Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಟ್​ನಲ್ಲಿ ರಶ್ಮಿಕಾ ಮಂದಣ್ಣ ವರ್ತನೆ ಕಂಡು ಅಚ್ಚರಿಗೊಂಡಿದ್ದ ಸಿದ್ದಾರ್ಥ್​ ಮಲ್ಹೋತ್ರ

ರಶ್ಮಿಕಾ ಮಂದಣ್ಣ ಅವರು ಸಂದರ್ಶನ ನೀಡುವಾಗ, ಪಾಪರಾಜಿಗಳು ಎದುರಾದಾಗ ಕೈ ಸನ್ನೆ ಮೂಲಕ ತಮ್ಮ ಭಾವನೆ ಹೊರಹಾಕುತ್ತಾರೆ. ಹಾರ್ಟ್ ಮಾರ್ಕ್​ ಮತ್ತಿತ್ಯಾದಿ ಸನ್ನೆಗಳನ್ನು ತೋರಿಸುತ್ತಾರೆ.

ಸೆಟ್​ನಲ್ಲಿ ರಶ್ಮಿಕಾ ಮಂದಣ್ಣ ವರ್ತನೆ ಕಂಡು ಅಚ್ಚರಿಗೊಂಡಿದ್ದ ಸಿದ್ದಾರ್ಥ್​ ಮಲ್ಹೋತ್ರ
ರಶ್ಮಿಕಾ-ಸಿದ್ದಾರ್ಥ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 08, 2023 | 1:08 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬೇಡಿಕೆಯ ನಟಿ. ಅವರು ಹಲವು ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಕಳೆದ ತಿಂಗಳು ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದಾರೆ. ಅವರ ನಟನೆಯ ‘ಅನಿಮಲ್​’ ಹಾಗೂ ‘ಪುಷ್ಪ 2’ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ‘ಮಿಷನ್​ ಮಜ್ನು’ (Mission Majnu Movie) ಸಿನಿಮಾದ ಸೆಟ್​​ನಲ್ಲಿ ರಶ್ಮಿಕಾ ಮಂದಣ್ಣ ಅವರು ಯಾವ ರೀತಿ ಇರುತ್ತಿದ್ದರು ಎನ್ನುವ ಬಗ್ಗೆ ಸಿದ್ದಾರ್ಥ್​ ಮಲ್ಹೋತ್ರ ಮಾಹಿತಿ ನೀಡಿದ್ದಾರೆ. ಅವರ ವರ್ತನೆ ಕಂಡು ಆರಂಭದಲ್ಲಿ ಸಿದ್ದಾರ್ಥ್ ಅಚ್ಚರಿಗೊಂಡಿದ್ದರಂತೆ.

ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಅವರು ಯಶಸ್ಸಿನ ಉತ್ತುಂಗಕ್ಕೆ ಹೋದರು. ತೆಲುಗು, ಬಾಲಿವುಡ್ ಹಾಗೂ ಕಾಲಿವುಡ್​ನಲ್ಲಿ ನೆಲೆ ಕಂಡುಕೊಂಡರು. ಜನವರಿ ತಿಂಗಳಲ್ಲಿ ಅವರ ನಟನೆಯ ‘ವಾರಿಸು’ ಹಾಗೂ ‘ಮಿಷನ್ ಮಜ್ನು’ ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಂಡಿವೆ. ‘ವಾರಿಸು’ ಬಾಕ್ಸ್ ಆಫೀಸ್​ನಲ್ಲಿ 300 ಕೋಟಿ ಬಾಚಿಕೊಂಡರೆ, ‘ಮಿಷನ್​ ಮಜ್ನು’ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ರಶ್ಮಿಕಾ ‘ಮಿಷನ್ ಮಜ್ನು’ ಸೆಟ್​ನಲ್ಲಿ ಹೇಗಿರುತ್ತಿದ್ದರು ಎಂಬುದನ್ನು ಸಿದ್ದಾರ್ಥ್ ವಿವರಿಸಿದ್ದಾರೆ.

ಇದನ್ನೂ ಓದಿ
Image
Mili Twitter Review: ಜಾನ್ವಿ ಕಪೂರ್​ ಅಭಿನಯಕ್ಕೆ ಕೇಳಿಬರ್ತಿದೆ ಮೆಚ್ಚುಗೆ; ‘ಮಿಲಿ’ ನೋಡಿ ವಿಮರ್ಶೆ ತಿಳಿಸಿದ ಸಿನಿಪ್ರಿಯರು
Image
Gandhada Gudi Twitter Review: ಹೇಗಿದೆ ‘ಗಂಧದ ಗುಡಿ’?; ಪ್ರೀಮಿಯರ್​ ಶೋ ಬಳಿಕ ಟ್ವಿಟರ್​ ಮೂಲಕ ವಿಮರ್ಶೆ ತಿಳಿಸಿದ ಫ್ಯಾನ್ಸ್​
Image
Ram Setu Twitter Review: ‘ರಾಮ್​ ಸೇತು’ ಟ್ವಿಟರ್​ ವಿಮರ್ಶೆ: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಜನರಿಂದ ಸಿಕ್ತಾ ಪ್ರಶಂಸೆ?
Image
Goodbye Twitter Review: ರಶ್ಮಿಕಾ ಮೊದಲ ಹಿಂದಿ ಚಿತ್ರ ‘ಗುಡ್​ಬೈ’ ಹೇಗಿದೆ? ಜನರು ತಿಳಿಸಿದ ಟ್ವಿಟರ್ ವಿಮರ್ಶೆ ಇಲ್ಲಿದೆ ಓದಿ..

ರಶ್ಮಿಕಾ ಮಂದಣ್ಣ ಅವರು ಸಂದರ್ಶನ ನೀಡುವಾಗ, ಪಾಪರಾಜಿಗಳು ಎದುರಾದಾಗ ಕೈ ಸನ್ನೆ ಮೂಲಕ ತಮ್ಮ ಭಾವನೆ ಹೊರಹಾಕುತ್ತಾರೆ. ಹಾರ್ಟ್ ಮಾರ್ಕ್​ ಮತ್ತಿತ್ಯಾದಿ ಸನ್ನೆಗಳನ್ನು ತೋರಿಸುತ್ತಾರೆ. ಕೆಲವರಿಗೆ ಇದು ಓವರ್​ಆ್ಯಕ್ಟಿಂಗ್ ಎಂದನಿಸಿದ್ದಿದೆ. ರಶ್ಮಿಕಾ ಅವರು ಸೆಟ್​​ನಲ್ಲಿ ಬಂದಾಗ ಇದೇ ರೀತಿ ಮಾಡಿದ್ದರಂತೆ. ಈ ಬಗ್ಗೆ ಸಿದ್ದಾರ್ಥ್ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಕೆಲವರು ಈ ಹೇಳಿಕೆಯನ್ನು ಟ್ರೋಲ್ ಮಾಡಿದ್ದಾರೆ.

‘ರಶ್ಮಿಕಾ ಅವರು ಒಪ್ಪಿಕೊಂಡ ಮೊದಲು ಹಿಂದಿ ಸಿನಿಮಾ (ಮಿಷನ್ ಮಜ್ನು) ಇದು. ಅವರಿಂದ ಸಾಕಷ್ಟು ವಿಚಾರ ಕಲಿತೆ’ ಎಂದಿದ್ದಾರೆ ಸಿದ್ದಾರ್ಥ್ ಮಲ್ಹೋತ್ರ. ಈ ವೇಳೆ ರಶ್ಮಿಕಾ ಯಾವ ರೀತಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಹೇಳಿದ್ದಾರೆ. ಅವರ ಕೈ ಸನ್ನೆಗಳು ಸಿದ್ದಾರ್ಥ್​ಗೆ ತುಂಬಾನೇ ವಿಚಿತ್ರ ಎನಿಸಿದ್ದವು.

View this post on Instagram

A post shared by Masoom Edits (@masoom.edits)

ಇದನ್ನೂ ಓದಿ: ಅಭಿಮಾನಿಗೆ ಪ್ರಪೋಸ್ ಮಾಡೋದು ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ; ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಹಾಗೂ ‘ಅನಿಮಲ್​’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇನ್ನೂ ಅನೇಕ ಚಿತ್ರಗಳ ಕಥೆಯನ್ನು ಅವರು ಕೇಳುತ್ತಿದ್ದಾರೆ. ‘ವಾರಿಸು’ ಸಿನಿಮಾ ಹಿಟ್ ಆದ ಕಾರಣ ಅವರಿಗೆ ತಮಿಳಿನಲ್ಲಿ ಹಲವು ಆಫರ್​ಗಳು ಬರುತ್ತಿವೆ. ಎಲ್ಲವನ್ನೂ ಒಪ್ಪಿಕೊಂಡು ಅವರು ನಟಿಸುತ್ತಿಲ್ಲ. ಇನ್ನು ಸಿದ್ದಾರ್ಥ್ ಮಲ್ಹೋತ್ರ ಅವರು ಕಿಯಾರಾ ಜತೆ ಇತ್ತೀಚೆಗಷ್ಟೇ ಮದುವೆ ಆಗಿದ್ದಾರೆ. ಪತ್ನಿ ಜತೆ ಅವರು ಹನಿಮೂನ್​ಗೆ ತೆರಳಲಿದ್ದಾರೆ ಎನ್ನಲಾಗಿದೆ.

ಶ್ರೀಲಕ್ಷ್ಮಿ ಎಚ್​.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ