಬಗ್ಗೆ ಸುದ್ದಿ ಬಿತ್ತರ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




