- Kannada News Photo gallery Actress Samantha Ruth Prabhu Starrer Shaakuntalam Movie release date postponed
ಎರಡನೇ ಬಾರಿ ಮುಂದಕ್ಕೆ ಹೋಯ್ತು ‘ಶಾಕುಂತಲಂ’ ಸಿನಿಮಾ ರಿಲೀಸ್ ದಿನಾಂಕ; ಸಮಂತಾ ಫ್ಯಾನ್ಸ್ ಆಕ್ರೋಶ
ಫೆ.17ಕ್ಕೆ ‘ಶಾಕುಂತಲಂ’ ರಿಲೀಸ್ ಆಗಲಿದೆ ಎಂದು ಚಿತ್ರತಂಡದವರು ಘೋಷಣೆ ಮಾಡಿದ್ದರು. ಚಿತ್ರದ ಟ್ರೇಲರ್ ಕೂಡ ರಿಲೀಸ್ ಮಾಡಲಾಯಿತು. ಸಿನಿಮಾ ರಿಲೀಸ್ಗೆ 10 ದಿನ ಇರುವಾಗ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ.
Updated on: Feb 08, 2023 | 12:01 PM

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ಕಳೆದ ವರ್ಷ ನವೆಂಬರ್ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈಗ ಈ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.

ಫೆ.17ಕ್ಕೆ ‘ಶಾಕುಂತಲಂ’ ರಿಲೀಸ್ ಆಗಲಿದೆ ಎಂದು ಚಿತ್ರತಂಡದವರು ಘೋಷಣೆ ಮಾಡಿದ್ದರು. ಚಿತ್ರದ ಟ್ರೇಲರ್ ಕೂಡ ರಿಲೀಸ್ ಮಾಡಲಾಯಿತು. ಸಿನಿಮಾ ರಿಲೀಸ್ಗೆ 10 ದಿನ ಇರುವಾಗ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ.

ಹೌದು, ‘ಶಾಕುಂತಲಂ’ ಸಿನಿಮಾ ಫೆ.17ಕ್ಕೆ ಬಿಡುಗಡೆ ಆಗುತ್ತಿಲ್ಲ. ಹಾಗಂತ ಇದು ಗಾಸಿಪ್ ಅಲ್ಲ. ಚಿತ್ರತಂಡದವರೇ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಬಿಡುಗಡೆ ಪದೇಪದೇ ಮುಂದೂಡಲ್ಪಡುತ್ತಿರುವುದಕ್ಕೆ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಹೊಸ ದಿನಾಂಕ ಮುಂದಿನ ದಿನಗಳಲ್ಲಿ ಘೋಷಣೆ ಆಗಲಿದೆ.

‘ಶಾಕುಂತಲಂ’ ಸಿನಿಮಾ ಅದ್ದೂರಿ ಬಜೆಟ್ನಲ್ಲಿ ಮೂಡಿಬಂದಿದೆ. ಬೃಹತ್ ಸೆಟ್ಗಳು ಟ್ರೇಲರ್ನಲ್ಲಿ ಗಮನ ಸೆಳೆದಿದ್ದವು. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಸಿನಿಮಾ ಮೂಡಿಬಂದಿದೆ.

ಅಂದಹಾಗೆ, ‘ಶಾಕುಂತಲಂ’ ಸಿನಿಮಾ ರಿಲೀಸ್ ಮುಂದಕ್ಕೆ ಹೋಗೋಕೆ ಕಾರಣ ಏನು ಎಂಬುದು ರಿವೀಲ್ ಆಗಿಲ್ಲ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರುವ ಕಾರಣ ಚಿತ್ರದ ಬಿಡುಗಡೆ ವಿಳಂಬ ಆಗಿದೆ ಎನ್ನಲಾಗುತ್ತಿದೆ.




