AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ಮಗನೊಂದಿಗೆ ಐಶ್ವರ್ಯಾ ಮಗಳ ಮದುವೆ? ವೈರಲ್ ಫೋಟೋಗೆ ಫ್ಯಾನ್ಸ್ ಆಕ್ರೋಶ

ಆರಾಧ್ಯಾ ಮತ್ತು ಆರ್ಯನ್ ಅವರ ಫೋಟೋಗಳನ್ನು ಬಳಕೆದಾರರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಆರಾಧ್ಯಾ ವಧುವಾಗಿ ಕಾಣಿಸಿಕೊಂಡರೆ, ಆರ್ಯನ್ ವರನಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ವೈರಲ್ ಫೋಟೋಗಳನ್ನು ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ.

ಶಾರುಖ್ ಖಾನ್ ಮಗನೊಂದಿಗೆ ಐಶ್ವರ್ಯಾ ಮಗಳ ಮದುವೆ? ವೈರಲ್ ಫೋಟೋಗೆ  ಫ್ಯಾನ್ಸ್ ಆಕ್ರೋಶ
ಆರ್ಯನ್-ಆರಾಧ್ಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 09, 2024 | 1:48 PM

Share

ಸೆಲೆಬ್ರಿಟಿಗಳು ಮತ್ತು ಅವರ ಕುಟುಂಬಗಳ ಫೋಟೋಗಳು ಮತ್ತು ವೀಡಿಯೊಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಈಗ ಒಂದು ಫೋಟೋ ವೈರಲ್ ಆಗಿದ್ದು, ಬಾಲಿವುಡ್​ ಕಿಂಗ್ ಖಾನ್ ಶಾರುಖ್ ಖಾನ್ ಅವರ ಹಿರಿಯ ಪುತ್ರ ಆರ್ಯನ್ ಖಾನ್ (Aryan Khan) ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್​ ಬಚ್ಚನ್ ಮೊಮ್ಮಗಳು ಆರಾಧ್ಯಾ ಬಚ್ಚನ್ ಕೆಲವು ಫೋಟೋಗಳು ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಆರ್ಯನ್ ಮತ್ತು ಆರಾಧ್ಯಾ ಮದುವೆಯಾಗುವುದನ್ನು ತೋರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ. ಫೋಟೋ ನೋಡಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರಿಬ್ಬರೂ ಮದುವೆ ಡ್ರೆಸ್​ನಲ್ಲಿ ಇರುವುದನ್ನು ನೋಡಿ ಹಲವರು ಕಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಆರಾಧ್ಯಾ ಮತ್ತು ಆರ್ಯನ್ ಅವರ ಫೋಟೋಗಳನ್ನು ಬಳಕೆದಾರರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಆರಾಧ್ಯಾ ವಧುವಾಗಿ ಕಾಣಿಸಿಕೊಂಡರೆ, ಆರ್ಯನ್ ವರನಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ವೈರಲ್ ಫೋಟೋಗಳನ್ನು ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಆರಾಧ್ಯಾ ಮತ್ತು ಬಿಗ್ ಬಿ ಕಾಣಿಸಿಕೊಂಡರೆ, ಇನ್ನೊಂದರಲ್ಲಿ ಆರ್ಯನ್ ಮತ್ತು ಆರಾಧ್ಯಾ ಕಾಣಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋಗೆ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ‘ಫೋಟೋ ಎಡಿಟ್ ಮಾಡಿದವರ ವಿರುದ್ಧ ಕೇಸು ದಾಖಲಿಸಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಇದು ಅತ್ಯಂತ ನಾಚಿಕೆಗೇಡಿನ ಕೃತ್ಯ’ ಎಂದು ಇನ್ನೂ ಕೆಲವರು ಕಮೆಂಟ್ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ, ನಟ ಅಭಿಷೇಕ್ ಬಚ್ಚನ್ ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಿದ್ದರು. ಆರಾಧ್ಯಾ ಅವರ ಆರೋಗ್ಯದ ಬಗ್ಗೆ ವದಂತಿಗಳನ್ನು ಹರಡಿದ್ದಕ್ಕಾಗಿ ಅಭಿಷೇಕ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಆರ್ಯನ್ ಖಾನ್ ಸುತ್ತಾಟ

ಆರ್ಯನ್ ಖಾನ್ ಜೀವನದಲ್ಲಿ ವಿದೇಶಿ ರೂಪದರ್ಶಿಯೊಬ್ಬರು ಪ್ರವೇಶಿಸಿದ್ದಾರೆ. ಆರ್ಯನ್ ಬ್ರೆಜಿಲಿಯನ್ ಮಾಡೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆ ಮಾಡೆಲ್ ಬೇರೆ ಯಾರೂ ಅಲ್ಲ ಲಾರಿಸಾ ಬೋನ್ಸಿ. ಅವರು ಬಾಲಿವುಡ್‌ನಲ್ಲಿಯೂ ಕೆಲಸ ಮಾಡಿದ್ದಾರೆ. ಇದಲ್ಲದೆ, ಲಾರಿಸಾ ಬೋನ್ಸಿ ಕೆಲವು ತೆಲುಗು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಇದನ್ನೂ ಓದಿ: ಈ ಹಾಟ್ ಚೆಲುವೆಯೇ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​ರ ಗರ್ಲ್​ಫ್ರೆಂಡ್

ಆರ್ಯನ್ ಖಾನ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ವಿಚಾರಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸದ್ಯ ಮೊದಲ ಸೀರೀಸ್ ನಿರ್ದೇಶನ ಮಾಡಲು ಸಜ್ಜಾಗುತ್ತಾರೆ. ಆರ್ಯನ್ ಖಾನ್‌ಗೆ ನಟನೆಯಲ್ಲಿ ಆಸಕ್ತಿ ಇಲ್ಲ ಎಂದು ಸ್ವತಃ ಶಾರುಖ್ ಖಾನ್ ಹೇಳಿದ್ದರು. ಅವರ ಗಮನ ನಿರ್ದೇಶನ ಕ್ಷೇತ್ರದಲ್ಲಿದೆ. ಶಾರುಖ್ ಖಾನ್ ಅವರಿಗೆ ಮಕ್ಕಳ ಮೇಲೆ ಸಾಕಷ್ಟು ಪ್ರೀತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ