‘ಒಂದೊಳ್ಳೆಯ ಹೈಜಾಕ್ ಸಿನಿಮಾ’; ‘ಯೋಧ’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಯೋಧ’ ಸಿನಿಮಾ ಎಲ್ಲಕ್ಕಿಂತ ಭಿನ್ನ ಹಾಗೂ ಹೆಚ್ಚು ಥ್ರಿಲ್ಲಿಂಗ್ ಆಗಿರೋ ಸಿನಿಮಾ ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. ‘ಒಂದು ಒಳ್ಳೆಯ ಸಿನಿಮಾ. ನಟನೆ, ಚಿತ್ರದಲ್ಲಿ ನೀಡಲಾದ ವಿವರಣೆ, ಛಾಯಾಗ್ರಹಣ, ಮ್ಯೂಸಿಕ್ ಎಲ್ಲವೂ ಒಳ್ಳೆಯ ರೀತಿಯಲ್ಲಿ ಇದೆ. ಸಿದ್ದಾರ್ಥ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾ ನೀಡಿದ್ದಾರೆ’ ಎಂದು ಬರೆಯಲಾಗಿದೆ.

‘ಒಂದೊಳ್ಳೆಯ ಹೈಜಾಕ್ ಸಿನಿಮಾ’; ‘ಯೋಧ’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು
ಸಿದ್ದಾರ್ಥ್
Follow us
ರಾಜೇಶ್ ದುಗ್ಗುಮನೆ
|

Updated on: Mar 15, 2024 | 2:23 PM

ಸಿದ್ದಾರ್ಥ್ ಮಲ್ಹೋತ್ರ (Sidharth Malhotra), ರಾಶಿ ಖನ್ನಾ ಹಾಗೂ ದಿಶಾ ಪಟಾಣಿ ನಟನೆಯ ‘ಯೋಧ’ ಸಿನಿಮಾದ ಟ್ರೇಲರ್ ರಿಲೀಸ್ ಆದಾಗಲೇ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದ್ದವು. ಇಂದು (ಮಾರ್ಚ್ 15) ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ.. ಸಿದ್ದಾರ್ಥ್ ಮಲ್ಹೋತ್ರ ನಟನೆಯನ್ನು ಪ್ರೇಕ್ಷಕರು ಕೊಂಡಾಡಿದ್ದಾರೆ. ಈ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು ಕೋಟಿ ಆಗಲಿದೆ ಎನ್ನುವ ಕುತೂಹಲ ಮೂಡಿದೆ.

ಹೈಜಾಕ್ ಕಥೆ ಆಧರಿಸಿ ಹಲವು ಸಿನಿಮಾಗಳು ಮೂಡಿ ಬಂದಿವೆ. ಆದರೆ, ‘ಯೋಧ’ ಸಿನಿಮಾ ಎಲ್ಲಕ್ಕಿಂತ ಭಿನ್ನ ಹಾಗೂ ಹೆಚ್ಚು ಥ್ರಿಲ್ಲಿಂಗ್ ಆಗಿರೋ ಸಿನಿಮಾ ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. ‘ಒಂದು ಒಳ್ಳೆಯ ಸಿನಿಮಾ. ನಟನೆ, ಚಿತ್ರದಲ್ಲಿ ನೀಡಲಾದ ವಿವರಣೆ, ಛಾಯಾಗ್ರಹಣ, ಮ್ಯೂಸಿಕ್ ಎಲ್ಲವೂ ಒಳ್ಳೆಯ ರೀತಿಯಲ್ಲಿ ಇದೆ. ಸಿದ್ದಾರ್ಥ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾ ನೀಡಿದ್ದಾರೆ’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಸೆಟ್​ನಲ್ಲಿ ರಶ್ಮಿಕಾ ಮಂದಣ್ಣ ವರ್ತನೆ ಕಂಡು ಅಚ್ಚರಿಗೊಂಡಿದ್ದ ಸಿದ್ದಾರ್ಥ್​ ಮಲ್ಹೋತ್ರ

ಸಿದ್ದಾರ್ಥ್ ಮಲ್ಹೋತ್ರ ಅವರು ‘ಶೇರ್ಷಾ’ ಸಿನಿಮಾದಲ್ಲಿ ಯೋಧನ ಪಾತ್ರ ಮಾಡಿದ್ದರು. ಆ ಬಳಿಕ ಈ ರೀತಿಯ ಪಾತ್ರಗಳು ಅವರನ್ನು ಹೆಚ್ಚು ಅರಸಿ ಬರುತ್ತಿವೆ. ಈಗ ಅವರು ‘ಯೋಧ’ ಚಿತ್ರದಲ್ಲೂ ಸೈನಿಕನ ಪಾತ್ರ ಮಾಡಿದ್ದಾರೆ. ಕಾರಣಾಂತರಗಳಿಂದ ಕಥಾ ನಾಯಕ ಸೈನ್ಯ ಬಿಡಬೇಕಾಗುತ್ತದೆ. ಆತ ಪ್ರಯಾಣಿಸುತ್ತಿರುವ ವಿಮಾನ ಹೈಜಾಕ್ ಆಗುತ್ತದೆ. ಈ ರೀತಿಯ ಕಥೆಯನ್ನು ‘ಯೋಧ’ ಹೊಂದಿದೆ.

‘ಯೋಧ’ ಸಿನಿಮಾ ವಿಮರ್ಶೆ

‘ಯೋಧ’ ಚಿತ್ರಕ್ಕೆ ಸಾಗರ್ ಅಂಬ್ರೆ ಹಾಗೂ ಪುಷ್ಕರ್ ಓಜಾ ಒಟ್ಟಾಗಿ ನಿರ್ದೇಶನ ಮಾಡಿದ್ದಾರೆ. ಕರಣ್ ಜೋಹರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ