ಮತ್ತೆ ಮದುವೆ ಆದ ಸುಶಾಂತ್ ಮಾಜಿ ಪ್ರೇಯಸಿ; ಫೋಟೋ ವೈರಲ್
ಮದುವೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಕ್ಕಿ ಹಾಗೂ ಅಂಕಿತಾ ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿವೆ. ಅಭಿಮಾನಿಗಳು ಇವರಿಗೆ ಪ್ರೀತಿ ಮತ್ತು ಹಾರೈಕೆಗಳನ್ನು ಸುರಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ನೋಡಿ ಅಭಿಮಾನಿಗಳೂ ಶಾಕ್ ಆಗಿದ್ದಾರೆ.

ಕಿರುತೆರೆ ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ಸದಾ ಸುದ್ದಿ ಆಗುತ್ತಾ ಇರುತ್ತಾರೆ. ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗಿನ ಪ್ರೀತಿ, ಪ್ರೇಮ, ಬ್ರೇಕ್ಅಪ್ ವಿಚಾರಕ್ಕೆ ಸುದ್ದಿ ಆಗಿದ್ದರು. ಆ ಬಳಿಕ ಅವರ ಜೀವನದಲ್ಲಿ ಉದ್ಯಮಿ ವಿಕ್ಕಿ ಜೈನ್ ಆಗಮನ ಆಯಿತು. ಇಬ್ಬರೂ ಕೆಲವು ವರ್ಷ ಡೇಟಿಂಗ್ ಮಾಡಿದ ಬಳಿಕ ಮದುವೆಯಾಗಲು ನಿರ್ಧರಿಸಿದರು. ವಿಕ್ಕಿ ಜೈನ್ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರೂ ಇಬ್ಬರೂ ಪ್ರೀತಿಗೆ ಪ್ರಾಮುಖ್ಯತೆ ನೀಡಿ ಮದುವೆಯಾದರು. ಈಗ ಇವರು ಮತ್ತೆ ಮದುವೆ ಆಗುತ್ತಿರುವ ಫೋಟೋ ವೈರಲ್ ಆಗಿದೆ.
ಮದುವೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಕ್ಕಿ ಹಾಗೂ ಅಂಕಿತಾ ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿವೆ. ಅಭಿಮಾನಿಗಳು ಇವರಿಗೆ ಪ್ರೀತಿ ಮತ್ತು ಹಾರೈಕೆಗಳನ್ನು ಸುರಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ನೋಡಿ ಅಭಿಮಾನಿಗಳೂ ಶಾಕ್ ಆಗಿದ್ದಾರೆ. ಅಂಕಿತಾ ಮತ್ತೆ ವಿಕ್ಕಿಯನ್ನು ಮದುವೆಯಾಗುತ್ತಿರುವ ಫೋಟೋದಲ್ಲಿ ಕಾಣಿಸಿದೆ. ಅರ್ಚಕರು ಕೂಡ ಕಾಣಿಸಿದ್ದಾರೆ.
ಅಂಕಿತಾ ಮತ್ತು ವಿಕ್ಕಿ ವಿವಾಹ ಆಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇವರಿಬ್ಬರ ಫೋಟೋಗಳಿಗೂ ಅಭಿಮಾನಿಗಳು ಲೈಕ್, ಕಮೆಂಟ್ಸ್ ಸುರಿಸುತ್ತಿದ್ದಾರೆ. ಆದರೆ ಯಾಕೆ ಇಬ್ಬರೂ ಮತ್ತೆ ಮದುವೆಯಾದರು? ಇದು ಜಾಹೀರಾತಿನ ಶೂಟಿಂಗ್ ಇರಬಹುದೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಸದ್ಯ ಅಂಕಿತಾ ಹಾಗೂ ವಿಕ್ಕಿ ಎರಡನೇ ಮದುವೆಯ ಮಾತು ಎಲ್ಲೆಡೆ ಚರ್ಚೆ ಆಗುತ್ತಿದೆ.
ಅಂಕಿತಾ ಮತ್ತು ವಿಕ್ಕಿ 2021ರ ಡಿಸೆಂಬರ್ ರಂದು ವಿವಾಹವಾದರು. ಅವರು ಮದುವೆಗೆ ಮೊದಲು ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು. ಇಬ್ಬರೂ ಮದುವೆಗೆ ದೊಡ್ಡ ಮೊತ್ತವನ್ನು ಖರ್ಚು ಮಾಡಿದರು ಈಗ ಇವರ ಹೊಸ ಫೋಟೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: ದಕ್ಷಿಣ ಭಾರತ ಸಿನಿಮಾದ ನಿರ್ಮಾಪಕನೊಟ್ಟಿಗೆ ಮಲಗಲು ಹೇಳಿದ್ದರು: ನಟಿ ಅಂಕಿತಾ
ಅಂಕಿತಾ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲೂ ಆಕೆಗೆ ಅಪಾರ ಅಭಿಮಾನಿಗಳಿದ್ದಾರೆ. ನಟಿ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಯಾವಾಗಲೂ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ನಟಿಯ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಮತ್ತು ಕಮೆಂಟ್ಸ್ ಸುರಿಸುತ್ತಾರೆ.
ವಿಚ್ಛೇದನ ವಿಚಾರ
‘ಬಿಗ್ ಬಾಸ್ ಹಿಂದಿ ಸೀಸನ್ 17’ರಲ್ಲಿ ಅಂಕಿತಾ ಹಾಗೂ ವಿಕ್ಕಿ ಇಬ್ಬರೂ ಆಗಮಿಸಿದ್ದರು. ಈ ವೇಳೆ ಇವರ ಮಧ್ಯೆ ಹಲವು ಬಾರಿ ಕಿರಿಕ್ಗಳು ಆಗಿದ್ದವು. ಅಂಕಿತಾ ವಿರುದ್ಧ ವಿಕ್ಕಿ ಅನೇಕ ಬಾರಿ ಕೂಗಾಡಿದ್ದಿದೆ. ಇಬ್ಬರ ಮಧ್ಯೆ ವಿಚ್ಛೇದನದ ವಿಚಾರ ಕೂಡ ಚರ್ಚೆ ಆಗಿತ್ತು. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಇಬ್ಬರೂ ಹಾಯಾಗಿಯೇ ಇದ್ದಾರೆ. ಇವರು ಬಿಗ್ ಬಾಸ್ನಲ್ಲಿ ಮಾಡಿದ ಜಗಳಗಳು ಗೇಮ್ನ ಭಾಗವೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



