ಶಾರುಖ್ ಖಾನ್ ಬಳಸುವ ಸುಗಂಧ ದ್ರವ್ಯದ ಬೆಲೆ ಎಷ್ಟು?

Shah Rukh Khan: ಶಾರುಖ್ ಖಾನ್ ಹಾಕಿಕೊಳ್ಳುವ ಸುಗಂಧ ದ್ರವ್ಯದ ಬಗ್ಗೆ ಬಾಲಿವುಡ್ ನ ಹಲವು ನಟಿಯರು ಹಲವು ಬಾರಿ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಅಂದಹಾಗೆ ಶಾರುಖ್ ಖಾನ್ ಯಾವ ಪರ್ಫ್ಯೂಮ್ ಬಳಸುತ್ತಾರೆ. ಆ ಪರ್ಫ್ಯೂಮ್ ನ ಬೆಲೆ ಎಷ್ಟು?

ಶಾರುಖ್ ಖಾನ್ ಬಳಸುವ ಸುಗಂಧ ದ್ರವ್ಯದ ಬೆಲೆ ಎಷ್ಟು?
ಶಾರುಖ್ ಖಾನ್
Follow us
ಮಂಜುನಾಥ ಸಿ.
|

Updated on: Apr 02, 2024 | 1:48 PM

ಶಾರುಖ್ ಖಾನ್ (Shah Rukh Khan) ನಟನೆ, ಸ್ಟಾರ್ ಗಿರಿ, ಗೆಳೆಯರಿಗೆ ಸಹಾಯ ಮಾಡುವ ರೀತಿ, ಎಲ್ಲರನ್ನೂ ಪ್ರೀತಿಯಿಂದ ಕಾಣುವ, ಮಾತನಾಡಿಸುವ ರೀತಿಯ ಬಗ್ಗೆ ಹಲವು ಸೆಲೆಬ್ರಿಟಿಗಳು ಹಲವು ಬಾರಿ ಮಾತನಾಡಿದ್ದಾರೆ. ಇದನ್ನು ಹೊರತುಪಡಿಸಿ, ಸ್ವತಃ ಬಾಲಿವುಡ್​ನ ದೊಡ್ಡ ಸೆಲೆಬ್ರಿಟಿಗಳು ಶಾರುಖ್ ಖಾನ್ ಬಗ್ಗೆ ಮಾತನಾಡುವಾಗ ಅವರ ಐಶಾರಾಮಿ ಮನೆ ‘ಮನ್ನತ್’ ಹಾಗೂ ಶಾರುಖ್ ಖಾನ್ ಬಳಸುವ ಸುಗಂಧ ದ್ರವ್ಯ (ಪರ್ಫ್ಯೂಮ್) ಬಗ್ಗೆ ವಿಶೇಷವಾಗಿ ಮಾತನಾಡುತ್ತಾರೆ. ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿಯರು ಶಾರುಖ್ ಖಾನ್ ಅವರ ಸುಗಂಧ ದ್ರವ್ಯದ ಘಮ ಅತ್ಯದ್ಭುತ ಎಂದು ಹೊಗಳಿದ್ದಾರೆ. ಅಂದಹಾಗೆ ಶಾರುಖ್ ಖಾನ್ ಯಾವ ಪರ್ಫ್ಯೂಮ್ ಬಳಸುತ್ತಾರೆ? ಅದರ ಬೆಲೆ ಎಷ್ಟು?

ಶಾರುಖ್ ಖಾನ್ ಜಿಕ್ಯೂ ಮ್ಯಾಗಜೀನ್​ಗಾಗಿ ನೀಡಿದ್ದ ಸಂದರ್ಶನದಲ್ಲಿ ಈ ಬಗ್ಗೆ ತಾವು ಬಳಸುವ ಸುಗಂಧ ದ್ರವ್ಯದ ಬಗ್ಗೆ ಮಾತನಾಡಿದ್ದರು. ನಾನು ಎರಡು ಪರ್ಮ್ಯೂಮ್​ಗಳನ್ನು ಬೆರೆಸಿ ಮಿಶ್ರಣ ಮಾಡಿ ಬಳಸುತ್ತೇನೆ ಎಂದಿದ್ದರು. ‘ನಾನು ಡನ್​ಹಿಲ್ ಸೆಂಟ್ ಬಳಸುತ್ತೇನೆ. ಅದು ಅವರ ಲಂಡನ್​ನ ಸ್ಟೋರ್​ನಲ್ಲಿ ಮಾತ್ರವೇ ಲಭ್ಯವಿದೆ. ಅದರ ಜೊತೆಗೆ ಡಿಪ್ಟಿ ಕ್ಯೂ ಹೆಸರಿನ ಮತ್ತೊಂದು ಪರ್ಫ್ಯೂಮ್ ಅನ್ನು ಸಹ ಬಳಸುತ್ತೇನೆ. ಇವರೆರಡನ್ನೂ ಸಮ ಪ್ರಮಾಣದಲ್ಲಿ ಬೆರೆಸಿ ಮೈಗೆ ಹಾಕಿಕೊಳ್ಳುತ್ತೇನೆ’ ಎಂದಿದ್ದರು.

ಇದನ್ನೂ ಓದಿ:ಶಾರುಖ್ ಖಾನ್ ಕಿರಿಯ ಮಗ ಅಬ್ರಾಂನ ಶಾಲಾ ಶುಲ್ಕ ಎಷ್ಟು? ಅಚ್ಚರಿ ಗ್ಯಾರಂಟಿ

ಡನ್​ಹಿಲ್ ಬ್ರ್ಯಾಂಡ್​ನ ಯಾವ ಸೆಂಟ್ ಅನ್ನು ಬಳಸುತ್ತೇನೆಂದು ಶಾರುಖ್ ಖಾನ್ ಹೇಳಿಲ್ಲ. ಆದರೆ ಡನ್​ಹಿಲ್​ನ ಆನ್​ಲೈನ್ ಮಳಿಗೆಯಲ್ಲಿ 10,000 ದ ವರೆಗೆ ಬೆಲೆಯ ಪರ್ಫ್ಯೂಮ್​ಗಳು ಮಾರಾಟಕ್ಕಿವೆ. ಇನ್ನು ಡಿಪ್ಟಿ ಕ್ಯೂ ಪರ್ಫ್ಯೂಮ್​ನ ಬೆಲೆ ಸುಮಾರು 30,000 ರೂಪಾಯಿಗಳು. ಈ ಎರಡನ್ನೂ ಬೆರೆಸಿ ಶಾರುಖ್ ಖಾನ್ ಮೈಗೆ ಪೂಸಿಕೊಳ್ಳುತ್ತಾರೆ. ಹಾಗಾಗಿಯೇ ಅವರು ಅದ್ಭುತವಾದ ಸುವಾಸನೆ ಬೀರುತ್ತಾರೆ. ಶಾರುಖ್ ಖಾನ್ ಈ ಹಿಂದೆ ಕೆಲವು ಪರ್ಫ್ಯೂಮ್ ಬ್ರ್ಯಾಂಡ್​ಗಳ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಡೆನ್ವರ್​ರ ರಾಯಭಾರಿ ಆಗಿದ್ದಾರೆ. ಆದರೆ ಅವರು ಬಳಸುವುದು ವಿದೇಶಿ ಬ್ರ್ಯಾಂಡ್​ನ ಸುಗಂಧ ದ್ರವ್ಯ.

ಶಾರುಖ್ ಖಾನ್ ಗೆ 2023 ಅತ್ಯಂತ ಅದೃಷ್ಟದ ಹಾಗೂ ಲಾಭದಾಯಕ ವರ್ಷವಾಗಿದೆ. 2023 ರಲ್ಲಿ ಶಾರುಖ್ ಖಾನ್ ನಟಿಸಿರುವ ಮೂರು ಸಿನಿಮಾಗಳು ಬಿಡುಗಡೆ ಆಗಿ, ಮೂರೂ ಸಿನಿಮಾಗಳು ಬ್ಲಾಕ್ ಬಸ್ಟರ್​ಗಳಾಗಿವೆ. ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳು 2023 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್​ಗಳಾಗಿವೆ. ಇದೀಗ ಹೊಸದೊಂದು ಗೂಢಚಾರಿ ಕತೆ ಹೊಂದಿದ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದು ಆ ಸಿನಿಮಾ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ