‘ಪ್ರಶಾಂತ್ ನೀಲ್ ಒತ್ತಾಯಕ್ಕೆ ನಾನು ಆ ಸಿನಿಮಾ ಮಾಡಿದೆ’; ಒಪ್ಪಿಕೊಂಡ ಪೃಥ್ವಿರಾಜ್

‘ಸಲಾರ್’ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ನಟಿಸಿದ್ದಾರೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪೃಥ್ವಿರಾಜ್​ಗೆ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಒಪ್ಪಿಕೊಂಡು ನಟಿಸುವಂತೆ ಪುಶ್ ಕೊಟ್ಟಿದ್ದರು. ಈ ಬಗ್ಗೆ ಪೃಥ್ವಿರಾಜ್ ಅವರು ಹೇಳಿಕೊಂಡಿದ್ದಾರೆ.

‘ಪ್ರಶಾಂತ್ ನೀಲ್ ಒತ್ತಾಯಕ್ಕೆ ನಾನು ಆ ಸಿನಿಮಾ ಮಾಡಿದೆ’; ಒಪ್ಪಿಕೊಂಡ ಪೃಥ್ವಿರಾಜ್
ಪೃಥ್ವಿರಾಜ್-ಪ್ರಶಾಂತ್
Follow us
ರಾಜೇಶ್ ದುಗ್ಗುಮನೆ
|

Updated on: Apr 02, 2024 | 7:01 AM

ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ ಗಮನ ಸೆಳೆದಿದೆ. ಅಕ್ಷಯ್ ಕುಮಾರ್ ಹಾಗೂ ಟೈಗರ್​ ಶ್ರಾಫ್ ಜುಗಲ್​ಬಂದಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಏಳು ವರ್ಷಗಳ ಬಳಿಕ ಪೃಥ್ವಿರಾಜ್ ಅವರು ಹಿಂದಿ ಚಿತ್ರರಂಗಕ್ಕೆ ಮರಳಿದ್ದಾರೆ. ಅವರು ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಒಪ್ಪಿಕೊಳ್ಳಲು ಪ್ರಶಾಂತ್ ನೀಲ್ ಕಾರಣ ಎಂದಿದ್ದಾರೆ.

‘ಸಲಾರ್’ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ನಟಿಸಿದ್ದಾರೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪೃಥ್ವಿರಾಜ್​ಗೆ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಒಪ್ಪಿಕೊಂಡು ನಟಿಸುವಂತೆ ಪುಶ್ ಕೊಟ್ಟಿದ್ದರು. ಈ ಬಗ್ಗೆ ಪೃಥ್ವಿರಾಜ್ ಅವರು ಹೇಳಿಕೊಂಡಿದ್ದಾರೆ. ‘ಸಲಾರ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಅಲಿ ಅಬ್ಬಾಸ್ ಜಫರ್ ಹೇಳಿದ ಸ್ಕ್ರಿಪ್ಟ್ ಬಗ್ಗೆ ಪ್ರಶಾಂತ್ ನೀಲ್ ಜೊತೆ ಮಾತನಾಡುತ್ತಿದ್ದೆ. ನನಗೆ ಸಿನಿಮಾ ಆಫರ್ ಬಂದಿದೆ. ಪಾತ್ರವೂ ಚೆನ್ನಾಗಿದೆ. ಆದರೆ, ಡೇಟ್​ ಹೊಂದಾಣಿಕೆ ಆಗದ ಕಾರಣ ನಾನು ಸಿನಿಮಾ ಮಾಡುತ್ತಿಲ್ಲ ಎಂದು ಪ್ರಶಾಂತ್ ಬಳಿ ಹೇಳಿದ್ದೆ’ ಎಂದಿದ್ದಾರೆ ಪೃಥ್ವಿರಾಜ್.

‘ಪ್ರಶಾಂತ್ ನೀಲ್ ಜೊತೆ ಸಿನಿಮಾ ಬಗ್ಗೆ, ಸ್ಕ್ರಿಪ್ಟ್ ಬಗ್ಗೆ 20 ನಿಮಿಷ ಮಾತನಾಡಿದೆ. ಈ ಸಿನಿಮಾನ ನೀವು ಮಾಡಲೇಬೇಕು ಎಂದು ಅವರು ಹೇಳಿದರು. ಒಂದೊಮ್ಮೆ ನಾನು ಈ ಚಿತ್ರದ ಭಾಗ ಆಗದೇ ಇದ್ದಿದ್ದರೆ ಬಹುಶಃ ಸಿನಿಮಾ ನೋಡಿದ ಮೇಲೆ ನನಗೆ ನಾನು ಸಾಕಷ್ಟು ಮರಗುತ್ತಿದ್ದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿಮಾ ಉದ್ದಕ್ಕೂ ಕಾಣಲ್ಲ ಪೃಥ್ವಿರಾಜ್ ಮುಖ? ಮೂಡಿದೆ ಅನುಮಾನ

ಪೃಥ್ವಿರಾಜ್ ಅವರು ಒಟ್ಟೊಟ್ಟಿಗೆ ‘ಸಲಾರ್’, ‘ಸರ್ಜಮೀನ್’ ಹಾಗೂ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದ ಶೂಟಿಂಗ್​ನ ಮಾಡಿದರು. ಇದಕ್ಕಾಗಿ ಅವರು ಸಾಕಷ್ಟು ಹೆಕ್ಟಿಕ್ ಅನುಭವಿಸಬೇಕಾಯಿತು. ‘ನಾನು ಎರಡು ಸಿನಿಮಾಗಳನ್ನು ಒಟ್ಟಿಗೆ ಮಾಡುತ್ತಿದ್ದೆ. ಸಾಮಾನ್ಯವಾಗಿ ನಾನು ಹಾಗೆ ಮಾಡುವುದಿಲ್ಲ. ಮಲಯಾಳಂ ಚಿತ್ರರಂಗದಲ್ಲಿ ಆ ಸಂಪ್ರದಾಯ ಇಲ್ಲ. ನಾವು ಒಂದು ಸಿನಿಮಾ ಆರಂಭಿಸಿದರೆ ಅದು ಮುಗಿಯುವವರೆಗೆ ಅದೇ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿರುತ್ತೇವೆ. ಎಲ್ಲರೂ ನನಗಾಗಿ ಅಡ್ಜಸ್ಟ್ ಮಾಡಿಕೊಂಡರು. ಇದರಿಂದ ನಾನು ಉತ್ತಮ ಸಿನಿಮಾ ಮಾಡಲು ಸಾಧ್ಯವಾಯಿತು’ ಎಂದಿದ್ದಾರೆ ಪೃಥ್ವಿರಾಜ್. ‘ಬಡೇ ಮಿಯಾ ಚೋಟೆ ಮಿಯಾ ಸಿನಿಮಾ ಏಪ್ರಿಲ್ 10ರಂದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ