AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಾಶಾದಾಯಕ ಓಪನಿಂಗ್ ಕಂಡ ‘ಯೋಧ’; ಮೊದಲ ದಿನ ಗಳಿಸಿದ್ದು ಕೇವಲ 4 ಕೋಟಿ ರೂಪಾಯಿ

ಸಿದ್ದಾರ್ಥ್ ಮಲ್ಹೋತ್ರಾ ಸಿನಿಮಾ ಎಂದರೆ ದೊಡ್ಡ ಮಟ್ಟದ ನಿರೀಕ್ಷೆ ಇರುತ್ತದೆ. ‘ಯೋಧ’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು ಈ ಚಿತ್ರ ದೊಡ್ಡ ಓಪನಿಂಗ್ ಪಡೆಯಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ.

ನಿರಾಶಾದಾಯಕ ಓಪನಿಂಗ್ ಕಂಡ ‘ಯೋಧ’; ಮೊದಲ ದಿನ ಗಳಿಸಿದ್ದು ಕೇವಲ 4 ಕೋಟಿ ರೂಪಾಯಿ
ಸಿದ್ದಾರ್ಥ್
ರಾಜೇಶ್ ದುಗ್ಗುಮನೆ
|

Updated on: Mar 16, 2024 | 8:38 AM

Share

ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ನಟನೆಯ ‘ಯೋಧ’ ಚಿತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಸಿದ್ದಾರ್ಥ್ ಮಲ್ಹೋತ್ರ, ದಿಶಾ ಪಟಾಣಿ, ರಾಶಿ ಖನ್ನಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಅಂದುಕೊಂಡಿದ್ದಕ್ಕಿಂತಲೂ ಕಡಿಮೆ ಗಳಿಕೆ ಮಾಡಿದೆ. ಇದು ಕಳೆದ ವಾರ ರಿಲೀಸ್ ಆದ ‘ಶೈತಾನ್’ ಚಿತ್ರಕ್ಕೆ ವರದಾನ ಆಗುವ ಸಾಧ್ಯತೆ ಇದೆ. ‘ಯೋಧ’ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 4.25 ಕೋಟಿ ರೂಪಾಯಿ ಮಾತ್ರ.

ಸಿದ್ದಾರ್ಥ್ ಮಲ್ಹೋತ್ರಾ ಸಿನಿಮಾ ಎಂದರೆ ದೊಡ್ಡ ಮಟ್ಟದ ನಿರೀಕ್ಷೆ ಇರುತ್ತದೆ. ‘ಯೋಧ’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು ಈ ಚಿತ್ರ ದೊಡ್ಡ ಓಪನಿಂಗ್ ಪಡೆಯಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ. ಈ ಸಿನಿಮಾಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ವಾರ ರಿಲೀಸ್ ಆದ ಅಜಯ್ ದೇವಗನ್, ಮಾಧವನ್ ಹಾಗೂ ಜ್ಯೋತಿಕಾ ನಟನೆಯ ‘ಶೈತಾನ್’ ಮೊದಲ ದಿನ 14 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಚಿತ್ರಕ್ಕಿಂತ 10 ಕೋಟಿ ರೂಪಾಯಿ ಕಡಿಮೆ ಗಳಿಕೆಯನ್ನು ಈ ಸಿನಿಮಾ ಮಾಡಿದೆ.

ಇದನ್ನೂ ಓದಿ: ‘ಒಂದೊಳ್ಳೆಯ ಹೈಜಾಕ್ ಸಿನಿಮಾ’; ‘ಯೋಧ’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

‘ಯೋಧ’ ಸಿನಿಮಾದಲ್ಲಿ ಹೈಜಾಕ್ ಕಥೆ ಇದೆ. ಈ ಮೊದಲು ಈ ರೀತಿಯ ಅನೇಕ ಕಥೆಗಳು ಬಂದು ಹೋಗಿವೆ. ಈ ಕಾರಣಕ್ಕೆ ಜನರು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ. ಇನ್ನೂ ಕೆಲವರು ‘ಸಿನಿಮಾದ ಕಥೆ ಇನ್ನಷ್ಟು ಉತ್ತಮಗೊಳಿಸಬಹುದಿತ್ತು’ ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ. ಇದು ಕೂಡ ಚಿತ್ರಕ್ಕೆ ಹಿನ್ನಡೆ ಉಂಟು ಮಾಡಿದೆ. ಇಂದು (ಮಾರ್ಚ್​ 16) ಹಾಗೂ ನಾಳೆ (ಮಾರ್ಚ್ 17) ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಎನ್ನುವ ಕುತೂಹಲ ಮೂಡಿದೆ. ಪುಷ್ಕರ್ ಓಜಾ ಹಾಗೂ ಸಾಗರ್ ಅಂಬ್ರೆ ಸಿನಿಮಾನ ಒಟ್ಟಾಗಿ ನಿರ್ದೇಶನ ಮಾಡಿದ್ದಾರೆ.  ಚಿತ್ರವನ್ನು ಕರಣ್ ಜೋಹರ್, ಹೀರೂ ಯಶ್ ಜೋಹರ್, ಅಪೂರ್ವ ಮೆಹ್ತಾ, ಶಶಾಂಕ್ ಖೈತಾನ್ ನಿರ್ಮಾಣ ಮಾಡಿದ್ದಾರೆ. ಚಿತ್ರದ ಗಳಿಕೆ ನೋಡಿದರೆ ಸಿನಿಮಾ ಮುಗ್ಗರಿಸುವ ಸೂಚನೆ ಸಿಕ್ಕಿದೆ .

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್