ಆದಿತ್ಯ ರಾಯ್ ಕಪೂರ್ ಜೊತೆ ಬ್ರೇಕಪ್ ಮಾಡಿಕೊಂಡ ಅನನ್ಯಾ ಪಾಂಡೆ?

ಅನನ್ಯಾ ಪಾಂಡೆ ಅವರ ಸೋಶಿಯಲ್ ಮೀಡಿಯಾ ಈ ಪೋಸ್ಟ್ ಹಾಕಿದ ಬಳಿಕ ಆದಿತ್ಯ ಹಾಗೂ ಅವರ ಮಧ್ಯೆ ಇರುವ ಸಂಬಂಧ ಮುರಿದು ಬಿದ್ದಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಅನನ್ಯಾ ಮತ್ತು ಆದಿತ್ಯ ಅವರಿಗೆ ಮಾತ್ರ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ಗೊತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಆದಿತ್ಯ ರಾಯ್ ಕಪೂರ್ ಜೊತೆ ಬ್ರೇಕಪ್ ಮಾಡಿಕೊಂಡ ಅನನ್ಯಾ ಪಾಂಡೆ?
ಆದಿತ್ಯ-ಅನನ್ಯಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 10, 2024 | 11:51 AM

ನಟಿ ಅನನ್ಯಾ ಪಾಂಡೆ ಸಿನಿಮಾ ಮತ್ತು ವೈಯಕ್ತಿಕ ಜೀವನದ ಕಾರಣದಿಂದ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅನನ್ಯಾ ಅವರು ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇಬ್ಬರೂ ಕೂಡ ಹಲವೆಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಇವರಿಬ್ಬರು ಹಲವು ಬಾರಿ ವಿದೇಶ ಪ್ರವಾಸ ಕೂಡ ಮಾಡಿದ್ದಾರೆ. ಅಭಿಮಾನಿಗಳು ಕೂಡ ಈ ಜೋಡಿಯನ್ನು ನೋಡಿ ಸಖತ್ ಥ್ರಿಲ್ ಆಗಿದ್ದರು. ಇಬ್ಬರ ನಡುವೆ ಮದುವೆಯ ಮಾತುಕತೆಯೂ ನಡೆದಿತ್ತು ಎನ್ನಲಾಗಿದೆ. ಆದರೆ ಇದೀಗ ಆದಿತ್ಯ ಮತ್ತು ಅನನ್ಯಾ (Ananya Pandey) ಬ್ರೇಕಪ್ ಸುದ್ದಿ ಮುನ್ನೆಲೆಗೆ ಬರುತ್ತಿದೆ. ಇಬ್ಬರ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗಿದೆ.

ಅನನ್ಯಾ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಗೂಡಾರ್ಥದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಇದು ಇಬ್ಬರ ನಡುವಿನ ಬ್ರೇಕಪ್ ಸುದ್ದಿಗೆ ಉತ್ತೇಜನ ನೀಡಿದೆ. ಪೋಸ್ಟ್‌ನಲ್ಲಿ ತಮ್ಮ ಭಾವನೆಗಳನ್ನು ಅವರು ವ್ಯಕ್ತಪಡಿಸಿದ್ದಾರೆ. ‘ಅದು ನಿಜಕ್ಕೂ ನಿಮಗೆ ಸೇರಿದ್ದರೆ ಅದು ನಿಮ್ಮ ಬಳಿ ಮರಳಿ ಬರುತ್ತದೆ. ನೀವು ಎಲ್ಲವನ್ನೂ ನಿವಾಗಿಯೇ ಕಲಿಯಬೇಕು ಎನ್ನುವ ಪಾಠ ಮಾಡಲು ಅದು ನಿಮ್ಮನ್ನು ಬಿಟ್ಟು ಹೋಗುತ್ತದೆ. ಅದು ನಿಜವಾಗಿಯೂ ನಿಮ್ಮದಾಗಿದ್ದರೆ, ಅದು ನಿಮ್ಮ ಬಳಿಗೆ ಹಿಂತಿರುಗುತ್ತದೆ. ನೀವು ಅದನ್ನು ನಿಮ್ಮಿಂದ ದೂರ ತಳ್ಳಿದರೂ ಅದು ಮರಳಿ ಬರುತ್ತದೆ. ಕೆಲವು ವಸ್ತುಗಳು ತುಂಬಾ ಸುಂದರವಾಗಿರುತ್ತದೆ ಆದರೆ ಅವು ನಿಮ್ಮದಲ್ಲ’ ಎಂದು ಅವರು ಬರೆದಿರುವ ಸಾಲುಗಳನ್ನು ಹಂಚಿಕೊಂಡಿದ್ದಾರೆ.

ಅನನ್ಯಾ ಪಾಂಡೆ ಅವರ ಸೋಶಿಯಲ್ ಮೀಡಿಯಾ ಈ ಪೋಸ್ಟ್ ಹಾಕಿದ ಬಳಿಕ ಆದಿತ್ಯ ಹಾಗೂ ಅವರ ಮಧ್ಯೆ ಇರುವ ಸಂಬಂಧ ಮುರಿದು ಬಿದ್ದಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಅನನ್ಯಾ ಮತ್ತು ಆದಿತ್ಯ ಅವರಿಗೆ ಮಾತ್ರ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ಗೊತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಅನನ್ಯಾ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಅನನ್ಯಾ ಯಾವಾಗಲೂ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ನಟಿಯ ಪ್ರತಿ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್ ಮತ್ತು ಕಾಮೆಂಟ್‌ಗಳ ಸುರಿಮಳೆ ಸುರಿಸುತ್ತಾರೆ.

ಇದನ್ನೂ ಓದಿ: ಅನನ್ಯಾ ಪಾಂಡೆ ವಿಚಿತ್ರ ವೇಷದ ಹಿಂದಿದೆ ಒಳ್ಳೆಯ ಉದ್ದೇಶ; ವಿವರಿಸಿದ ನಟಿ

ಅನನ್ಯಾ ಪಾಂಡೆ ಅವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತ ಬೇಡಿಕೆ ಸೃಷ್ಟಿ ಆಗಿಲ್ಲ. ಚಂಕಿ ಪಾಂಡೆ ಮಗಳು ಎನ್ನುವ ಕಾರಣಕ್ಕೆ ಸುಲಭದಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ, ಅವರಿಗೆ ಈವರೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಆದಿತ್ಯ ರಾಯ್ ಕಪೂರ್ ಅವರು ಸಿನಿಮಾಗಳ ಜೊತೆ ವೆಬ್​ ಸೀರಿಸ್​ಗಳಲ್ಲಿ ನಟಿಸಿಯೂ ಫೇಮಸ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ