Shah Rukh Khan: ‘ಪಠಾಣ್’ ಟಿಕೆಟ್ ಬೆಲೆ ಇಳಿಕೆ: ಶಾರುಖ್ ಖಾನ್ ಅಭಿಮಾನಿಗಳಿಗೆ ಬಂಪರ್ ಅವಕಾಶ
Pathaan Movie | Box Office Collection: ಇಷ್ಟು ದಿನ ‘ಪಠಾಣ್’ ನೋಡದೇ ಇರುವವರು ಈಗ ಟಿಕೆಟ್ ಬೆಲೆ ಕಮ್ಮಿ ಆಗಿರುವುದರಿಂದ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಚಿತ್ರದ ಕಲೆಕ್ಷನ್ ಮತ್ತೆ ಹೆಚ್ಚುವ ನಿರೀಕ್ಷೆ ಇದೆ.
ನಟ ಶಾರುಖ್ ಖಾನ್ (Shah Rukh Khan) ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ‘ಪಠಾಣ್’ ಸಿನಿಮಾ (Pathaan Movie) ಸೂಪರ್ ಹಿಟ್ ಆಗಿದ್ದು, ಈ ಚಿತ್ರದ ಟಿಕೆಟ್ ಬೆಲೆ ತಗ್ಗಿಸಲು ನಿರ್ಮಾಪಕರು ತೀರ್ಮಾನಿಸಿದ್ದಾರೆ. ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಹೋಗಿ ‘ಪಠಾಣ್’ ನೋಡಬೇಕು ಎಂದುಕೊಂಡವರಿಗೆ ಇದರಿಂದ ಖುಷಿ ಆಗಿದೆ. ಇಷ್ಟು ದಿನ ಟಿಕೆಟ್ ಬೆಲೆ (Pathaan Ticket Price) ದುಬಾರಿ ಆಗಿದೆ ಎಂಬ ಕಾರಣಕ್ಕೆ ಥಿಯೇಟರ್ನಿಂದ ದೂರ ಉಳಿದುಕೊಂಡಿದ್ದವರಿಗೂ ಈ ಸುದ್ದಿ ಖುಷಿ ನೀಡಿದೆ. ದೇಶಾದ್ಯಂತ ‘ಪಠಾಣ್’ ಸಿನಿಮಾ ಧೂಳೆಬ್ಬಿಸಿದೆ. ಎರಡನೇ ವಾರದಲ್ಲೂ ಉತ್ತಮ ಕಲೆಕ್ಷನ್ ಮಾಡಿದೆ. ಇನ್ನೂ ಹೆಚ್ಚಿನ ಮಂದಿಗೆ ಸಿನಿಮಾ ನೋಡಲು ಅನುಕೂಲ ಆಗಲಿ ಎಂದು ಈಗ ಟಿಕೆಟ್ ಬೆಲೆ ತಗ್ಗಿಸಲಾಗುತ್ತಿದೆ ಎಂದು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ಹಂಚಿಕೊಂಡಿದ್ದಾರೆ.
‘ಪಠಾಣ್’ ಸಿನಿಮಾ ಜನವರಿ 25ರಂದು ಅದ್ದೂರಿಯಾಗಿ ರಿಲೀಸ್ ಆಯಿತು. ಆಗ ಟಿಕೆಟ್ ಬೆಲೆ ಮುಗಿಲು ಮುಟ್ಟಿತ್ತು. ಕೆಲವು ಕಡೆಗಳಲ್ಲಿ ಸಾವಿರ ರೂಪಾಯಿ ದಾಟಿದ್ದರೂ ಕೂಡ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿ ಮಾಡಿದರು. ಆದರೆ ಎಲ್ಲರಿಗೂ ಇದನ್ನು ಭರಿಸುವ ಶಕ್ತಿ ಇರುವುದಿಲ್ಲ. ಆ ಕಾರಣದಿಂದ ಇಷ್ಟು ದಿನ ಸಿನಿಮಾ ನೋಡದೇ ಇರುವವರು ಈಗ ಟಿಕೆಟ್ ಬೆಲೆ ಕಮ್ಮಿ ಆಗಿರುವುದರಿಂದ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: Pathaan Movie: ಪಾಕಿಸ್ತಾನದಲ್ಲಿ ‘ಪಠಾಣ್’ ಚಿತ್ರದ ಅಕ್ರಮ ಪ್ರದರ್ಶನ; ಕಾನೂನು ಕ್ರಮ ಕೈಗೊಂಡ ಸೆನ್ಸಾರ್ ಮಂಡಳಿ
ವಿಶ್ವಾದ್ಯಂತ ‘ಪಠಾಣ್’ ಸಿನಿಮಾ ಈಗಾಗಲೇ 730 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಭಾರತದಲ್ಲಿ ಹಿಂದಿ ವರ್ಷನ್ ಕಲೆಕ್ಷನ್ 422 ಕೋಟಿ ರೂಪಾಯಿ ಆಗಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಹಿಂದಿಯಲ್ಲಿ ಮಾಡಿದ್ದ ದಾಖಲೆಯನ್ನು (434.70 ಕೋಟಿ ರೂ) ಮುರಿಯಲು ‘ಪಠಾಣ್’ ಚಿತ್ರಕ್ಕೆ ಬೇಕಿರುವುದು ಇನ್ನು ಕೆಲವೇ ಕೋಟಿ ರೂಪಾಯಿಗಳು ಮಾತ್ರ.
‘PATHAAN’: YRF DROPS TICKET RATES AT NATIONAL CHAINS… #YRF has decided to reduce ticket rates at national chains to make cinema-going experience more affordable in *Week 2* [weekdays]… Resultantly, the admits on Monday [weekday rates] are similar to Friday [weekend rates]… pic.twitter.com/oldn22vXgF
— taran adarsh (@taran_adarsh) February 7, 2023
ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಜೋಡಿಯಾಗಿ ನಟಿಸಿರುವ ‘ಪಠಾಣ್’ ಚಿತ್ರಕ್ಕೆ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಬಂಡವಾಳ ಹೂಡಿದೆ. ಈ ಸಿನಿಮಾದಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ಟಿಕೆಟ್ ಬೆಲೆ ತಗ್ಗಿಸಿದ ಬಳಿಕ ಮತ್ತೆ ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದೆ. ಅಂತಿಮವಾಗಿ ಈ ಚಿತ್ರ ಎಷ್ಟು ಹಣ ಗಳಿಸಲಿದೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:29 pm, Tue, 7 February 23