IPL ಪ್ರಸಾರದ ವೇಳೆ ಜಾಹೀರಾತು; ಮುಂಚೂಣಿಯಲ್ಲಿ ಶಾರುಖ್​, ಅಜಯ್​ ದೇವಗನ್​

ನಟ ಶಾರುಖ್​ ಖಾನ್​ ಅವರಿಗೆ ಈಗ ಭರ್ಜರಿ ಡಿಮ್ಯಾಂಡ್​ ಇದೆ. 2023ರಲ್ಲಿ ತೆರೆಕಂಡ ‘ಪಠಾಣ್​’, ‘ಜವಾನ್​’, ‘ಡಂಕಿ’ ಸಿನಿಮಾಗಳ ಗೆಲುವಿನಿಂದ ಅವರು ಗೆಲುವಿನ ಟ್ರಾಕ್​​ಗೆ ಮರಳಿದ್ದರಿಂದ ಜಾಹೀರಾತು ಕ್ಷೇತ್ರದಲ್ಲಿ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅದೇ ರೀತಿ ಅಜಯ್​ ದೇವಗನ್​ ಕೂಡ ಅನೇಕ ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ.

IPL ಪ್ರಸಾರದ ವೇಳೆ ಜಾಹೀರಾತು; ಮುಂಚೂಣಿಯಲ್ಲಿ ಶಾರುಖ್​, ಅಜಯ್​ ದೇವಗನ್​
ಶಾರುಖ್​ ಖಾನ್​, ಅಜಯ್​ ದೇವಗನ್​
Follow us
ಮದನ್​ ಕುಮಾರ್​
|

Updated on: May 02, 2024 | 8:52 PM

ಸಿನಿಮಾ ನಟ-ನಟಿಯರಿಗೆ ಜಾಹೀರಾತುಗಳಿಂದಲೂ ಬಹುಕೋಟಿ ರೂಪಾಯಿ ಸಂಭಾವನೆ ಸಿಗುತ್ತದೆ. ಚಿತ್ರರಂಗದಲ್ಲಿ ಸಕ್ಸಸ್​ ರೇಟ್​ ಕಾಪಾಡಿಕೊಂಡರೆ ಜಾಹೀರಾತು ಕ್ಷೇತ್ರದಲ್ಲೂ ಸೆಲೆಬ್ರಿಟಿಗಳಿಗೆ ಡಿಮ್ಯಾಂಡ್​ ಹೆಚ್ಚಾಗುತ್ತದೆ. ನಟ ಶಾರುಖ್​ ಖಾನ್​ (Shah Rukh Khan) ಅವರು ಈಗ ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ಅವರ ಜೊತೆ ಬಾಲಿವುಡ್​ ನಟ ಅಜಯ್​ ದೇವಗನ್​ ಕೂಡ ಮಿಂಚುತ್ತಿದ್ದಾರೆ. ಈ ಬಾರಿಯ ಐಪಿಎಲ್​ (Indian Premier League) ಪಂದ್ಯಗಳ ಪ್ರಸಾರದ ನಡುವೆ ಶಾರುಖ್​ ಖಾನ್​ ಮತ್ತು ಅಜಯ್​ ದೇವಗನ್​ (Ajay Devgn) ಅವರ ಜಾಹೀರಾತುಗಳು ಅತಿ ಹೆಚ್ಚು ಪ್ರಸಾರ ಕಂಡಿವೆ.

ಶಾರುಖ್ ಖಾನ್ ಅವರು ಅನೇಕ ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ವಿವಿಧ ಉತ್ಪನ್ನಗಳನ್ನು ಅವರು ಪ್ರಮೋಟ್​ ಮಾಡುತ್ತಾರೆ. 2023ರಲ್ಲಿ ಅವರ ಮೂರು ಸಿನಿಮಾಗಳು ಬಿಡುಗಡೆ ಆದವು. ‘ಜವಾನ್​’, ‘ಪಠಾಣ್​’ ಚಿತ್ರಗಳು ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಸಿದರೆ, ‘ಡಂಕಿ’ ಚಿತ್ರ ಸಮಾಧಾನಕರ ರೀತಿಯಲ್ಲಿ ಕಲೆಕ್ಷನ್​ ಮಾಡಿತು. ಈ ಚಿತ್ರಗಳ ಯಶಸ್ಸಿನ ಬಳಿಕ ಶಾರುಖ್​ ಖಾನ್​ ಅವರಿಗೆ ಜಾಹೀರಾತುಗಳಿಂದ ಡಿಮ್ಯಾಂಡ್​ ಹೆಚ್ಚಿದೆ.

ಇನ್ನು, ಅಜಯ್​ ದೇವಗನ್​ ಅವರು ವಿಮಲ್​ ಪಾನ್​ ಮಸಾಲಾ ಸೇರಿದಂತೆ ಅನೇಕ ಕಂಪನಿಗಳಿಗೆ ಪ್ರಚಾರ ರಾಯಭಾರಿ ಆಗಿದ್ದು, ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಈವರೆಗೆ 37 ಐಪಿಎಲ್​ ಪಂದ್ಯಗಳ ವೇಳೆ ಪ್ರಸಾರವಾದ ಒಟ್ಟು ಜಾಹೀರಾತುಗಳಲ್ಲಿ ಶಾರುಖ್​ ಖಾನ್​ ಮತ್ತು ಅಜಯ್​ ದೇವಗನ್​ ಅವರ ಜಾಹೀರಾತುಗಳ ಪಾಲು ಶೇಕಡ 19ರಷ್ಟು ಇದೆ ಎಂದು ‘ದಿ ಎಕನಾಮಿಕ್​ ಟೈಮ್ಸ್​’ ವರದಿ ಮಾಡಿದೆ.

ಇದನ್ನೂ ಓದಿ: ಪುತ್ರಿ ಸುಹಾನಾ ಖಾನ್​ ಸಿನಿಮಾಗಾಗಿ 200 ಕೋಟಿ ರೂಪಾಯಿ ಸುರಿಯಲಿರುವ ಶಾರುಖ್​ ಖಾನ್​

ಕಳೆದ ವರ್ಷ ಐಪಿಎಲ್​ ಪಂದ್ಯಗಳ ಪ್ರಸಾರದ ವೇಳೆ ನಟ ಆಮಿರ್​ ಖಾನ್ ಅವರ ಜಾಹೀರಾತುಗಳು ಅತಿ ಹೆಚ್ಚು ಪ್ರಸಾರ ಆಗಿದ್ದವು. ಆ ಮೂಲಕ ಅವರು ನಂ.1 ಸ್ಥಾನ ಕಾಪಾಡಿಕೊಂಡಿದ್ದರು. 2024ರಲ್ಲಿ ಅಜಯ್​ ದೇವಗನ್​ ಮತ್ತು ಶಾರುಖ್​ ಖಾನ್​ ಅವರಿಗೆ ಅಗ್ರಸ್ಥಾನ ಸಿಕ್ಕಿದೆ. ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳ ಪೈಕಿ ಈ ಬಾರಿ ವೀರೇಂದ್ರ ಸೆಹ್ವಾಗ್​ ಅವರು ನಂಬರ್​ 1 ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಹಾರ್ದಿಕ್​ ಪಾಂಡ್ಯ ಇದ್ದಾರೆ. ಕಳೆದ ವರ್ಷ ವಿರಾಟ್​ ಕೊಹ್ಲಿ ಅವರು ಮೊದಲ ಸ್ಥಾನದಲ್ಲಿದ್ದರು ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ