‘ಬಸ್ತರ್​’ ಸಿನಿಮಾ ಮೂಲಕ ವಿವಾದ ಮಾಡಿಕೊಂಡ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ

ನಟಿ ಅದಾ ಶರ್ಮಾ ಅವರು ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ನಕ್ಸಲ್​ ಹಿಂಸಾಚಾರದ ಕುರಿತು ಸಿದ್ಧವಾಗಿರುವ ಈ ಸಿನಿಮಾದ ಕೆಲವು ದೃಶ್ಯಗಳಿಗೆ ಆಕ್ಷೇಪ ಎದುರಾಗಿದೆ. ‘ದಿ ಕೇರಳ ಸ್ಟೋರಿ’ ಚಿತ್ರದ ರೀತಿಯಲ್ಲಿ ಅದಾ ಶರ್ಮಾ ಅವರು ಮತ್ತೆ ವಿವಾದ ಎದುರಿಸುವಂತಾಗಿದೆ. ಈ ಚಿತ್ರಕ್ಕೆ ಸುದಿಪ್ತೋ ಸೇನ್​ ನಿರ್ದೇಶನ ಮಾಡಿದ್ದಾರೆ.

‘ಬಸ್ತರ್​’ ಸಿನಿಮಾ ಮೂಲಕ ವಿವಾದ ಮಾಡಿಕೊಂಡ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ
ಅದಾ ಶರ್ಮಾ
Follow us
ಮದನ್​ ಕುಮಾರ್​
|

Updated on: Mar 15, 2024 | 10:45 PM

2023ರಲ್ಲಿ ಬಿಡುಗಡೆ ಆಗಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾ ಮೂಲಕ ನಟಿ ಅದಾ ಶರ್ಮಾ (Adah Sharma) ಅವರಿಗೆ ದೊಡ್ಡ ಜನಪ್ರಿಯತೆ ಸಿಕ್ಕಿತು. ಅನೇಕ ಕಾರಣಗಳಿಂದ ಆ ಸಿನಿಮಾ ವಿವಾದ ಸೃಷ್ಟಿ ಮಾಡಿತ್ತು. ಈಗ ಅದೇ ತಂಡದ ಜೊತೆ ಸೇರಿ ಅದಾ ಶರ್ಮಾ ಅವರು ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ (Bastar The Naxal Story) ಸಿನಿಮಾ ಮಾಡಿದ್ದಾರೆ. ಮಾರ್ಚ್​ 15ರಂದು ಬಿಡುಗಡೆ ಆಗಿರುವ ಈ ಸಿನಿಮಾ ಕೂಡ ವಿವಾದ (Bastar Controversy) ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿನ ಕೆಲವು ದೃಶ್ಯಗಳಿಗೆ ತಕರಾರು ತೆಗೆಯಲಾಗಿದೆ. ಅದರ ಪರಿಣಾಮವಾಗಿ ಕೆಲವು ಕಡೆಗಳಲ್ಲಿ ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಸಿನಿಮಾದ ಶೋ ರದ್ದು ಮಾಡಲಾಗಿದೆ ಎಂದು ವರದಿ ಆಗಿದೆ.

ಭಾರತೀಯ ಸೈನಿಕರನ್ನು ನಕ್ಸಲರು ಹತ್ಯೆ ಮಾಡಿದ ಘಟನೆಗಳನ್ನು ಇಟ್ಟುಕೊಂಡು ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಸಿನಿಮಾ ಮೂಡಿಬಂದಿದೆ. ‘ದಿ ಕೇರಳ ಸ್ಟೋರಿ’ ಚಿತ್ರದ ನಿರ್ದೇಶಕ ಸುದಿಪ್ತೋ ಸೇನ್​ ಅವರು ‘ಬಸ್ತರ್’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ​‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ನಟಿಸಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಅದಾ ಶರ್ಮಾ ಅವರು ಸೇನಾಧಿಕಾರಿಯ ಪಾತ್ರದಲ್ಲಿ ಮಿಂಚು ಹರಿಸಿದ್ದಾರೆ.

ಛತ್ತಿಸ್​ಗಡದಲ್ಲಿ ನಡೆದ ನಕ್ಸಲ್​ ಹೋರಾಟದ ಕಥೆಯನ್ನು ‘ಬಸ್ತರ್’ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾದ ಒಂದಷ್ಟು ದೃಶ್ಯಗಳಿಗೆ ಆಕ್ಷೇಪ ಎದುರಾಗಿದೆ. ಕೆಲವು ಸಂಭಾಷಣೆಗಳನ್ನು ಕೂಡ ಖಂಡಿಸಲಾಗುತ್ತಿದೆ. ಆದರೆ ನಿರ್ದಿಷ್ಟವಾಗಿ ಯಾವ ವಿಚಾರಕ್ಕೆ ತಕರಾರು ತೆಗೆಯಲಾಗಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ವರದಿಗಳ ಪ್ರಕಾರ, ಅದಾ ಶರ್ಮಾ ಅವರ ಮೇಲೆ ದೂರು ದಾಖಲಾಗುವ ಸಾಧ್ಯತೆ ಇದ್ದು, ವಿಚಾರಣೆಗಾಗಿ ಅವರಿಗೆ ಸಮನ್ಸ್​ ನೀಡುವ ಸೂಚನೆ ಇದೆ. ಸಿನಿಮಾವನ್ನು ಬ್ಯಾನ್​ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಮನೆ ಖರೀದಿ ವಿಚಾರ: ‘ಅಂದುಕೊಂಡಂತೆ ಆದ್ರೆ ಮೊದಲು ನಿಮಗೆ ಸಿಹಿ ಹಂಚ್ತೀನಿ’ ಎಂದ ಅದಾ ಶರ್ಮಾ

‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಸಿನಿಮಾದಲ್ಲಿ ಕ್ರೌರ್ಯ ಅತಿಯಾಗಿದೆ. ಹಾಗಾಗಿ ಸೆನ್ಸಾರ್​ ಮಂಡಳಿಯಿಂದ ಈ ಸಿನಿಮಾಗೆ ‘ಎ’ ಪ್ರಮಾಣಪತ್ರ ನೀಡಲಾಗಿದೆ. ಈ ಸಿನಿಮಾದ ಅವಧಿ 2 ಗಂಟೆ 4 ನಿಮಿಷ ಇದೆ. ಮೊದಲ ದಿನ (ಮಾರ್ಚ್​ 15​) ಬುಕ್​ ಮೈ ಶೋನಲ್ಲಿ ಈ ಸಿನಿಮಾ 10ಕ್ಕೆ 8.2 ರೇಟಿಂಗ್​ ಪಡೆದುಕೊಂಡಿದೆ. ‘ದಿ ಕೇರಳ ಸ್ಟೋರಿ’ ಚಿತ್ರವನ್ನು ನಿರ್ಮಿಸಿದ್ದ ವಿಪುಲ್​ ಅಮೃತ್​ಲಾಲ್​ ಶಾ ಅವರೇ ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅದಾ ಶರ್ಮಾ ಜೊತೆ ಇಂದಿರಾ ತಿವಾರಿ, ವಿಜಯ್​ ಕೃಷ್ಣ, ಯಶ್​ಪಾಲ್ ಶರ್ಮಾ, ರೈಮಾ ಸೇನಾ, ಶಿಲ್ಪಾ ಶುಕ್ಲಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವೀಕೆಂಡ್​ನಲ್ಲಿ ಈ ಚಿತ್ರದ ಕಲೆಕ್ಷನ್​ ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.