‘ಮೈದಾನ್’ ಟ್ವಿಟರ್ ವಿಮರ್ಶೆ: ಫುಲ್ ಮಾರ್ಕ್ಸ್ ನೀಡಿದ ಅಜಯ್ ದೇವಗನ್ ಅಭಿಮಾನಿಗಳು
60ಕ್ಕೂ ಹೆಚ್ಚು ದೇಶಗಳಲ್ಲಿ, 1600ಕ್ಕೂ ಅಧಿಕ ಪರದೆಗಳಲ್ಲಿ ‘ಮೈದಾನ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಅವರು ಫುಟ್ಬಾಲ್ ಕೋಚ್ ಪಾತ್ರವನ್ನು ಮಾಡಿದ್ದಾರೆ. ಅಮಿತ್ ಶರ್ಮಾ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಗಜರಾಜ್ ರಾವ್, ಪ್ರಿಯಾಮಣಿ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ದಿನ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಬಾಲಿವುಡ್ನ ಸ್ಟಾರ್ ನಟ ಅಜಯ್ ದೇವಗನ್ (Ajay Devgn) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷ ಆರಂಭದಲ್ಲಿ ಅವರು ‘ಶೈತಾನ್’ ಸಿನಿಮಾದಿಂದ ಭರ್ಜರಿ ಗೆಲುವು ಕಂಡರು. ಈಗ ಅವರು ನಟಿಸಿರುವ ‘ಮೈದಾನ್’ ಸಿನಿಮಾ (Maidaan Movie) ಬಿಡುಗಡೆ ಆಗಿದೆ. ಇಂದು (ಏಪ್ರಿಲ್ 10) ದೇಶಾದ್ಯಂತ ಈ ಚಿತ್ರ ತೆರೆಕಂಡಿದೆ. ಮೊದಲ ದಿನ ಮೊದಲ ಶೋ ನೋಡಿದ ಅಭಿಮಾನಿಗಳು ‘ಮೈದಾನ್’ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ನೈಜ ಘಟನೆ ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಸಿನಿಮಾದ ಟ್ವಿಟರ್ ವಿಮರ್ಶೆ (Maidaan X Review) ಇಲ್ಲಿದೆ..
‘ಅಜಯ್ ದೇವಗನ್ ಅವರಿಂದ ಒಂದು ಬ್ರಿಲಿಯಂಟ್ ಸಿನಿಮಾ ಬಂದಿದೆ. ಮನ ಸೆಳೆಯುವಂತಹ ಒಂದು ಗಟ್ಟಿಯಾದ ಕಥಾಹಂದರ ಈ ಸಿನಿಮಾದಲ್ಲಿದೆ. ಈ ಚಿತ್ರವನ್ನು ಮಿಸ್ ಮಾಡಿಕೊಳ್ಳಬೇಡಿ’ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. ಇಂಥ ಪಾಸಿಟಿವ್ ವಿಮರ್ಶೆಗಳು ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ‘ಮೈದಾನ್’ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.
Another Brilliant film by Ajay Devgan, a captivating tale of resilience. This underdog story will have you cheering for victory, both on and off the field. Don’t miss it!
Must watch….. #AjayDevgn𓃵 pic.twitter.com/ENofdVZWBL
— Sonali Naik (@oneanonlysonali) April 8, 2024
ನಟನೆ ಮೂಲಕ ಅಜಯ್ ದೇವಗನ್ ಅವರು ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ‘ಅಜಯ್ ದೇವಗನ್ ಅವರ ನಟನೆಯನ್ನು ನೋಡಲು ಎಲ್ಲ ಸಿನಿಪ್ರೇಮಿಗಳು ಈ ಚಿತ್ರವನ್ನು ನೋಡಬೇಕು’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಸಿನಿಮಾ ಖಂಡಿತವಾಗಿ ಹಿಟ್ ಆಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
Excellent Direction Camerawork & Acting by each & every cast . @ajaydevgn as usual is great . Fantastic capture of the sports action , absolutely next level . #Maidaan is a must watch pic.twitter.com/Va3fdZO1ku
— Jitu Savlani (@JituSavlani) April 10, 2024
ಅಜಯ್ ದೇವಗನ್ ಅವರಿಗೆ ಈ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂದು ಅಭಿಮಾನಿಗಳು ಹಂಬಲ ವ್ಯಕ್ತಪಡಿಸಿದ್ದಾರೆ. ಅನೇಕರ ಮನಸ್ಸಿನಲ್ಲಿ ಕನಸನ್ನು ಬಿತ್ತುವ ಸಿನಿಮಾ ಇದು. ಕೆಲವರು ಇದನ್ನು ಸಿನಿಮ್ಯಾಟಿಕ್ ಮಾಸ್ಟರ್ ಪೀಸ್ ಎಂದು ಹೊಗಳಿದ್ದಾರೆ.
2024 will definitely be a year of Our Mass Maharaja @ajaydevgn !! #Maidaan marks Ajay Devgn’s Biggest overseas release to date, spanning over 60 countries, with screenings in more than 1300 locations & across 1600+ screens. #AjayDevgn#Maidaan #MaidaanOnEid pic.twitter.com/X9E4MdOxHD
— A SUPER ADIAN (@VKart60604) April 10, 2024
ನಾಳೆ (ಏಪ್ರಿಲ್ 11) ಅಕ್ಷಯ್ ಕುಮಾರ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ತೆರೆಕಾಣಲಿದ್ದು, ಪೈಪೋಟಿ ಜೋರಾಗಲಿದೆ.
ಅಕ್ಷಯ್ ಕುಮಾರ್ ಸಿನಿಮಾದ 14 ಸೆಕೆಂಡ್ ದೃಶ್ಯ ಬ್ಲರ್ ಮಾಡಲು ಸೂಚಿಸಿದ ಸೆನ್ಸಾರ್ ಮಂಡಳಿ
60ಕ್ಕೂ ಹೆಚ್ಚು ದೇಶಗಳಲ್ಲಿ, 1600ಕ್ಕೂ ಅಧಿಕ ಪರದೆಗಳಲ್ಲಿ ‘ಮೈದಾನ್’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಅವರು ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಪಾತ್ರವನ್ನು ನಿಭಾಯಿಸಿದ್ದಾರೆ. ಅಮಿತ್ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಪ್ರಿಯಾಮಣಿ, ಗಜರಾಜ್ ರಾವ್ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೊದಲ ದಿನ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.