ದಕ್ಷಿಣ ಭಾರತ ಸಿನಿಮಾದ ನಿರ್ಮಾಪಕನೊಟ್ಟಿಗೆ ಮಲಗಲು ಹೇಳಿದ್ದರು: ನಟಿ ಅಂಕಿತಾ

Ankita Lokhande: ದಿವಂಗತ ನಟ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ, ದಕ್ಷಿಣ ಭಾರತದ ಸಿನಿಮಾ ಒಂದರಿಂದ ಅನುಭವಿಸಿದ ಕೆಟ್ಟ ಅನುಭವ ಬಿಚ್ಚಿಟ್ಟಿದ್ದಾರೆ.

ದಕ್ಷಿಣ ಭಾರತ ಸಿನಿಮಾದ ನಿರ್ಮಾಪಕನೊಟ್ಟಿಗೆ ಮಲಗಲು ಹೇಳಿದ್ದರು: ನಟಿ ಅಂಕಿತಾ
Follow us
ಮಂಜುನಾಥ ಸಿ.
|

Updated on: Mar 01, 2024 | 3:25 PM

ದಿವಂಗತ ನಟ ಸುಶಾಂತ್ ಸಿಂಗ್ (Sushant Singh) ಮಾಜಿ ಪ್ರೇಯಸಿ, ನಟಿ ಅಂಕಿತಾ ಲೋಖಂಡೆ ತಮಗಾಗಿದ್ದ ಮೀ ಟೂ ಅನುಭವದ ಬಗ್ಗೆ ಮಾತನಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಮುಗಿದ ಬಿಗ್​ಬಾಸ್​ ಹಿಂದಿಯಲ್ಲಿ ಭಾಗಿಯಾಗಿದ್ದ ಅಂಕಿತಾ ಅಲ್ಲಿಯೂ ಸಹ ಕೆಲ ಖಾಸಗಿ ವಿಷಯಗಳನ್ನು ಹಂಚಿಕೊಂಡಿದ್ದರು. ಅದಾದ ಬಳಿಕ ಈಗ ತಮಗೆ ಚಿತ್ರರಂಗದಲ್ಲಿ ಎದುರಾದ ಮೀ ಟೂ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಅಂಕಿತಾ ಲೋಖಂಡೆ ಚಿತ್ರರಂಗಕ್ಕೆ ಕಾಲಿರಿಸುವ ಸಮಯದಲ್ಲಿಯೇ ಅವರಿಗೆ ಕೆಟ್ಟ ಅನುಭವವಾಗಿತ್ತಂತೆ. ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಒತ್ತಾಯಿಸಲಾಗಿತ್ತಂತೆ. ಇತ್ತೀಚೆಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅಂಖಿತಾ ಲೋಕಂಡೆ, ‘ನನಗಾಗ ಇನ್ನೂ 19 ವರ್ಷ ವಯಸ್ಸು. ಸಿನಿಮಾ ನಟಿಯಾಗುವ ಆಸೆ ಹೊಂದಿದ್ದೆ. ದಕ್ಷಿಣ ಭಾರತದ ಸಿನಿಮಾ ಒಂದರ ಆಡಿಷನ್ ಮುಂಬೈನಲ್ಲಿ ನಡೆದಿತ್ತು. ನಾನು ಅದರಲ್ಲಿ ಭಾಗವಹಿಸಿದ್ದೆ. ಕೆಲವೇ ದಿನಗಳಲ್ಲಿ ನನಗೆ ಕರೆ ಬಂತು. ನೀವು ಆಯ್ಕೆ ಆಗಿದ್ದೀರ ಎಂದರು. ಎಷ್ಟು ಸುಲಭವಾಗಿ ಆಗಿಬಿಟ್ಟಿತಲ್ಲ ಎಂದು ಖುಷಿ ಪಟ್ಟಿದ್ದೆ. ಆದರೆ ನನ್ನ ಅದೃಷ್ಟ ಅಷ್ಟು ಸುಲಭದ್ದಾಗಿರಲಿಲ್ಲ’ ಎಂದಿದ್ದಾರೆ ಅಂಖಿತಾ.

ಇದನ್ನೂ ಓದಿ:ಪಟಾಕಿ ಆಗುವ ಪ್ರಯತ್ನದಲ್ಲಿ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ

‘ನನ್ನನ್ನು ಮುಂಬೈನ ಜುಹುನಲ್ಲಿನ ಐಶಾರಾಮಿ ಹೋಟೆಲ್​ಗೆ ಬರಲು ಹೇಳಿದರು. ಅಲ್ಲಿ ಅಡ್ವಾನ್ಸ್ ಹಣ ನೀಡುವುದಾಗಿ ಹೇಳಿದ್ದರು. ನಾನು ಅಲ್ಲಿಗೆ ಹೋದಾಗ ಆಡಿಷನ್ ಪಡೆದ ವ್ಯಕ್ತಿ, ಈ ಪಾತ್ರ ನಿಮಗೆ ಸಿಗಬೇಕೆಂದರೆ ಕಾಂಪ್ರಮೈಸ್ ಮಾಡಿಕೊಳ್ಳಬೇಕು ಎಂದರು. ನನಗೆ ಆಗಲೇ ಅರ್ಥವಾಗಿತ್ತು, ಆದರೆ ಅದನ್ನು ಬಿಟ್ಟುಕೊಡದೆ, ಕಾಂಪ್ರಮೈಸ್ ಎಂದರೆ ಏನು, ನಿಮ್ಮ ಪ್ರೊಡ್ಯೂಸರ್ ಜೊತೆ ಪಾರ್ಟಿಗೆ ಹೋಗಬೇಕೆ? ಎಂದು ಕೇಳಿದೆ. ಅದಕ್ಕೆ ಅವರು ಅಲ್ಲ, ನಮ್ಮ ನಿರ್ಮಾಪಕರೊಟ್ಟಿಗೆ ಮಲಗಬೇಕು ಎಂದರು’ ಎಂದು ಕೆಟ್ಟ ಅನುಭವ ನೆನಪು ಮಾಡಿಕೊಂಡಿದ್ದಾರೆ.

‘ನೀವು ನಿರ್ಮಾಪಕರೊಟ್ಟಿಗೆ ಸಹಕಾರ ತೋರಿದರೆ ಈ ಸಿನಿಮಾಕ್ಕೆ ನಿಮ್ಮನ್ನು ಖಂಡಿತ ತೆಗೆದುಕೊಳ್ಳುತ್ತೇವೆ ಎಂದರು. ಕೂಡಲೇ ಅಲ್ಲಿಂದ ಎದ್ದ ನಾನು, ‘ನಿಮ್ಮ ನಿರ್ಮಾಪಕರಿಗೆ ಪ್ರತಿಭೆ ಬೇಕಿಲ್ಲ, ಅವರಿಗೆ ಬೇಕಾಗಿರುವುದು ಅವರೊಟ್ಟಿಗೆ ಮಲಗಲು ಒಬ್ಬ ಯುವತಿ ಅಷ್ಟೆ, ಆದರೆ ಅಂಥಹಾ ಯುವತಿ ನಾನಲ್ಲ’ ಎಂದು ಹೇಳಿ ಅಲ್ಲಿಂದ ಹೊರಟು ಬಿಟ್ಟೆ’ ಎಂದಿದ್ದಾರೆ ಅಂಖಿತಾ ಲೋಕಂಡೆ.

‘ಅಂದು ನನಗೆ ಚಿತ್ರರಂಗದ ಕೊಳಕುತನದ ಬಗ್ಗೆ ಅರಿವಾಯ್ತು. ಅಂದು ನನ್ನ ಬಗ್ಗೆ ನನಗೆ ಬೇಸವರಾಯ್ತು. ಎಂಥಹಾ ಜಾಗಕ್ಕೆ ನಾನು ಬಂದು ಬಿಟ್ಟೆ ಎನಿಸಿತು. ನಾನು ಯಾರೊಂದಿಗೆ ಮಲಗಬೇಕು ಎಂಬುದು ನನ್ನ ಹಕ್ಕು ಅದನ್ನು ಬೇರೊಬ್ಬರು ನಿರ್ಧಾರಿಸಲು ಬಿಡುವುದಿಲ್ಲ ಎಂದು ನಿರ್ಧರಿಸಿದೆ. ಅಲ್ಲದೆ ಅದೇ ದಿನ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲವೆಂದು ಸಹ ನಿರ್ಧಾರ ಮಾಡಿದೆ. ಟಿವಿ ಕಡೆಗೆ ಗಮನ ಹರಿಸಿದೆ’ ಎಂದಿದ್ದಾರೆ.

ಅಂಖಿತಾ ಲೋಕಂಡೆ ಹಾಗೂ ಸುಶಾಂತ್ ಸಿಂಗ್ ಒಟ್ಟಿಗೆ ಒಂದೇ ಧಾರಾವಾಹಿಯಲ್ಲಿ ಹಲವು ಕಾಲ ನಟಿಸಿದರು. ಇಬ್ಬರೂ ಸಹ ಪ್ರೀತಿಯಲ್ಲಿದ್ದು, ಇಬ್ಬರೂ ವಿವಾಹವಾಗುತ್ತಾರೆ ಎನ್ನಲಾಗಿತ್ತು, ಆದರೆ ಅಷ್ಟರಲ್ಲಿ ಇಬ್ಬರೂ ಬ್ರೇಕ್​ಅಪ್ ಮಾಡಿಕೊಂಡರು. ಬಳಿಕ ಸುಶಾಂತ್, ಚಿತ್ರರಂಗದಲ್ಲಿ ಸ್ಟಾರ್ ಆದರು. ಬೇರೆ ನಟಿಯರೊಡನೆ ಪ್ರೀತಿಗೆ ಬಿದ್ದರು, ಬಳಿಕ ನಿಧನರಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು