ಶಾರುಖ್ ಖಾನ್ ಹೆಸರಿಗಷ್ಟೇ ಗ್ಲೋಬಲ್ ಸ್ಟಾರ್; ಅವರು ನಡೆದುಕೊಳ್ಳೋದು ಹೇಗೆ ನೋಡಿ

ಶಾರುಖ್ ಖಾನ್ ಅವರ ಮನೆಯ ಗೇಟ್ ತೆಗೆದೇ ಇತ್ತು. ಒಳಗೆ ಪಾರ್ಟಿ ನಡೆಯುತ್ತಿತ್ತು. ಅಲ್ಲಿದ್ದ ಸೆಕ್ಯುರಿಟಿಗಳು ಕಪಿಲ್ ಶರ್ಮಾ ಅವರನ್ನು ಒಳಗೆ ಬಿಟ್ಟರು. ಕಪಿಲ್ ಅವರನ್ನು ಶಾರುಖ್​ ಖಾನ್ ಆಮಂತ್ರಿಸಿರಬಹುದು ಎಂಬುದು ಭದ್ರತಾ ಸಿಬ್ಬಂದಿಯ ಆಲೋಚನೆ ಆಗಿತ್ತು. ಒಳಗೆ ಹೋದ ಬಳಿಕ ಶಾರುಖ್ ಖಾನ್ ಬಳಿ ಕ್ಷಮೇ ಕೇಳಿದರು ಕಪಿಲ್.

ಶಾರುಖ್ ಖಾನ್ ಹೆಸರಿಗಷ್ಟೇ ಗ್ಲೋಬಲ್ ಸ್ಟಾರ್; ಅವರು ನಡೆದುಕೊಳ್ಳೋದು ಹೇಗೆ ನೋಡಿ
ಶಾರುಖ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Apr 11, 2024 | 9:03 AM

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಅವರನ್ನು ಆರಾಧಿಸುವವರಿದ್ದಾರೆ. ಅವರು ದುಬೈ ಪ್ರವಾಸೋದ್ಯಮದ ಪ್ರಚಾರ ರಾಯಭಾರಿ ಕೂಡ ಹೌದು. ಗ್ಲೋಬಲ್ ಸ್ಟಾರ್ ಎನಿಸಿಕೊಂಡಿರೋ ಶಾರುಖ್ ಖಾನ್ ಅವರು ನಡೆದುಕೊಳ್ಳೋದು ಹೇಗೆ? ಈ ವಿಚಾರವನ್ನು ಕಪಿಲ್ ಶರ್ಮಾ ಅವರು ವಿಡಿಯೋ ಒಂದರಲ್ಲಿ ರಿವೀಲ್ ಮಾಡಿದ್ದರು. ನಿಜಕ್ಕೂ ಶಾರುಖ್ ಖಾನ್ ಹೇಗೆ ಎಂಬುದನ್ನು ಅವರು ವಿವರಿಸಿದ್ದರು. ಈ ವಿಡಿಯೋ ವೈರಲ್ ಆಗಿದೆ.

ಕಪಿಲ್ ಶರ್ಮಾ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ಹಲವು ಶೋಗಳ ಮೂಲಕ ಅವರು ಖ್ಯಾತಿ ಪಡೆದಿದ್ದಾರೆ. ಕಪಿಲ್ ಶರ್ಮಾ ಶೋಗೆ ಶಾರುಖ್ ಖಾನ್ ಅವರು ಸಿನಿಮಾ ಪ್ರಚಾರಕ್ಕೆ ಬಂದಿದ್ದಾರೆ. ಹೀಗಾಗಿ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಒಮ್ಮೆ ಕಪಿಲ್ ಅವರ ಸಂಬಂಧಿ ಒಬ್ಬರು ಅಮೆರಿಕದಿಂದ ಬಂದಿದ್ದರು. ಅವರು ಶಾರುಖ್ ಖಾನ್​ ಮನೆ ತೋರಿಸುವಂತೆ ಕೋರಿಕೊಂಡಿದ್ದರು. ಕಪಿಲ್ ಅವರು ಹುಮ್ಮಸ್ಸಿನಲ್ಲಿ ಶಾರುಖ್ ಖಾನ್ ಮನೆ ಬಳಿ ಹೋದರು.

ಅಚ್ಚರಿ ಎಂದರೆ ಶಾರುಖ್ ಖಾನ್ ಅವರ ಮನೆಯ ಗೇಟ್ ತೆಗೆದೇ ಇತ್ತು. ಒಳಗೆ ಪಾರ್ಟಿ ನಡೆಯುತ್ತಿತ್ತು. ಅಲ್ಲಿದ್ದ ಸೆಕ್ಯುರಿಟಿಗಳು ಕಪಿಲ್ ಶರ್ಮಾ ಅವರನ್ನು ಒಳಗೆ ಬಿಟ್ಟರು. ಕಪಿಲ್ ಅವರನ್ನು ಶಾರುಖ್​ ಖಾನ್ ಆಮಂತ್ರಿಸಿರಬಹುದು ಎಂಬುದು ಭದ್ರತಾ ಸಿಬ್ಬಂದಿಯ ಆಲೋಚನೆ ಆಗಿತ್ತು. ಒಳಗೆ ಹೋದ ಬಳಿಕ ಶಾರುಖ್ ಖಾನ್ ಬಳಿ ಕ್ಷಮೇ ಕೇಳಿದರು ಕಪಿಲ್. ‘ಮನೆಯ ಗೇಟ್ ತೆಗೆದಿತ್ತು. ಹೀಗಾಗಿ ನೇರವಾಗಿ ಮನೆ ಒಳಗೆ ಬಂದೆ’ ಎಂದರು ಕಪಿಲ್. ಇದಕ್ಕೆ ಉತ್ತರಿಸಿದ ಶಾರುಖ್, ‘ಬೆಡ್​ರೂಂಬ ಬಾಗಿಲು ತೆಗೆದಿದ್ದರೆ ಅಲ್ಲಿಗೇ ಬರ್ತೀರಾ’ ಎಂದು ಕೇಳಿ ನಕ್ಕಿದ್ದರಂತೆ. ಕರೆಯದೇ ಬಂದಿದ್ದಕ್ಕೆ ಕಪಿಲ್ ಬಗ್ಗೆ ಅವರಿಗೆ ಯಾವುದೇ ಬೇಸರ ಇರಲಿಲ್ಲ.

ಆಗಲೇ ಪಾರ್ಟಿಗೆ ಬಂದಿದ್ದ ಬಹುತೇಕ ಅತಿಥಿಗಳೆಲ್ಲ ತೆರೆಳಿದ್ದರು. ಕರೆಯದೇ ಇದ್ದರೂ ಬಂದ ಕಪಿಲ್ ಶರ್ಮಾ ಅವರನ್ನು ಶಾರುಖ್ ಪ್ರೀತಿಯಿಂದ ಸ್ವಾಗತಿಸಿ ಸತ್ಕರಿಸಿದರು. ಮೂರ್ನಾಲ್ಕು ಗಂಟೆ ಪಾರ್ಟಿ ಮಾಡಿದರು. ಮರಳಿ ಕಳುಹಿಸುವಾಗ ಶಾರುಖ್ ಮನೆಯ ಭದ್ರತಾ ಸಿಬ್ಬಂದಿ ಕಪಿಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಆಗ ಶಾರುಖ್ ಖಾನ್ ಅವರೇ ಫೋಟೋ ಕ್ಲಿಕ್ಕಿಸಿದ್ದರು ಅನ್ನೋದು ವಿಶೇಷ.

ಇದನ್ನೂ ಓದಿ: ಶಾರುಖ್ ಖಾನ್ ಮಗನೊಂದಿಗೆ ಐಶ್ವರ್ಯಾ ಮಗಳ ಮದುವೆ? ವೈರಲ್ ಫೋಟೋಗೆ ಫ್ಯಾನ್ಸ್ ಆಕ್ರೋಶ

ಶಾರುಖ್ ಖಾನ್ ಅವರು ತಮ್ಮ ಮನೆಗೆ ಬಂದ ಪ್ರತಿ ಕಲಾವಿದರನ್ನು ಇದೇ ರೀತಿಯಲ್ಲಿ ಸತ್ಕರಿಸುತ್ತಾರೆ. ಪಾರ್ಟಿಗೆ ಬಂದ ಪ್ರತಿಯೊಬ್ಬರನ್ನು ಕಾರಿನವರೆಗೆ ಹೋಗಿ ಬಿಟ್ಟು ಬರುತ್ತಾರೆ ಎಂದು ಈ ಮೊದಲು ಅನೇಕರು ಹೇಳಿದ್ದರು. ಅವರು ಗ್ಲೋಬಲ್ ಸ್ಟಾರ್ ಆದರು ಇಷ್ಟು ಸಿಂಪಲ್ ಆಗಿ ಇರೋಕೆ ಹೇಗೆ ಸಾಧ್ಯ ಅನ್ನೋದು ಅನೇಕರ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:02 am, Thu, 11 April 24