AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನನ್ಯಾ ಪಾಂಡೆ ವಿಚಿತ್ರ ವೇಷದ ಹಿಂದಿದೆ ಒಳ್ಳೆಯ ಉದ್ದೇಶ; ವಿವರಿಸಿದ ನಟಿ

ಅನನ್ಯಾ ಪಾಂಡೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಫೋಟೋಗಳು ವೈರಲ್​ ಆಗಿವೆ. ಮೂರೂವರೆ ಲಕ್ಷಕ್ಕೂ ಹೆಚ್ಚು ಮಂದಿ ಇವುಗಳನ್ನು ಲೈಕ್​ ಮಾಡಿದ್ದಾರೆ. ಎರಡೂವರೆ ಸಾವಿರಕ್ಕೂ ಅಧಿಕ ಜನರು ಕಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಈ ರೀತಿಯ ಪ್ರಯೋಗದ ಹಿಂದಿನ ಕಾರಣ ಏನು ಎಂಬುದನ್ನು ಅನನ್ಯಾ ಪಾಂಡೆ ವಿವರಿಸಿದ್ದಾರೆ.

ಅನನ್ಯಾ ಪಾಂಡೆ ವಿಚಿತ್ರ ವೇಷದ ಹಿಂದಿದೆ ಒಳ್ಳೆಯ ಉದ್ದೇಶ; ವಿವರಿಸಿದ ನಟಿ
ಅನನ್ಯಾ ಪಾಂಡೆ
ಮದನ್​ ಕುಮಾರ್​
|

Updated on: Feb 08, 2024 | 5:27 PM

Share

ನಟಿ ಅನನ್ಯಾ ಪಾಂಡೆ (Ananya Panday) ಅವರು ಸಾಮಾನ್ಯವಾಗಿ ಇಂಥ ವಿಚಿತ್ರ ಬಟ್ಟೆ ಧರಿಸುವವರಲ್ಲ. ಆದರೆ ಅಪರೂಪಕ್ಕೆ ಎಂಬಂತೆ ಅವರು ಈ ರೀತಿ ಕಾಣಿಸಿಕೊಂಡಿದ್ದಾರೆ. ಏರೋಪ್ಲೇನ್​ ಚಿಟ್ಟೆಯಂತೆ ಕಾಣುವ ಬಟ್ಟೆಯನ್ನು ಅನನ್ಯಾ ಪಾಂಡೆ ಧರಿಸಿದ್ದಾರೆ. ಅವರ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅನನ್ಯಾ ಪಾಂಡೆ ಅವರು ಹೀಗೆ ವಿಚಿತ್ರವಾಗಿರುವ ಬಟ್ಟೆ ಧರಿಸಲು ಕಾರಣ ಏನು? ಕೀಟಗಳ ಬಗ್ಗೆ ಇರುವ ಕಾಳಜಿ! ಪ್ಯಾರಿಸ್​ನಲ್ಲಿ ನಡೆದ ಫ್ಯಾಷನ್​ ಶೋನಲ್ಲಿ ಅನನ್ಯಾ ಪಾಂಡೆ ಅವರು ಈ ವಿಶೇಷ ವಿನ್ಯಾಸದ ಕಾಸ್ಟ್ಯೂಮ್​ ತೊಟ್ಟು ರ‍್ಯಾಂಪ್​ ವಾಕ್​ (Ramp Walk) ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ಅನನ್ಯಾ ಪಾಂಡೆ ಅವರು ಧರಿಸಿದ ಈ ಬಟ್ಟೆಯಲ್ಲಿ ಫ್ಯಾಷನ್​ ಡಿಸೈನರ್​ ರಾಹುಲ್​ ಮಿಶ್ರಾ ವಿನ್ಯಾಸ ಮಾಡಿದ್ದಾರೆ. ‘ನಮ್ಮೊಂದಿಗೆ ಪರಿಸರದಲ್ಲಿ ವಾಸಿಸುವ ಹಲವು ಜಾತಿಯ ಕೀಟಗಳು ಮತ್ತು ಸರೀಸೃಪಗಳೊಂದಿಗೆ ಜೀವನವನ್ನು ಹಂಚಿಕೊಳ್ಳುವ ಸೂಕ್ಷ್ಮ ವ್ಯತ್ಯಾಸಗಳತ್ತ ಗಮನ ಸೆಳೆಯುವ ರಾಹುಲ್​ ಮಿಶ್ರಾ ಅವರ ‘ಸೂಪರ್‌ ಹೀರೋಸ್’ ಸಂಗ್ರಹದ ಹಿಂದಿನ ಕಲ್ಪನೆಯು ಇಷ್ಟವಾಯಿತು. ಗ್ರಹದಲ್ಲಿ ನಮ್ಮ ಜೀವನವನ್ನು ನಿರ್ಮಿಸುವ ಅನ್ವೇಷಣೆಯಲ್ಲಿ, ನಾವು ಅವರ ಆವಾಸಸ್ಥಾನಗಳನ್ನು ಸ್ವಾಧೀನ ಮಾಡಿಸಿಕೊಂಡಿರಬಹುದು ಮತ್ತು ಅವುಗಳನ್ನು ಅಳಿವಿನಂಚಿಗೆ ತಳ್ಳಿರಬಹುದು’ ಎಂದು ಅನನ್ಯಾ ಪಾಂಡೆ ಅವರು ಪೋಸ್ಟ್ ಮಾಡಿದ್ದಾರೆ.

ಅನನ್ಯಾ ಪಾಂಡೆ ಸೋಶಿಯಲ್​ ಮೀಡಿಯಾ ಪೋಸ್ಟ್​:

ಸೋಶಿಯಲ್​ ಮೀಡಿಯಾದಲ್ಲಿ ಅನನ್ಯಾ ಪಾಂಡೆ ಹಂಚಿಕೊಂಡಿರುವ ಫೋಟೋಗಳು ವೈರಲ್​ ಆಗಿವೆ. ಮೂರೂವರೆ ಲಕ್ಷಕ್ಕೂ ಅಧಿಕ ಜನರ ಲೈಕ್​ ಮಾಡಿದ್ದಾರೆ. ಎರಡೂವರೆ ಸಾವಿರಕ್ಕೂ ಹೆಚ್ಚು ಕಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸಲಾಗಿದೆ. ಈ ರೀತಿಯ ಪ್ರಯೋಗಗಳ ಮೂಲಕ ಪ್ರಾಣಿ, ಪಕ್ಷಿ, ಕೀಟಗಳ ಬಗ್ಗೆ ಕಾಳಜಿ ಮೂಡಿಸುವ ಪ್ರಯತ್ನಕ್ಕೆ ಅನೇಕರು ಭೇಷ್​ ಎಂದಿದ್ದಾರೆ.

ಇದನ್ನೂ ಓದಿ: ಬಾಯ್​ಫ್ರೆಂಡ್ ಜೊತೆ ಲಂಡನ್ ಸುತ್ತಾಡಿದ ಅನನ್ಯಾ ಪಾಂಡೆ: ಯಾರು ಆ ಬಾಯ್​ಫ್ರೆಂಡ್?

ಬಾಲಿವುಡ್​ನಲ್ಲಿ ಅನನ್ಯಾ ಪಾಂಡೆ ಅವರು ನೆಲೆ ಕಂಡುಕೊಳ್ಳುತ್ತಿದ್ದಾರೆ. ಅಂದುಕೊಂಡ ಮಟ್ಟದಲ್ಲಿ ಅವರಿಗೆ ಇನ್ನೂ ಗೆಲವು ಸಿಕ್ಕಿಲ್ಲ. 2022ರಲ್ಲಿ ಬಿಡುಗಡೆಯಾದ ‘ಲೈಗರ್​’ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಜೊತೆ ಅನನ್ಯಾ ಪಾಂಡೆ ನಟಿಸಿದ್ದರು. ಆ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿತು. ಇನ್ನು, ಹಾಗಂತ ಅನನ್ಯಾ ಅವರಿಗೆ ಸಿಗುವ ಅವಕಾಶಗಳು ಕಡಿಮೆ ಆಗಿಲ್ಲ. ನೆಪೋಟಿಸಂ ಆರೋಪ ಇದ್ದರೂ ಕೂಡ ಅವರಿಗೆ ಹೊಸ ಹೊಸ ಆಫರ್​ಗಳು ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್