AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ದಿನವೇ ರಣಬೀರ್​ ಬಳಿ ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಹೆಣ್ಣಿನ ಕಡೆಯವರು?

2022ರ ಏಪ್ರಿಲ್​ ತಿಂಗಳಲ್ಲಿ ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಅವರ ಮದುವೆ ನಡೆದಾಗ ಹೆಣ್ಣಿನ ಸಹೋದರಿಯರು ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂಬ ಗಾಸಿಪ್​ ಇದೆ. ಆ ಬಗ್ಗೆ ರಣಬೀರ್​ ಕಪೂರ್​ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ. ‘ದೊಡ್ಡ ಮೊತ್ತ ಕೇಳಿದ್ದು ಹೌದು’ ಎಂದು ಅವರು ಹೇಳಿದ್ದಾರೆ. ನಂತರ ಏನಾಯಿತು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ಮದುವೆ ದಿನವೇ ರಣಬೀರ್​ ಬಳಿ ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಹೆಣ್ಣಿನ ಕಡೆಯವರು?
ಆಲಿಯಾ ಭಟ್​, ರಣಬೀರ್​ ಕಪೂರ್​
ಮದನ್​ ಕುಮಾರ್​
|

Updated on: Apr 01, 2024 | 3:27 PM

Share

ನಟ ರಣಬೀರ್​ ಕಪೂರ್​ (Ranbir Kapoor) ಅವರು ಹಲವು ನಟಿಯರ ಜೊತೆ ರಿಲೇಷನ್​ಶಿಪ್​ ಹೊಂದಿದ್ದರು. ಕತ್ರಿನಾ ಕೈಫ್​, ದೀಪಿಕಾ ಪಡುಕೋಣೆ ಜೊತೆ ಅವರ ಲವ್ವಿ ಡವ್ವಿ ನಡೆದಿತ್ತು. ಆದರೆ ಕಡೆಗೆ ಅವರು ಮದುವೆ ಆಗಿದ್ದು ಆಲಿಯಾ ಭಟ್​ (Alia Bhatt) ಜೊತೆ. ಅಚ್ಚರಿ ಎಂದರೆ ಮದುವೆ ದಿನವೇ ಆಲಿಯಾ ಭಟ್​ ಅವರ ಸಹೋದರಿಯರು ಬಂದು ರಣಬೀರ್​ ಕಪೂರ್​ ಬಳಿಕ ಕೋಟ್ಯಂತರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು! ಈ ಬಗ್ಗೆ ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ (The Great Indian Kapil Show) ಕಾರ್ಯಕ್ರಮದಲ್ಲಿ ಪ್ರಸ್ತಾಪ ಆಗಿದೆ. ಆ ಬಗ್ಗೆ ರಣಬೀರ್​ ಕಪೂರ್​ ಮಾತನಾಡಿದ್ದಾರೆ. ಆ ದಿನ ಏನು ನಡೆಯಿತು ಎಂಬುದನ್ನು ವಿವರಿಸಿದ್ದಾರೆ.

ಉತ್ತರ ಭಾರತದಲ್ಲಿ ಮದುವೆಯ ದಿನ ಗಂಡಿನ ಚಪ್ಪಲಿಯನ್ನು ಹೆಣ್ಣಿನ ಕಡೆಯವರು ಕದಿಯುವ ಶಾಸ್ತ್ರ ಇದೆ. ಇದಕ್ಕೆ ‘ಜೂತಾ ಚುರಾಯಿ’ ಎನ್ನುತ್ತಾರೆ. ಕಳ್ಳತನ ಆಗಿರುವ ಚಪ್ಪಲಿಯನ್ನು ಮದುಮಗ ಹುಡುಕಬೇಕು. ಒಂದು ವೇಳೆ ಸಿಗದಿದ್ದರೆ ಹೆಣ್ಣಿನ ಕಡೆಯವರು ಡಿಮ್ಯಾಂಡ್​ ಮಾಡಿದಷ್ಟು ಹಣವನ್ನು ಕೊಟ್ಟು ಆತ ತನ್ನ ಚಪ್ಪಲಿ ವಾಪಸ್​ ಪಡೆಯಬೇಕು. ಈ ಸಂದರ್ಭದಲ್ಲಿ ಚೌಕಾಸಿ ಮಾಡಲಾಗುತ್ತದೆ. ಇದೇ ವಿಚಾರದ ಬಗ್ಗೆ ರಣಬೀರ್​ ಕಪೂರ್​ ಮಾತನಾಡಿದ್ದಾರೆ.

ಇದನ್ನೂ ಓದಿ: ಮಗಳ ಮುಖ ತೋರಿಸಿ 1 ಲಕ್ಷ ರೂಪಾಯಿ ದಾನ ಮಾಡಿದ ರಣಬೀರ್​ ಕಪೂರ್​

ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರ ಮದುವೆಯಲ್ಲಿ ಜೂತಾ ಚುರಾಯಿ ಶಾಸ್ತ್ರ ನಡೆದಾಗ ಆಲಿಯಾ ಭಟ್​ ಅವರ ಸಹೋದರಿಯರು ಕೋಟ್ಯಂತರ ರೂಪಾಯಿ ಡಿಮ್ಯಾಂಡ್​ ಮಾಡಿದ್ದರು ಎಂಬ ಗಾಸಿಪ್​ ಹರಿದಾಡಿತ್ತು. ಅದೆಲ್ಲ ನಿಜವಲ್ಲ ಎಂದು ರಣಬೀರ್​ ಕಪೂರ್​ ಹೇಳಿದ್ದಾರೆ. ಆದರೆ ‘ದೊಡ್ಡ ಮೊತ್ತದ ಹಣ ಕೇಳಿದ್ದು ಹೌದು’ ಎಂದು ರಣಬೀರ್​ ಕಪೂರ್​ ಅವರು ಹೇಳಿದ್ದಾರೆ. ಲಕ್ಷಾಂತರ ರೂಪಾಯಿ ಕೇಳಲಾಗಿತ್ತು. ಆದರೆ ಕೆಲವು ಸಾವಿರ ರೂಪಾಯಿಗಳನ್ನು ನೀಡಲು ರಣಬೀರ್​ ಕಪೂರ್​ ಒಪ್ಪಿಕೊಂಡರು. ಈಗ ರಣಬೀರ್​ ಮತ್ತು ಆಲಿಯಾ ಸುಖವಾಗಿ ಸಂಸಾರ ನಡೆದುತ್ತಿದ್ದಾರೆ. ಈ ದಂಪತಿಗೆ ರಹಾ ಎಂಬ ಹೆಣ್ಣು ಮಗು ಇದೆ.

ಇದನ್ನೂ ಓದಿ: ಜನರು ‘ಸಿಂಗಂ’ ಅಂದುಕೊಂಡಿದ್ರು; ಆದ್ರೆ ರಣಬೀರ್​ ಕಪೂರ್​ ಆಗಿದ್ದು ಕೇವಲ ‘ಚಿಂಗಂ’

ಕಳೆದ ವರ್ಷ ಬಿಡುಗಡೆಯಾದ ‘ಅನಿಮಲ್​’ ಸಿನಿಮಾದಿಂದ ರಣಬೀರ್​ ಕಪೂರ್​ ಅವರು ದೊಡ್ಡ ಯಶಸ್ಸು ಕಂಡರು. ಈಗ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ನಿತೇಶ್​ ತಿವಾರಿ ನಿರ್ದೇಶನ ಮಾಡಲಿರುವ ರಾಮಾಯಣ ಆಧಾರಿತ ಸಿನಿಮಾದಲ್ಲಿ ಅವರು ರಾಮನ ಪಾತ್ರ ಮಾಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಅವರು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಹತ್ತು ಹಲವು ಗಾಸಿಪ್​ಗಳು ಕೇಳಿಬರುತ್ತಿವೆ. ಆದರೆ ಚಿತ್ರತಂಡದಿಂದ ಯಾವುದೇ ಅಧಿಕೃತವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ