AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakhi Sawant: ರಾಖಿ ಸಾವಂತ್​ ಪತಿ ಆದಿಲ್ ಖಾನ್​ ಬಂಧನ; ‘ಸಾಯೋ ತನಕ ಕ್ಷಮಿಸಲ್ಲ’ ಎಂದು ತುತ್ತು ತಿನ್ನಿಸಿದ ನಟಿ

Rakhi Sawant Viral Video: ಆದಿಲ್​ ಖಾನ್​ ಮೇಲೆ ರಾಖಿ ಸಾವಂತ್ ಹಲವು ಆರೋಪ ಮಾಡಿದ್ದಾರೆ. ‘ಅವನು ನನ್ನ ಜೀವನ ಹಾಳು ಮಾಡಿದ್ದಾನೆ. ನನಗೆ ಹೊಡೆದಿದ್ದಾನೆ. ನನ್ನ ಹಣ ಕದ್ದಿದ್ದಾನೆ’ ಎಂದು ಅವರು ಹೇಳಿದ್ದಾರೆ.

Rakhi Sawant: ರಾಖಿ ಸಾವಂತ್​ ಪತಿ ಆದಿಲ್ ಖಾನ್​ ಬಂಧನ; ‘ಸಾಯೋ ತನಕ ಕ್ಷಮಿಸಲ್ಲ’ ಎಂದು ತುತ್ತು ತಿನ್ನಿಸಿದ ನಟಿ
ರಾಖಿ ಸಾವಂತ್, ಆದಿಲ್ ಖಾನ್
ಮದನ್​ ಕುಮಾರ್​
|

Updated on:Feb 07, 2023 | 3:28 PM

Share

ನಟಿ ರಾಖಿ ಸಾವಂತ್​ (Rakhi Sawant) ಅವರು ಕೇವಲ ವಿವಾದಗಳಿಂದಲೇ ಸುದ್ದಿ ಆಗುತ್ತಿದ್ದಾರೆ. ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಕೆಲವೇ ತಿಂಗಳ ಹಿಂದೆ ಆದಿಲ್​ ಖಾನ್​ ಜೊತೆ ರಾಖಿ ಸಾವಂತ್​ ಮದುವೆ ನೆರವೇರಿತ್ತು. ಆದರೆ ಈಗ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗಂಡ-ಹೆಂಡತಿ ನಡುವಿನ ಗಲಾಟೆ ಬೀದಿಗೆ ಬಂದಿದೆ. ಅಷ್ಟೇ ಅಲ್ಲ, ಪತಿ ಆದಿಲ್​ ಖಾನ್​ ವಿರುದ್ಧ ರಾಖಿ ಸಾವಂತ್​ ಅವರು ದೂರು ದಾಖಲಿಸಿದ್ದಾರೆ. ಮುಂಬೈನ ಓಶಿವರ ಪೊಲೀಸರು ಆದಿಲ್​ ಖಾನ್​ (Adil Khan) ಅವರನ್ನು ಬಂಧಿಸಿದ್ದಾರೆ. ಈ ಕುರಿತು ಸ್ವತಃ ರಾಖಿ ಸಾವಂತ್​ ಅವರು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅವರ ಒಂದು ವಿಡಿಯೋ (Rakhi Sawant Viral Video) ವೈರಲ್​ ಆಗಿದೆ. ಪತಿಗೆ ಅವರು ತುತ್ತು ತಿನ್ನಿಸಿದ ದೃಶ್ಯ ಆ ವಿಡಿಯೋದಲ್ಲಿದೆ.

ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ನಡುವಿನ ಸಂಬಂಧದಲ್ಲಿ ಸಮಸ್ಯೆ ಎದುರಾಗಿದೆ. ಪರಸ್ತ್ರೀ ಜೊತೆ ಆದಿಲ್​ ಖಾನ್​ ಅಫೇರ್​ ಇಟ್ಟುಕೊಂಡಿದ್ದಾರೆ ಎಂದು ರಾಖಿ ಸಾವಂತ್​ ಆರೋಪಿಸಿದ್ದಾರೆ. ‘ಇದು ನಾಟಕ ಅಲ್ಲ. ಅವನು ನನ್ನ ಜೀವನ ಹಾಳು ಮಾಡಿದ್ದಾನೆ. ನನಗೆ ಹೊಡೆದಿದ್ದಾನೆ. ನನ್ನ ಹಣ ಕದ್ದಿದ್ದಾನೆ. ಆತ ಖುರಾನ್​ ಮೇಲೆ ಪ್ರಮಾಣ ಮಾಡಿದ್ದರೂ ಕೂಡ ನಂತರ ನನಗೆ ಮೋಸ ಮಾಡಿದ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಇದನ್ನೂ ಓದಿ
Image
Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ
Image
Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​
Image
Rakhi Sawant: ಫಾತಿಮಾ ಅಂತ ಹೆಸರು ಬದಲಿಸಿಕೊಂಡ ರಾಖಿ ಸಾವಂತ್​; ಆದಿಲ್​​ ಜತೆಗಿನ ಶಾದಿ ರಹಸ್ಯ ಬಹಿರಂಗ
Image
Rakhi Sawant: ಮತ್ತೊಂದು ವಿವಾಹ ಆದ ರಾಖಿ ಸಾವಂತ್; ಆದಿಲ್ ಜತೆಗಿನ ಮದುವೆ ಫೋಟೋ ವೈರಲ್

ಇದನ್ನೂ ಓದಿ: Rakhi Sawant: ಬೀದಿಗೆ ಬಂತು ಆದಿಲ್​ ಖಾನ್​-ರಾಖಿ ಸಾವಂತ್​ ಮದುವೆ ಗಲಾಟೆ; ಪತಿ ಮೇಲೆ ಅನೈತಿಕ ಸಂಬಂಧದ ಆರೋಪ

ಕಳೆದ ಕೆಲವು ದಿನಗಳಿಂದ ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು. ಸೋಮವಾರ (ಫೆ.6) ರಾತ್ರಿ ಇಬ್ಬರೂ ಒಂದೆಡೆ ಭೇಟಿ ಆಗಿದ್ದಾರೆ. ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಈ ವೇಳೆ ಪತಿಗೆ ರಾಖಿ ಸಾವಂತ್​ ತುತ್ತು ತಿನ್ನಿಸಿದ್ದಾರೆ. ಇಷ್ಟೆಲ್ಲ ನಡೆದ ನಂತರ ಆದಿಲ್​ ಖಾನ್​ ಬಂಧನವಾಗಿದೆ.

View this post on Instagram

A post shared by @varindertchawla

ಈ ರೀತಿ ಕಿರಿಕ್ ಮಾಡಿಕೊಂಡಿರುವಾಗ ಪತಿಗೆ ತುತ್ತು ತಿನ್ನಿಸಿದ್ದು ಯಾಕೆ ಎಂಬ ಬಗ್ಗೆ ರಾಖಿ ಸಾವಂತ್ ಪ್ರತಿಕ್ರಿಯೆ ನೀಡಿದ್ದಾರೆ. ‘ಮನೆಯಲ್ಲಿ ನಾನು ಅವನಿಗೆ ಯಾವಾಗಲೂ ಊಟ ಮಾಡಿಸುತ್ತಿದ್ದೆ. ಶತ್ರುಗಳು ಮನೆಗೆ ಬಂದಾಗಲೂ ನೀರು ಕೊಡುತ್ತೇವೆ. ಈತ ನನ್ನ ಗಂಡ. ಸಾಯೋ ತನಕ ಅವನನ್ನು ಪ್ರೀತಿಸುತ್ತೇನೆ. ಆದರೆ ಎಂದಿಗೂ ಕ್ಷಮಿಸುವುದಿಲ್ಲ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಈ ವಿಡಿಯೋಗಳನ್ನು ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇವರ ವರ್ತನೆ ಅರ್ಥವೇ ಆಗುವುದಿಲ್ಲ ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:28 pm, Tue, 7 February 23

Follow Us
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ