AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳಿಗಾಗಿ ಮತ್ತೆ ಡಾನ್​ ಆಗ್ತಾರೆ ಶಾರುಖ್​ ಖಾನ್​; ಯಾವುದು ಈ ಸಿನಿಮಾ?

ಮಕ್ಕಳಿಗೆ ಚಿತ್ರರಂಗದಲ್ಲಿ ಸರಿಯಾದ ಭವಿಷ್ಯ ರೂಪಿಸಿಕೊಡಬೇಕು ಎಂದು ಶಾರುಖ್​ ಖಾನ್​ ಪ್ರಯತ್ನಿಸುತ್ತಿದ್ದಾರೆ. ಶಾರುಖ್​ ಪುತ್ರಿ ಸುಹಾನಾ ಖಾನ್​ ಅವರು ದೊಡ್ಡ ಪರದೆಯಲ್ಲಿ ಮಿಂಚಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅವರು ನಟಿಸಲಿರುವ ‘ಕಿಂಗ್​’ ಸಿನಿಮಾ ಕುರಿತಂತೆ ಅಚ್ಚರಿಯ ಮಾಹಿತಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಕೂಡ ಇರಲಿದ್ದಾರೆ.

ಮಗಳಿಗಾಗಿ ಮತ್ತೆ ಡಾನ್​ ಆಗ್ತಾರೆ ಶಾರುಖ್​ ಖಾನ್​; ಯಾವುದು ಈ ಸಿನಿಮಾ?
ಶಾರುಖ್​ ಖಾನ್​, ಸುಹಾನಾ ಖಾನ್​
ಮದನ್​ ಕುಮಾರ್​
|

Updated on: Apr 23, 2024 | 10:51 PM

Share

ಬಾಲಿವುಡ್​ನಲ್ಲಿ ಅಮಿತಾಭ್​ ಬಚ್ಚನ್​ ಅವರ ಬಳಿಕ ಡಾನ್​ (Don) ಪಾತ್ರ ಮಾಡಿ ಸೈ ಎನಿಸಿಕೊಂಡವರು ಶಾರುಖ್​ ಖಾನ್​. ಆದರೆ ಕೆಲವು ತಿಂಗಳ ಹಿಂದೆ ‘ಡಾನ್​ 3’ ಸಿನಿಮಾ ಘೋಷಣೆ ಆದಾಗ ಅಭಿಮಾನಿಗಳಿಗೆ ಬೇಸರ ಆಗಿತ್ತು. ಯಾಕೆಂದರೆ, ಆ ಸಿನಿಮಾದಲ್ಲಿ ಶಾರುಖ್​ ಖಾನ್​ (Shah Rukh Khan) ನಟಿಸುತ್ತಿಲ್ಲ. ಅವರ ಬದಲು ರಣವೀರ್ ಸಿಂಗ್​ಗೆ ಡಾನ್​ ಪಾತ್ರ ನೀಡಲಾಗಿದೆ. ಹಾಗಂತ ಶಾರುಖ್​ ಫ್ಯಾನ್ಸ್​ ಹೆಚ್ಚು ಚಿಂತೆ ಮಾಡುವ ಅಗತ್ಯ ಇಲ್ಲ. ಬೇರೊಂದು ಸಿನಿಮಾದಲ್ಲಿ ಶಾರುಖ್​ ಖಾನ್​ ಅವರು ಮತ್ತೆ ಡಾನ್​ ಪಾತ್ರ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ. ಅಂದಹಾಗೆ, ಶಾರುಖ್​ ಖಾನ್​ ಅವರು ಈ ಬಾರಿ ಡಾನ್​ ಆಗುತ್ತಿರುವುದು ಪುತ್ರಿ ಸುಹಾನಾ ಖಾನ್​ (Suhana Khan) ಸಲುವಾಗಿ.

ಈಗಾಗಲೇ ತಿಳಿದಿರುವಂತೆ ಶಾರುಖ್​ ಖಾನ್​ ಅವರ ಮಗಳು ಸುಹಾನಾ ಖಾನ್​ ‘ಕಿಂಗ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾಗೆ ಸ್ವತಃ ಶಾರುಖ್​ ಖಾನ್​ ಬಂಡವಾಳ ಹೂಡುತ್ತಿದ್ದಾರೆ. ಅಲ್ಲದೇ, ಒಂದು ಪ್ರಮುಖ ಪಾತ್ರ ಕೂಡ ಮಾಡಲಿದ್ದಾರೆ. ಅದು ಡಾನ್​ ಪಾತ್ರ ಆಗಿರಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆ ಮೂಲಕ ಅಭಿಮಾನಿಗಳಿಗೆ ಕೌತಕ ಹೆಚ್ಚುವಂತಾಗಿದೆ.

ಇದನ್ನೂ ಓದಿ:  ನಕಲಿ ಶಾರುಖ್​ನ ಕರೆಸಿ ಚುನಾವಣಾ ಪ್ರಚಾರ ಮಾಡಿಸಿದ ಪ್ರಣಿತಿ ಶಿಂಧೆ; ವಿಡಿಯೋ ವೈರಲ್​

‘ಕಿಂಗ್​’ ಸಿನಿಮಾದಲ್ಲಿ ಶಾರುಖ್​ ಖಾನ್​ ಮಾಡಲಿರುವ ಡಾನ್​ ಪಾತ್ರಕ್ಕೆ ಸ್ವಲ್ಪ ನೆಗೆಟಿವ್​ ಶೇಡ್​ ಕೂಡ ಇರಲಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಬರೋಬ್ಬರಿ 200 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಆಗಲಿದೆ ಎಂದು ಇತ್ತೀಚೆಗಷ್ಟೇ ಸುದ್ದಿ ಕೇಳಿಬಂದಿತ್ತು. ಹೀಗೆ ಒಂದರ ಹಿಂದೊಂದು ಅಪ್​ಡೇಟ್​ಗಳು ಸಿಗುತ್ತಿವೆ. ಸುಜಯ್​ ಘೋಷ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: 10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​

ಸುಹಾನಾ ಖಾನ್​ ಅವರು ಈಗಾಗಲೇ ‘ದಿ ಆರ್ಚೀಸ್​’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಆದರೆ ಚಿತ್ರಮಂದಿರಗಳಲ್ಲಿ ಆ ಸಿನಿಮಾ ಬಿಡುಗಡೆ ಆಗಲಿಲ್ಲ. ಕೇವಲ ನೆಟ್​ಫ್ಲಿಕ್ಸ್​ ಮೂಲಕ ರಿಲೀಸ್​ ಆಯಿತು. ಸುಹಾನಾ ಖಾನ್​ ಅವರು ‘ಕಿಂಗ್​’ ಸಿನಿಮಾದ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಕಾರಣದಿಂದ ಶಾರುಖ್​ ಖಾನ್​ ಅವರು ಈ ಚಿತ್ರದ ಮೇಲೆ ವಿಶೇಷ ಗಮನ ಹರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More