Shah Rukh Khan: ಶಾರುಖ್ ಖಾನ್​ಗೆ ದಕ್ಷಿಣದ ಈ ಸ್ಟಾರ್ ಜೊತೆ ಊಟ ಮಾಡೋ ಆಸೆ

ಶಾರುಖ್ ಖಾನ್​ಗೆ ಮಲಯಾಳಂ ನಟ ಮೋಹನ್​ಲಾಲ್ ಬಗ್ಗೆ ವಿಶೇಷ ಗೌರವ ಇದೆ. ಇತ್ತೀಚೆಗೆ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ‘ಜಿಂದಾ ಬಂದಾ..’ ಹಾಡಿಗೆ ಮೋಹನ್​ಲಾಲ್ ಅವರು ಡ್ಯಾನ್ಸ್ ಮಾಡಿದ್ದರು. ಇದನ್ನು ಶಾರುಖ್ ಖಾನ್ ಅಭಿಮಾನಿ ಬಳಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

Shah Rukh Khan: ಶಾರುಖ್ ಖಾನ್​ಗೆ ದಕ್ಷಿಣದ ಈ ಸ್ಟಾರ್ ಜೊತೆ ಊಟ ಮಾಡೋ ಆಸೆ
ಶಾರುಖ್
Follow us
ರಾಜೇಶ್ ದುಗ್ಗುಮನೆ
|

Updated on: Apr 24, 2024 | 11:47 AM

ಶಾರುಖ್ ಖಾನ್ (Shah Rukh Khan) ಅವರಿಗೆ ದೊಡ್ಡ ಮಟ್ಟದ ಸ್ಟಾರ್​ಗಿರಿ ಇದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಕಳೆದ ವರ್ಷ ಅವರ ನಟನೆಯ ಮೂರು ಸಿನಿಮಾಗಳು ಬ್ಯಾಕ್​ ಟು ಬ್ಯಾಕ್ ರಿಲೀಸ್ ಆಗಿ ಗೆದ್ದಿವೆ. ಅವರ ಖ್ಯಾತಿ ಎಷ್ಟೇ ಹೆಚ್ಚಿದರೂ ಅವರು ಸಿಂಪಲ್ ಆಗಿರೋಕೆ ಪ್ರಯತ್ನಿಸುತ್ತಾರೆ. ದಕ್ಷಿಣದ ಈ ಸೂಪರ್​ ಸ್ಟಾರ್ ಜೊತೆ ಅವರಿಗೆ ಊಟ ಮಾಡೋ ಆಸೆ ಇದೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಶಾರುಖ್ ಖಾನ್​ಗೆ ಮಲಯಾಳಂ ನಟ ಮೋಹನ್​ಲಾಲ್ ಬಗ್ಗೆ ವಿಶೇಷ ಗೌರವ ಇದೆ. ಇತ್ತೀಚೆಗೆ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ‘ಜಿಂದಾ ಬಂದಾ..’ ಹಾಡಿಗೆ ಮೋಹನ್​ಲಾಲ್ ಅವರು ಡ್ಯಾನ್ಸ್ ಮಾಡಿದ್ದರು. ಇದನ್ನು ಶಾರುಖ್ ಖಾನ್ ಅಭಿಮಾನಿ ಬಳಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದಕ್ಕೆ ಶಾರುಖ್ ಖಾನ್ ಅವರು ಉತ್ತರಿಸಿದ್ದಾರೆ.

‘ಜಿಂದಾ ಬಂದಾ ಹಾಡಿಗೆ ಮೋಹನ್ ಲಾಲ್ ಅವರ ಎಲೆಕ್ಟ್ರಿಫೈ ಡ್ಯಾನ್ಸ್’ ಎಂದು ಶಾರುಖ್ ಖಾನ್ ಯೂನಿವರ್ಸ್ ಫ್ಯಾನ್ಸ್ ಕ್ಲಬ್ ಪೋಸ್ಟ್ ಒಂದನ್ನು ಹಂಚಿಕೊಂಡಿತ್ತು. ಇದಕ್ಕೆ ಶಾರುಖ್ ಖಾನ್ ಅವರು ಉತ್ತರ ನೀಡಿದ್ದಾರೆ. ‘ಈ ಹಾಡನ್ನು ಮತ್ತಷ್ಟು ವಿಶೇಷ ಮಾಡಿದ್ದಕ್ಕೆ ಮೋಹನ್​ಲಾಲ್ ಸರ್ ಅವರಿಗೆ ಧನ್ಯವಾದ’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ. ‘ನಿಮ್ಮ ಡ್ಯಾನ್ಸ್​ನ ಅರ್ಧದಷ್ಟು ನಾನು ಮಾಡಿದ್ದೇನೆ. ಮನೆಯಲ್ಲಿ ನಿಮ್ಮ ಜೊತೆ ಊಟ ಮಾಡಲು ಕಾಯುತ್ತಿದ್ದೇನೆ. ನೀವು ಒರಿಜಿನಲ್ ಗ್ಯಾಂಗ್​ಸ್ಟರ್ ಜಿಂದಾ ಬಂದಾ’ ಎಂದಿದ್ದಾರೆ ಶಾರುಖ್ ಖಾನ್.

ಇದನ್ನೂ ಓದಿ: ಶಾರುಖ್ ಖಾನ್ ಹೆಸರಿಗಷ್ಟೇ ಗ್ಲೋಬಲ್ ಸ್ಟಾರ್; ಅವರು ನಡೆದುಕೊಳ್ಳೋದು ಹೇಗೆ ನೋಡಿ

ಸದ್ಯ ಮೋಹನ್​ಲಾಲ್ ಅವರ ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗಿದೆ. ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಮೋಹನ್​ಲಾಲ್ ಅವರು ವಯಸ್ಸಲ್ಲಿ ಶಾರುಖ್ ಖಾನ್​ಗಿಂತ ಹಿರಿಯರು. ಹೀಗಾಗಿ, ಅವರ ಮೇಲೆ ಶಾರುಖ್ ಖಾನ್ ವಿಶೇಷ ಗೌರವ ತೋರಿಸುತ್ತಾರೆ. ಸದ್ಯ ಶಾರುಖ್ ಖಾನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್​ನ ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಅವರು ಹೊಸ ಸಿನಿಮಾ ಘೋಷಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್