AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೀತಿ ಮೇಲೆ ಏಕೆ ಕೈ ಇಟ್ಟೆ?’; ಕಿಯಾರಾ ಅಡ್ವಾಣಿ ಮದುವೆ ಆದ ಸಿದ್ದಾರ್ಥ್​​ಗೆ ಶಾಹಿದ್ ಪ್ರಶ್ನೆ

ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಫೆಬ್ರವರಿ 7ರಂದು ಮದುವೆ ಆದರು. ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಈ ವಿವಾಹ ನಡೆದಿದೆ. ಕಿಯಾರಾ ಹಾಗೂ ಸಿದ್ದಾರ್ಥ್ ಫೆ.7ರ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

‘ಪ್ರೀತಿ ಮೇಲೆ ಏಕೆ ಕೈ ಇಟ್ಟೆ?’; ಕಿಯಾರಾ ಅಡ್ವಾಣಿ ಮದುವೆ ಆದ ಸಿದ್ದಾರ್ಥ್​​ಗೆ ಶಾಹಿದ್ ಪ್ರಶ್ನೆ
ಸಿದ್ದಾರ್ಥ್​-ಕಿಯಾರಾ
ರಾಜೇಶ್ ದುಗ್ಗುಮನೆ
|

Updated on: Feb 08, 2023 | 2:41 PM

Share

ಶಾಹಿದ್ ಕಪೂರ್ (Shahid Kapoor) ಹಾಗೂ ಕಿಯಾರಾ ಅಡ್ವಾಣಿ ನಟನೆಯ ‘ಕಬೀರ್ ಸಿಂಗ್​’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಿಂದ ಶಾಹಿದ್ ಹಾಗೂ ಕಿಯಾರಾ ದೊಡ್ಡ ಗೆಲುವು ಕಂಡರು. ಈ ಚಿತ್ರದಲ್ಲಿ ಪ್ರೀತಿ ಪಾತ್ರ ಮಾಡಿದ್ದರು ಕಿಯಾರಾ. ಪ್ರೀತಿ ಬಿಟ್ಟು ಹೋದಾಗ ಕಬೀರ್ (ಶಾಹಿದ್​) ರಸ್ತೆ ಮೇಲೆ ಓಡುತ್ತಾನೆ. ಆಕೆಯನ್ನು ಬೇರೆಯವರು ಮುಟ್ಟಿದಾಗ ಅವರಿಗೆ ಹೊಡೆಯುತ್ತಾನೆ. ಈಗ ಕಿಯಾರಾ (Kiara Advani) ಹಾಗೂ ಸಿದ್ದಾರ್ಥ್​​ಗೆ ಮದುವೆ ಆದ ಬೆನ್ನಲ್ಲೇ ‘ಕಬೀರ್​ ಸಿಂಗ್’ ಚಿತ್ರದ ಪೋಸ್ಟರ್​ಗಳನ್ನು ಮೀಮ್​ಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಫೆಬ್ರವರಿ 7ರಂದು ಮದುವೆ ಆದರು. ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಈ ವಿವಾಹ ನಡೆದಿದೆ. ಕಿಯಾರಾ ಹಾಗೂ ಸಿದ್ದಾರ್ಥ್ ಫೆ.7ರ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಈ ದಂಪತಿಗೆ ಶುಭಾಶಯ ಕೋರಿದರೆ ಇನ್ನೂ ಕೆಲವರು ಮೀಮ್​ಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
ಸಿದ್ದಾರ್ಥ್​ ಮಲ್ಹೋತ್ರ-ಕಿಯಾರಾ ಅಡ್ವಾಣಿ ಮಧ್ಯೆ ಇರೋ ವಯಸ್ಸಿನ ಅಂತರ ಇಷ್ಟೊಂದಾ?
Image
ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರ ವಿವಾಹದ ಕ್ಷಣದ ಫೋಟೋ ವೈರಲ್
Image
ಕಿಯಾರಾ-ಸಿದ್ದಾರ್ಥ್​ ಮದುವೆಯಲ್ಲಿ ಮೊಬೈಲ್ ಬಳಸೋ ಹಾಗಿಲ್ಲ; ಅತಿಥಿಗಳಿಗೆ ಸೂಚನೆ
Image
ಮದುವೆ ನಡೆಯೋ ಸ್ಥಳಕ್ಕೆ ಆಗಮಿಸಿದ ನಟಿ ಕಿಯಾರಾ ಅಡ್ವಾಣಿ; ಖಚಿತವಾಯ್ತು ಸುದ್ದಿ

‘ಕಬೀರ್ ಸಿಂಗ್​’ ಸಿನಿಮಾದಲ್ಲಿ ಪ್ರೀತಿ ಮದುವೆ ವೇಳೆ ಕಬೀರ್ ಇಂಜಕ್ಷನ್ ತೆಗೆದುಕೊಳ್ಳುತ್ತಾನೆ. ಹಲವು ಗಂಟೆ ಆತನಿಗೆ ಪ್ರಜ್ಞೆ ಇರುವುದಿಲ್ಲ. ಕಬೀರ್ ಬೆಡ್​ ಮೇಲೆ ಮಲಗಿರುವ ಫೋಟೋನ ಕಿಯಾರಾ ಮದುವೆ ಫೋಟೋ ಪೋಸ್ಟ್​ನ ಕಮೆಂಟ್ ಬಾಕ್ಸ್​​ನಲ್ಲಿ ಹಾಕಿರುವ ಫ್ಯಾನ್ಸ್ ‘ನಿಮ್ಮ ಫೋಟೋ ನೋಡಿ ಶಾಹಿದ್ ಕಪೂರ್ ಇಂಜಕ್ಷನ್ ತೆಗೆದುಕೊಂಡು ಮಲಗಿರಬಹುದು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರ ವಿವಾಹದ ಕ್ಷಣದ ಫೋಟೋ ವೈರಲ್

ಇನ್ನೂ ಕೆಲವರು ಶಾಹಿದ್ ಕಪೂರ್ ರಸ್ತೆಯಮೇಲೆ ಓಡಿ ಬರುತ್ತಿರುವ ವಿಡಿಯೋನ ಅಪ್​ಲೋಡ್ ಮಾಡಿದ್ದಾರೆ. ‘ಕಿಯಾರಾ ಹಾಗೂ ಸಿದ್ದಾರ್ಥ್ ಮದುವೆ ನಿಲ್ಲಿಸೋಕೆ ಶಾಹಿದ್ ಓಡಿ ಬರುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ‘ಈಗ ಕಬೀರ್ ಸಿಂಗ್​ನ ಪರಿಸ್ಥಿತಿ’ ಎಂದು ಶಾಹಿದ್ ಮದ್ಯಪಾನ ಮಾಡುತ್ತಿರುವ ಫೋಟೋನ ಪೋಸ್ಟ್ ಮಾಡಲಾಗಿದೆ. ‘ಪ್ರೀತಿ ಮೇಲೆ ಏಕೆ ಕೈ ಇಟ್ಟೆ’ ಎಂದು ಶಾಹಿದ್ ಕೂಗುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ